ದೇಶದೆಲ್ಲೆಡೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ 111ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದ್ದೆ. ನಮ್ಮ ದೇಶದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಶಾಸ್ತ್ರಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ:


ವಾರಣಾಸಿಯ ರಾಮನಗರದಲ್ಲಿ ಅಕ್ಟೋಬರ್ 2,
1904ರಂದು ಜನಿಸಿದ ಲಾಲ್ ಬಹದ್ದೂರ್
ಶಾಸ್ತ್ರಿಯವರು ಜಾತಿ ಪದ್ಧತಿಯನ್ನು
ವಿರೋಧಿಸುತ್ತಿದ್ದರು. ಆದ್ದರಿಂದಲೇ ಅವರ
ಹೆಸರಿನ ಜತೆಗಿದ್ದ ಜಾತಿ ಸೂಚಕ ಹೆಸರನ್ನೂ ಅವರು
ತೆಗೆದು ಹಾಕಿದ್ದರು. ಶಾಸ್ತ್ರಿ ಎಂಬುದು ಅವರಿಗೆ
ಸಿಕ್ಕ ಬಿರುದು. ಕಾಶೀ
ವಿದ್ಯಾಪೀಠದಿಂದ ಪದವಿ
ಪಡೆದ ನಂತರ ಅವರಿಗೆ ಈ ಬಿರುದು
ಸಿಕ್ಕಿತ್ತು.
ಮಹಾತ್ಮಾ ಗಾಂಧಿಯ ಮೇಲೆ
ಶಾಸ್ತ್ರಿಯವರಿಗೆ ಅಗಾಧ ಗೌರವವಿತ್ತು. ಬಾಲ್ಯದ
ದಿನಗಳಲ್ಲಿ ಶಾಸ್ತ್ರಿಯವರು ಬಾಲ
ಗಂಗಾಧರ್ (ಲೋಕಮಾನ್ಯ) ತಿಲಕ್ ರ
ಆದರ್ಶಗಳಿಗೆ ಪ್ರಭಾವಿತರಾಗಿದ್ದರು.
1921ರಲ್ಲಿ ಅಸಹಕಾರ ಚಳುವಳಿಗೆ ಕೈ
ಜೋಡಿಸುವಂತೆ ಗಾಂಧಿ ಶಾಲಾ ಕಾಲೇಜುಗಳಿಗೆ
ಕರೆ ನೀಡಿದಾಗ, ಶಾಸ್ತ್ರೀ ಆ
ಆಂದೋಲನಕ್ಕೆ ಕೈ ಜೋಡಿಸಿದ್ದರು. ಈ ಮೂಲಕ
ಶಾಸ್ತ್ರಿ ಮೊದಲನೇ ಬಾರಿ
ಸ್ವಾತಂತ್ರ್ಯ ಸಂಗ್ರಾಮಕ್ಕೆ
ಧುಮುಕಿದ್ದರು.
ಅಸಹಕಾರ ಚಳುವಳಿಗೆ ಧುಮುಕಿದ
ಶಾಸ್ತ್ರಿಯವರವನ್ನು ಜೈಲಿಗಟ್ಟಲಾಗಿತ್ತು. ಆಗ
ಅವರ ವಯಸ್ಸು 17. ಅಪ್ರಾಪ್ತ ಎಂಬ
ಕಾರಣಕ್ಕೆ ಅವರನ್ನು ಜೈಲಿನಿಂದ ಮುಕ್ತ
ಗೊಳಿಸಲಾಗಿತ್ತು.
1930ರಲ್ಲಿ ಅಸಹಕಾರ ಚಳುವಳಿಯಲ್ಲಿ
ಭಾಗವಹಿಸಿದ ಶಾಸ್ತ್ರಿ ಎರಡೂವರೆ ವರ್ಷಗಳ ಕಾಲ
ಜೈಲು ಶಿಕ್ಷೆ ಅನುಭವಿ ಸಿದರು. ಜೈಲು ವಾಸದಲ್ಲಿ
ಅವರು ಪಾಶ್ಚಾತ್ಯ ತತ್ವಚಿಂತಕರು ಮತ್ತು
ಸಾಮಾಜಿಕ ಹೋರಾಟಗಾರರ ಬಗ್ಗೆ
ಅರಿತುಕೊಂಡರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ
ವೇಳೆ ಅಂದರೆ 190, 1941 ರಿಂದ
1946 ರಲ್ಲಿ ಒಟ್ಟು 9 ವರ್ಷಗಳ ಕಾಲ ಶಾಸ್ತ್ರಿ
ಜೈಲುವಾಸ ಅನುಭವಿಸಿದ್ದರು.
