ವಿಶ್ವದ ಟಾಪ್ ಪಟ್ಟಿಯಲ್ಲಿ ಭಾರತದ 17 ಶಿಕ್ಷಣ ಸಂಸ್ಥೆಗಳು
(PSGadyal Teacher Vijayapur )

ಲಂಡನ್(ಅ. 01): ವಿಶ್ವದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ 17 ಭಾರತೀಯ ಸಂಸ್ಥೆಗಳು ಸ್ಥಾನ ಪಡೆದಿವೆ. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್ ಟಾಪ್'ನಲ್ಲಿದೆ. ಇದು ವಿಶ್ವದ ಟಾಪ್ 300 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಶಿಕ್ಷಣ ಸಂಸ್ಥೆ ಎನಿಸಿದೆ.

ಟೈಮ್ಸ್ ಹೈಯರ್ ಎಜುಕೇಶನ್ ವೆಬ್'ಸೈಟ್ ವಿಶ್ವದ ಒಟ್ಟು 800 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಪಟ್ಟಿ ಮಾಡಿದೆ. ಟಾಪ್ 200 ಪಟ್ಟಿಯಲ್ಲಿ ಯಾವೊಂದು ಭಾರತೀಯ ಶಿಕ್ಷಣ ಸಂಸ್ಥೆಯೂ ಇಲ್ಲದಿರುವುದು ಗಮನಾರ್ಹ. ಆದರೆ, ಟಾಪ್-800 ಪಟ್ಟಿಯಲ್ಲಿ 17 ಭಾರತೀಯ ಸಂಸ್ಥೆಗಳು ಇರುವುದು ಇದೇ ಮೊದಲು.

ವಿಶ್ವದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ದಿ ಬೆಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವುದು ಅಮೆರಿಕದ ಕ್ಯಾಲಿಫೋರ್ನಿಯಾ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿ. ಟಾಪ್ 10 ಪಟ್ಟಿಯಲ್ಲಿ ಅಮೆರಿಕಕ್ಕೇ ಸೇರಿದ 7 ಸಂಸ್ಥೆಗಳಿವೆ. ಟಾಪ್ 800 ಪಟ್ಟಿಯಲ್ಲಿ ಅಮೆರಿಕದ 147 ಯೂನಿರ್ಸಿಟಿಗಳಿವೆ. ಯೂರೋಪ್ ಖಂಡದ 345 ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

ವಿಶ್ವದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದವು...

251-300 ಕೆಟಗರಿ:

ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್

351-400 ಕೆಟಗರಿ:

ಐಐಟಿ-ಬಾಂಬೆ

401-500 ಕೆಟಗರಿ:

ಐಐಟಿ-ದಿಲ್ಲಿ, ಐಐಟಿ-ಮದ್ರಾಸ್

501-600 ಕೆಟಗರಿ:

ಐಐಟಿ-ಗುವಾಹಟಿ,
ಐಐಟಿ-ಕಾನ್ಪುರ್,
ಐಐಟಿ-ರೂರ್ಕೀ,
ಜಾದವಪುರ್ ಯೂನಿವರ್ಸಿಟಿ,
ಪಂಜಾಬ್ ಯೂನಿವರ್ಸಿಟಿ

601-800 ಕೆಟಗರಿ:

ಆಲಿಗಢ್ ಮುಸ್ಲಿಂ ಯೂನಿವರ್ಸಿಟಿ,
ಅಮೃತಾ ಯೂನಿವರ್ಸಿಟಿ,
ಆಂಧ್ರ ಯೂನಿವರ್ಸಿಟಿ,
ಬಿರ್ಲಾ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್(ಬಿಟ್ಸ್ ಪಿಲಾನಿ),
ಕಲ್ಕತ್ತಾ ಯೂನಿವರ್ಸಿಟಿ,
ಡೆಲ್ಲಿ ಯೂನಿವರ್ಸಿಟಿ,
ಸಾವಿತ್ರಿಭಾಯ್ ಫುಲೆ ಪುಣೆ ಯೂನಿವರ್ಸಿಟಿ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023