Drop


Tuesday, October 27, 2015

ಮಧುಮೇಹಕ್ಕೆ 5 ರೂ. ಗಿಡಮೂಲಿಕೆ ಔಷಧ (ಬಿ.ಜಿ.ಆರ್-34):

ವೈಜ್ಞಾನಿಕವಾಗಿ ದೃಢೀಕೃತ ಔಷಧ
ಮಾರುಕಟ್ಟೆಗೆ
ಲಖನೌ: ಇಲ್ಲಿನ ವೈಜ್ಞಾನಿಕ ಹಾಗೂ ಕೈಗಾರಿಕಾ
ಸಂಶೋಧನಾ ಮಂಡಳಿ(ಸಿಎಸ್ಐಆರ್)ಯು
ಭಾನುವಾರ ವೈಜ್ಞಾನಿಕವಾಗಿ ಸಮ್ಮತವಾದ
ಸಕ್ಕರೆಕಾಯಿಲೆ ವಿರುದ್ಧ ಹೋರಾಡುವ ಗಿಡಮೂಲಿಕೆ ಔಷಧ
'ಬಿಜಿಆರ್-34'ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ಇದರ ದರ ಕೇವಲ 5 ರೂ. ಎಂಬುದು ಜನರಿಗೆ ಖುಷಿ
ಕೊಡುವ ವಿಷಯ.
ಇದು ನಾಲ್ಕು ಗಿಡಮೂಲಿಕೆಗಳಿಂದ ತಯಾರಾದ
ಆಯುರ್ವೇದಿಕ್ ಔಷಧವಾಗಿದ್ದು, ಯಾವುದೇ
ಅಡ್ಡಪರಿಣಾಮಗಳಿಲ್ಲ. 'ಬಿಜಿಆರ್-34' ಟೈಪ್ 2
ಡಯಾಬಿಟೀಸ್ ಮೆಲಿಟಸ್ ತಡೆಯುತ್ತದೆ
ಎಂದು ಸಿಎಸ್ಐಆರ್ ತಿಳಿಸಿದೆ.
ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಸುರಕ್ಷಿತ
ಹಾಗೂ ಪರಿಣಾಮಕಾರಿ ಎಂದು
ಸಾಬೀತಾಗಿದ್ದು, ಕ್ಲಿನಿಕಲ್ ಪ್ರಯೋಗಗಳಲ್ಲಿ
ಶೇ.67ರಷ್ಟು ಯಶಸ್ಸು ಕಂಡಿದೆ ಎಂದು
ಸಂಸ್ಥೆಯ ವೈದ್ಯ ಡಾ. ರಾವತ್ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಡಯಾಬಿಟೀಸ್ಗೆ
ಹಲವಾರು ಆಯುರ್ವೇದಿಕ್ ಔಷಗಳಿದ್ದರೂ
ವೈಜ್ಞಾನಿಕವಾಗಿ ಸಮ್ಮತವಾದದ್ದು 'ಬಿಜಿಆರ್-34'
ಮಾತ್ರ. ಮುಂದಿನ 15 ದಿನಗಳಲ್ಲಿ
ದೇಶಾದ್ಯಂತ ಮಾರುಕಟ್ಟೆಯಲ್ಲಿ
ದೊರೆಯಲಿದೆ.
ಮಾತ್ರೆಯೊಂದಕ್ಕೆ 5 ರೂ.
ಇರುತ್ತದೆ ಎನ್ನಲಾಗಿದೆ.
ನಿರೋಧಕ ಶಕ್ತಿ ವೃದ್ಧಿ
ಈ ಔಷಧ ಬಳಕೆಯಿಂದ ಶರೀರದ
ರೋಗ ನಿರೋಧಕ ಶಕ್ತಿ ವೃದ್ಧಿಸಲಿದೆ. ರಕ್ತದಲ್ಲಿನ
ಸಕ್ಕರೆ ಮಟ್ಟವನ್ನು ಒಂದೇ ಪ್ರಮಾಣದಲ್ಲಿ
ಕಾದುಕೊಳ್ಳಲು ಮೂಲಿಕೆ ಸಹಾಯ
ಮಾಡುವುದರ ಜತೆಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ
ಏರಿಳಿತದಿಂದ ಉಂಟಾಗುವ
ಅಡ್ಡಪರಿಣಾಮಗಳನ್ನು ತಡೆಯುತ್ತದೆ.