ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

ಬೆಂಗಳೂರು, ಅ.6- ವಿಶ್ವಸಂಸ್ಥೆಯು
ಪ್ರತಿ ವರ್ಷ 11ನೆ ಅಕ್ಟೋಬರ್ಅನ್ನು
ಅಂತಾರಾಷ್ಟ್ರೀಯ ಹೆಣ್ಣು
ಮಗುವಿನ ದಿನವನ್ನಾಗಿ ಆಚರಿಸುತ್ತದೆ.
ವಿಶ್ವದಲ್ಲಿ ಹೆಣ್ಣು ಮಕ್ಕಳ
ಹಕ್ಕುಗಳನ್ನು ಗುರುತಿಸುವುದು
ಹಾಗೂ ಅವರು
ಎದುರಿಸುತ್ತಿರುವಂತಹ ವಿಶೇಷ
ಸವಾಲುಗಳ ಬಗ್ಗೆ ಜನರಲ್ಲಿ ಅರಿವು
ಮೂಡಿಸುವುದು ಈ ದಿನದ ಆಚರಣೆಯ
ಪ್ರಮುಖ ಉದ್ದೇಶವಾಗಿದೆ.
ಕಿಶೋರಾವಸ್ಥೆಯಲ್ಲಿ ಹೆಣ್ಣು
ಮಕ್ಕಳನ್ನು ಸಬಲಗೊಳಿಸುವುದು
ಹಾಗೂ ಈ ವಿಷಯಗಳಿಗೆ
ಪ್ರಾಮುಖ್ಯತೆ ನೀಡುವುದು
ಹಾಗೂ ಹೆಣ್ಣು ಮಕ್ಕಳು
ಅನುಭವಿಸುವಂತಹ ವಿವಿಧ ಸ್ವರೂಪಗಳ
ದೌರ್ಜನ್ಯ ತಡೆಗಟ್ಟಲು ಹಾಗೂ
ನಿರ್ಮೂಲನೆಗೊಳಿಸಲು,
ಅಂತಾರಾಷ್ಟ್ರೀಯ ಹೆಣ್ಣು
ಮಗುವಿನ ದಿನ, ಹೆಣ್ಣು ಮಕ್ಕಳಿಗೆ ಹೆಚ್ಚಿನ
ಅವಕಾಶಗಳು ಒದಗುವುದನ್ನು
ಬೆಂಬಲಿಸುತ್ತದೆ ಹಾಗೂ
ಜಗತ್ತಿನಾದ್ಯಂತ ಹೆಣ್ಣು ಮಕ್ಕಳು
ಎದುರಿಸುತ್ತಿರುವಂತಹ
ಅಸಮಾನತೆಯ ಬಗ್ಗೆ ಅರಿವನ್ನು
ಹೆಚ್ಚಿಸುವ ಪ್ರಯತ್ನವನ್ನು
ಮಾಡುತ್ತದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಚಿವ ಹೆಚ್. ಆಂಜನೇಯ ಮಾತನಾಡಿ,
ಹೆಚ್ಐವಿ ಸೋಂಕಿತರು ಹಾಗೂ
ಪೀಡಿತ ಮಕ್ಕಳಿಗಾಗಿ, ಸರ್ಕಾರದ
ವತಿಯಿಂದ ವಿಶೇಷ ಹಣ ವರ್ಗಾವಣೆ
ಯೋಜನೆಗಳ ಪರಿಚಯದ ಮೂಲಕ,
ಇಂತಹ ಮಕ್ಕಳ ಸಮಗ್ರ ಆರೈಕೆ ಹಾಗೂ
ಬೆಂಬಲಕ್ಕಾಗಿ ಸಮಗ್ರ
ಕಾರ್ಯಕ್ರಮಗಳನ್ನು
ವಿನ್ಯಾಸಪಡಿಸುವಲ್ಲಿ ಕರ್ನಾಟಕ
ಮುಂಚೂಣಿಯಲ್ಲಿದೆ ಎಂದರು.
ಇಂತಹ ಅಮೂಲ್ಯ ಮಕ್ಕಳನ್ನು
ಸಮುದಾಯ ವ್ಯಾಪ್ತಿಯೊಳಗೆ
ಉಳಿಸಿಕೊಳ್ಳಲು ಹಾಗೂ ನಮ್ಮ
ಸಮಾಜದ ಮುಖ್ಯಧಾರೆಯಲ್ಲಿ
ಅವರನ್ನು ಐಕ್ಯಗೊಳಿಸುವ
ಉದ್ದೇಶದೊಂದಿಗೆ, ಈ ಯಶಸ್ವಿ
ಕಾರ್ಯಕ್ರಮವನ್ನು, ಜಿಲ್ಲಾ ಪರಿಷತ್,
ಗ್ರಾಮ ಪಂಚಾಯ್ತಿ ಹಾಗೂ ಇತರೆ
ಸರ್ಕಾರೇತರ ಸಂಸ್ಥೆಗಳ
ಸಂಯೋಜನೆಯೊಂದಿಗೆ,
ಡಬ್ಲ್ಯೂಸಿಡಿ, ಕೆಎಸ್ಎಪಿಎಸ್, ಕೆಹೆಚ್ಪಿಟಿ
ವತಿಯಿಂದ
ಅನುಷ್ಠಾನಗೊಳಿಸಲಾಗುತ್ತಿದೆ
ಎಂದು ವಿವರಿಸಿದರು.
5-12 ವರ್ಷ ವಯೋಮಾನದ, ಹೆಚ್ಐವಿ-
ಪೀಡಿತ ಹೆಣ್ಣು ಮಕ್ಕಳ ಕಡೆ ಗಮನವಿರಿಸಿ,
ಅಂತರರಾಷ್ಟ್ರೀಯ ಹೆಣ್ಣು
ಮಗುವಿನ ದಿನಾಚರಣೆಯನ್ನು
ಆಚರಿಸಲು, ಏಡ್ಸ್ ಹೆಲ್ತ್ಕೇರ್
ಫೌಂಡೇಷನ್ ಇಂಡಿಯಾ ಕೇರ್ಸ್ೆ
ಹಾಗೂ ಕರ್ನಾಟಕ ಹೆಲ್ತ್
ಪ್ರಮೋಷನ್ ಟ್ರಸ್ಟ್ ಎಂಬ ವಿಶೇಷ
ಸಮಾರಂಭ ಆಯೋಜಿಸಿತ್ತು.
ರಾಜ್ಯಸಭಾ ಸದಸ್ಯ ಆಸ್ಕರ್
ಫರ್ನಾಂಡಿಸ್ ಮಾತನಾಡಿ, ಹೆಚ್ಐವಿ/
ಏಡ್ಸ್ನ ಸಂಸದರ ವೇದಿಕೆ. ಹೆಚ್ಐವಿ/ಏಡ್ಸ್
ಖಾಯಿಲೆ ನಿರ್ಮೂಲನೆಗೊಳಿಸುವ
ಗುರಿ ಮುಟ್ಟುವ ಕಡೆ ಬದ್ಧವಾಗಿದೆ
ಹಾಗೂ ಏಡ್ಸ್ ಮುಕ್ತ
ರಾಷ್ಟ್ರವನ್ನಾಗಿಸುವುದು ನಮ್ಮ
ಕೈಯಲ್ಲಿದೆ. ಚಿಕಿತ್ಸೆ ಪಡೆಯುವ ಅಥವಾ
ದೊರಯುವ ಪ್ರಮಾಣ ಇಂದಿಗೂ
ಸಾಧಾರಣ ಮಟ್ಟದಲ್ಲಿದೆ ಎಂದು
ಹೇಳಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023