ಶಾಸ್ತ್ರಿಯವರು ವರದಕ್ಷಿಣೆಯ ವಿರುದ್ಧ ನಿಲುವು
ಹೊಂದಿದ್ದರೂ. ಆದರೂ
ವರದಕ್ಷಿಣೆ ಸ್ವೀಕರಿಸಲೇ ಬೇಕು
ಎಂದು ಮಾವ ಒತ್ತಾಯಿಸಿದಾಗ, ಅವರ
ಒತ್ತಾಯಕ್ಕೆ ಮಣಿದು ಖಾದಿ ಬಟ್ಟೆಯನ್ನು
ಸ್ವೀಕರಿಸಿದ್ದರು.
ಒಳ್ಳೆಯ ಓದುಗ ಮತ್ತು ಪುಸ್ತಕ ಪ್ರಿಯರಾಗಿದ್ದ
ಶಾಸ್ತ್ರಿ ಮೇಡಂ ಕ್ಯೂರಿ ಅವರ
ಆತ್ಮಕತೆಯನ್ನು ಹಿಂದೀ
ಭಾಷೆಗೆ ಅನುವಾದ ಮಾಡಿದ್ದಾರೆ.
ಹಳೇ ಮಾಡೆಲ್ ಕಾರು ಖರೀದಿಸಲು ಕೂಡಾ
ಶಾಸ್ತ್ರಿ ಸರ್ಕಾರದಿಂದ ಸಾಲ ಪಡೆದು
ಕಂತುಗಳ ಮೂಲಕ ಸಾಲ
ತೀರಿಸಿದ್ದರು.
ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ
ಮಹಿಳಾ ಕಂಡೆಕ್ಟರ್ ನ್ನು ನೇಮಕ ಮಾಡಿದ್ದೇ
ಶಾಸ್ತ್ರಿಯವರು. ಶಾಸ್ತ್ರಿಯವರು ಸಾರಿಗೆ
ಸಚಿವರಾಗಿದ್ದಾಗ ಅವರು ಮಾಡಿದ
ಮೊದಲ ಕೆಲಸ ಇದಾಗಿತ್ತು.
ಪೊಲೀಸ್ ಇಲಾಖೆಯ
ಸಚಿವರಾಗಿದ್ದಾಗ ಶಾಸ್ತ್ರಿಯವರು ಲಾಠಿ ಚಾರ್ಜ್
ಮಾಡುವ ಬದಲು ಜಲ ಫಿರಂಗಿ
ಬಳಸುವಂತೆ
ಪೊಲೀಸ್ ಇಲಾಖೆಗೆ
ಆದೇಶ ನೀಡಿದ್ದರು.
1952, 1957 ಮತ್ತು 1962ರಲ್ಲಿ ನಡೆದ
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್
ಜಯಭೇರಿ ಬಾರಿಸಲು ಕಾರಣವಾಗಿದ್ದು ಕೂಡಾ
ಶಾಸ್ತ್ರಿಯವರ ಸಹಾಯದಿಂದಲೇ.
2014 ರಲ್ಲಿ ಮಹಮ್ಮದ್ ಕೈಫ್ ಸ್ಪರ್ಧಿಸಿದ್ದ
ಫುಲ್ ಪುರ್ ಲೋಕಸಭಾ ಕ್ಷೇತ್ರ ಒಂದು
ಕಾಲದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ
ಪ್ರಭಾವಿತ ಕ್ಷೇತ್ರವಾಗಿತ್ತು.
1956ರಲ್ಲಿ ಮೆಹಬೂಬ್ ನಗರ್ ನಲ್ಲಿ ರೈಲ್ವೇ
ಅಪಘಾತ ನಡೆದಾಗ ರೈಲ್ವೇ ಸಚಿವರಾಗಿದ್ದ
ಶಾಸ್ತ್ರಿಯವರು ನೈತಿಕ ಹೊಣೆ
ಹೊತ್ತು ರಾಜೀನಾಮೆ
ನೀಡಿದ್ದರು.
