Drop


Thursday, October 29, 2015

ಭಾರತ ಈಗ ವಿಶ್ವದ 10ನೆ ಶ್ರೀಮಂತ ರಾಷ್ಟ್ರ (NWW REPORTS)

15 ವರ್ಷಗಳಲ್ಲಿ ಶೇ.211ಕ್ಕೇರಿದ ಸಂಪತ್ತು ,
ತಲಾದಾಯದಲ್ಲಿ ಭಾರತ ಬಡ ದೇಶ...!

----------------------------------
ವಾಷಿಂಗ್ಟನ್, ಅ.29- ಕಳೆದ 15 ವರ್ಷಗಳಲ್ಲಿ
ಭಾರತದ ಸಂಪತ್ತು ಶೇ.211ರಷ್ಟು
ಏರಿಕೆಯಾಗಿದ್ದು , ಪ್ರತಿ ಭಾರತೀಯನ
ವಾರ್ಷಿಕ ತಲಾದಾಯ 2,800 ಅಮೆರಿಕ ಡಾಲರ್ಗಳಾಗಿದೆ.
2000ದ ಸಾಲಿನಲ್ಲಿ ವಾರ್ಷಿಕ ತಲಾದಾಯ 900 ಡಾಲರ್
ಇದ್ದದ್ದು 2015ರಲ್ಲಿ ಅದರ ಗಾತ್ರ 2,800
ಡಾಲರ್ಗಳಾಗಿದ್ದು , ಭಾರತ ಈಗ ವಿಶ್ವದ 10ನೆ
ಶ್ರೀಮಂತ ರಾಷ್ಟ್ರವಾಗಿ
ಹೊರ ಹೊಮ್ಮಿದೆ.
ಆದರೆ ಇದು ವೈಯಕ್ತಿಕ ಆಸ್ತಿಯ ಒಟ್ಟು
ಮೊತ್ತವಾಗಿದೆ ಎಂದು ನ್ಯೂ
ವರ್ಲ್ಡ್ ವೆಲ್ತ್ (ಎನ್ಡಬ್ಲ್ಯುಡಬ್ಲ್ಯು) ವರದಿ
ತಿಳಿಸಿದೆ. ವೈಯಕ್ತಿಕ ಸೊತ್ತುಗಳು
ಎಂದರೆ ಖಾಸಗಿಯವರ ಹಿಡಿತದಲ್ಲಿರುವ
ಸಂಪತ್ತಿನ ಮೊತ್ತ. ಭಾರತ
ಮತ್ತು ಇಂಡೋನೇಷ್ಯಾ ದೇಶಗಳು ಜಗತ್ತಿನ 20
ಅತಿ ಶ್ರೀಮಂತ ರಾಷ್ಟ್ರಗಳ
ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ದೇಶಗಳು
ಹೊಂದಿರುವ ಅಗಾಧ
ಜನಸಂಖ್ಯೆಯ
ಹೊರತಾಗಿಯೂ ಈ ಸಾಧನೆಯಾಗಿದೆ.
ಆದರೆ, ತಲಾದಾಯದ ಲೆಕ್ಕಾಚಾರದಲ್ಲಿ ಮಾತ್ರ ಈ
ಎರಡೂ ರಾಷ್ಟ್ರಗಳು ಕಡು ಬಡತನದಲ್ಲಿವೆ ಎಂದು
ಎನ್ಡಬ್ಲ್ಯುಡಬ್ಲ್ಯು ವರದಿ ಹೇಳಿದೆ.
ತಲಾದಾಯವನ್ನು ಲೆಕ್ಕ ಹಾಕಿದರೆ ಭಾರತ 20
ಶ್ರೀಮಂತ ರಾಷ್ಟ್ರಗಳ
ಕೊನೆ ಸಾಲಿನಲ್ಲಿ ಬರುತ್ತದೆ. ನ್ಯೂ
ವರ್ಲ್ಡ್ ವೆಲ್ತ್ ನಡೆಸಿದ ಸಮೀಕ್ಷೆಯ