ಭ್ರಷ್ಟಾಚಾರ ತಡೆಗಾಗಿ
ಸಮಿತಿಯೊಂದನ್ನು
ಮೊದಲ ಬಾರಿಗೆ ರೂಪಿಸಿದ
ಕೀರ್ತಿ ಶಾಸ್ತ್ರಿಯವರಿಗೆ ಸಲ್ಲುತ್ತದೆ.
ಕೇಂದ್ರ ಸಚಿವರಾಗಿದ್ದಾಗ ಶಾಸ್ತ್ರಿಯವರು
ಹೀಗೊಂದು
ಸಮಿತಿಯನ್ನು ರೂಪಿಸಿದ್ದರು .
ನೆಹರು
ತೀರಿಕೊಂಡಾಗ
ಇಂದಿರಾಗಾಂಧಿಯವರಿಗೆ ಪ್ರಧಾನಿ
ಹುದ್ದೆ ಸ್ವೀಕರಿಸುವಂತೆ
ಹೇಳಲಾಯಿತು. ಇಂದಿರಾ ಪ್ರಧಾನಿ
ಹುದ್ದೆಯನ್ನು ನಿರಾಕರಿಸಿದ ನಂತರವೇ
ಶಾಸ್ತ್ರಿಯವರನ್ನು ಪ್ರಧಾನಿಯನ್ನಾಗಿ
ಮಾಡಲಾಯಿತು.
ಪ್ರಧಾನಿ ಹುದ್ದೆ ಸ್ವೀಕರಿಸಿದ
ನಂತರ ಮೊದಲ ಬಾರಿ
ಮಾಡಿದ ಭಾಷಣದಲ್ಲಿ ಅವರು ಹೇಳಿದ್ದು...
ಪ್ರತಿಯೊಂದು ದೇಶವೂ
ಯಾವ ಪಥದಲ್ಲಿ ಸಂಚರಿಸಬೇಕು
ಎಂಬುದನ್ನು ಯೋಚಿಸುತ್ತದೆ. ಆದರೆ ನಮಗೆ
ಇದ್ಯಾವ ಸಮಸ್ಯೆಯೂ ಇರಲ್ಲ. ನಮಗೆ
ಯಾವ ಅಂಜಿಕೆಯೂ ಇರಲ್ಲ, ಎಡವೋ
ಬಲವೋ ಎಂದು ಚಿಂತಿಸಬೇಕಿಲ್ಲ .
ನಮ್ಮ ಹಾದಿ ನೇರ ಮತ್ತು ಸ್ಪಷ್ಟವಾಗಿದೆ.
ನಮ್ಮ ನಾಡಿನಲ್ಲಿ ಸ್ವತಂತ್ರರಾಗಿ ಬದುಕಿ,
ಪ್ರಜಾಪ್ರಭುತ್ವದ ಮೂಲಕ ಎಲ್ಲರ
ಏಳಿಗೆಯನ್ನು ಬಯಸೋಣ. ಹಾಗೂ ಇನ್ನಿತರ
ದೇಶಗಳ ಜತೆ ಶಾಂತಿ, ಸ್ನೇಹ
ಸಂಬಂಧವನ್ನು ಕಾಪಾಡೋಣ.
1965ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ
ಯುದ್ಧದ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಜೈ
ಜವಾನ್ , ಜೈ ಕಿಸಾನ್ ಎಂಬ ಘೋಷಣೆ ಕೂಗಿದರು.
1965ರಲ್ಲಿ ನಡೆದ ಯುದ್ಧದಲ್ಲಿ ಭಾರತ
ಜಯಭೇರಿ ಬಾರಿಸಿದಾಗ ಶಾಸ್ತ್ರಿಯವರ
ನಾಯಕತ್ವವನ್ನು ಜಗತ್ತೇ
ಕೊಂಡಾಡಿತು .
ಜನವರಿ 11, 1966 ಉಜ್ಬೇಕಿಸ್ತಾನದ
ತಾಷ್ಕೆಂಟ್ ನಲ್ಲಿ ಹೃದಯಾಘಾತದಿಂದ
ಶಾಸ್ತ್ರಿ ಮರಣವನ್ನಪ್ಪಿದ್ದರೂ ಈಗಲೂ ಅವರ
ಸಾವಿನ ಬಗ್ಗೆ ನಿಗೂಢತೆ ಇದೆ.
Posted by: Rashmi Kasaragodu |
Source: Online Desk

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023