ಪ್ರಕಾರ, ಸಾಧನೆಯ ಹೊರತಾಗಿಯೂ
ಬಡತನದಲ್ಲಿದ್ದರೆ, ಸ್ವಿಟ್ಜರ್ಲ್ಯಾಂಡ್
ತನ್ನ ತಲಾದಾಯದಲ್ಲಿ ಅಗ್ರ ಸ್ಥಾನ ಪಡೆದಿದ್ದು ,
ಸ್ವಿಡ್ಜರ್ಲ್ಯಾಂಡಿಗರ ತಲಾದಾಯ ಎಲ್ಲಾ
ರಾಷ್ಟ್ರಗಳಿಗಿಂತ
ಅತ್ಯಧಿಕವಾಗಿದೆಯಂತೆ. ಅವರ ತಲಾದಾಯ
2,85,100 ಡಾಲರ್ಗಳು! ಎರಡನೆ ಸ್ಥಾನದಲ್ಲಿ
ಆಸ್ಟ್ರೇಲಿಯಾ ಇದ್ದು , ಆಸ್ಟ್ರೇಲಿಯನ್ನರ
ತಲಾದಾಯ, 2,04,400 ಡಾಲರ್ಗಳು, ಇನ್ನು ಮೂರು
ಮತ್ತು ನಾಲ್ಕನೆ ಸ್ಥಾನದಲ್ಲಿ ಅಮೆರಿಕ ಮತ್ತು
ಬ್ರಿಟನ್ ದೇಶಗಳು ಬರುತ್ತವೆ. ಅಮೆರಿಕನ್ನರು,
ಬ್ರಿಟನ್ನರ ತಲಾದಾಯ ಕ್ರಮವಾಗಿ, 1,50,600 ಹಾಗೂ
1,47,600 ಡಾಲರ್.
ವೇಗದ ನಗರ ಪುಣೆ:
ಮಹಾರಾಷ್ಟ್ರದ ಪುಣೆ ಅತಿ ವೇಗವಾಗಿ ಬೆಳೆಯುತ್ತಿರುವ
ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ ಎನ್ನುತ್ತದೆ
ನ್ಯೂ ವರ್ಲ್ಡ್ ವೆಲ್ತ್ ವರದಿ. ಇಲ್ಲಿ ಅತಿ ಹೆಚ್ಚು
ಸಂಖ್ಯೆಯ ಕೋಟ್ಯಾಧೀಶರಿದ್ದಾರೆ.
ಏಷಿಯಾ ಫೆಸಿಫಿಕ್ನ 20 ಇಂತಹ ನಗರಗಳಲ್ಲಿ
ಭಾರತದ್ದೇ 7 ನಗರಗಳಿವೆಯಂತೆ.
2004-2014ರ ಮಧ್ಯೆ ಪುಣೆ ನಗರ ಶೇ.317ರ
ಆರ್ಥಿಕ ಬೆಳವಣಿಗೆ ಸಾಧಿಸಿದೆ. ಇದೇ ವೇಳೆ
ಇಂಡೋನೇಷ್ಯಾದ ಜಕಾರ್ತಾ ಶೇ.396
ಬೆಳವಣಿಗೆಯಾಗಿದ್ದರೆ, ವಿಯೆಟ್ನಾಂನ
ಹೊಚಿ ಮಿನ್ಹ್ ನಗರ ಶೇ.400ರಷ್ಟು
ಅಭಿವೃದ್ಧಿ ಹೊಂದಿದೆ.
ದೆಹಲಿಯಲ್ಲಿಯೂ ಕೂಡ
ಶ್ರೀಮಂತರ ಸಂಖ್ಯೆ
ವೇಗದಲ್ಲಿ ಹೆಚ್ಚಿದೆ. 2004ರಲ್ಲಿ 840
ಮಂದಿ ಬಹು ಕೋಟ್ಯಾಧೀಶರಿದ್ದರೆ,
2014ರ ವೇಳೆಗೆ ಅವರ ಸಂಖ್ಯೆ
1,350ಕ್ಕೇರಿದೆ. ಅಭಿವೃದ್ಧಿ ದರ ಶೇ.214ರಷ್ಟು
ಎಂದು ಸಮೀಕ್ಷೆ ಹೇಳಿದೆ.