Drop


Friday, October 9, 2015

60 ಮಂದಿ ಗಣ್ಯರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ.

60 ಮಂದಿ ಗಣ್ಯರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ.
🌹GKPOINTS🌹

ಬೆಂಗಳೂರು, ಅ. 9 -ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ
ಸಲ್ಲಿಸಿದ 60 ಮಂದಿ ಗಣ್ಯರನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಸರ್ಕಾರ
ತೀರ್ಮಾನಿಸಿದೆ.

👉🏾ನವೆಂಬರ್ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು 2 ಸಮಿತಿಗಳನ್ನು ರಚಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿ
ರಚಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಸಲಹಾ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

👉🏾ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ
ಗ್ರಾಮೀಣ ಅಭಿವೃದ್ದಿ, ನಗರಾಭಿವೃದ್ಧಿ, ಕನ್ನಡ ಮತ್ತು
ಸಂಸ್ಕೃತಿ ಇಲಾಖೆ, ಇಂಧನ, ಜಲಸಂಪನ್ಮೂಲ ಹಾಗೂ ಗೃಹ
ಸಚಿವಾಲಯದ ಸದಸ್ಯರಿದ್ದಾರೆ. ಅಲ್ಲದೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು, ಕುವೆಂಪು
ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು, ಸಾಹಿತ್ಯ ಅಕಾಡೆಮಿ, ಸಂಗೀತ, ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ,
ಲಲಿತಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ನಾಟಕ ಅಕಾಡೆಮಿ ಹಾಗೂ ಕನ್ನಡ
ಸಾಹಿತ್ಯ ಪರಿಷತ್ ಅಧ್ಯಕ್ಷರುಗಳು ಸಮಿತಿಯ ಸದಸ್ಯರಾಗಿ ಕಾರ್ಯ
ನಿರ್ವಹಿಸಲಿದ್ದಾರೆ.
ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳು, ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ
ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪ್ರಶಸ್ತಿ ಸಲಹಾ ಸಮಿತಿಯಲ್ಲಿ
13 ಮಂದಿ ಸದಸ್ಯರು ಕಾರ್ಯ ನಿರ್ವಹಿಸಲಿದ್ದಾರೆ. ರಂಗಭೂಮಿ, ಸಂಸ್ಕೃತಿ ಚಿಂತಕ ಡಾ.ಕೆ.ಮರಳುಸಿದ್ದಪ್ಪ, ಜಾನಪದ ತಜ್ಞ ಡಾ.
ಇ.ಸಿ.ರಾಮಚಂದ್ರಗೌಡ, ಸಾಹಿತಿಗಳಾದ ಶಶಿಕಲಾ,
ವೀರಯ್ಯಸ್ವಾಮಿ, ಬಿ.ಎ.ಸನದಿ, ಸರಜು ಕಾಟ್ಕರ್,
ಅಲ್ಲಮಪ್ರಭು ಬೆಟ್ಟದೂರು, ಚಿತ್ರಕಲಾವಿದರಾದ ವಿ.ಜಿ.ಅಂದಾನಿ,
ನಾ.ದಾಮೋದರ ಶೆಟ್ಟಿ, ಲೇಖಕ ಕಾ.ತಾ.ಚಿಕ್ಕಣ್ಣ, ಕವಿ.ಕೆ.ಬಿ.ಸಿದ್ದಯ್ಯ,
ಸಂಗೀತ ಕಲಾವಿದೆ ಜಯದೇವಿ ಜಂಗಮಶೆಟ್ಟಿ,
ಪರಿಸರವಾದಿ ಸುರೇಶ್ ಹೆಬ್ಬಾಳ್ಕರ್ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಲೆ, ಸಾಹಿತ್ಯ, ಆಡಳಿತ, ಸಂಗೀತ, ನೃತ್ಯ,
ಕ್ರೀಡೆ, ರಂಗಭೂಮಿ, ಸಮಾಜಸೇವೆ, ಜಾನಪದ, ಪರಿಸರ, ಶಿಕ್ಷಣ, ವೈದ್ಯಕೀಯ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಗುರುತಿಸಿ ಪಟ್ಟಿ ಸಿದ್ಧಪಡಿಸಲು ಈ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಪ್ರಶಸ್ತಿಗಾಗಿ ಬಂದ ಅರ್ಜಿಗಳು ಹಾಗೂ ಶಿಫಾರಸುಗಳನ್ನು ಪರಿಶೀಲಿಸಿ ಈ ಸಮಿತಿಯು ಅರ್ಹರ ಪಟ್ಟಿಯನ್ನು ಸಂಕ್ಷಿಪ್ತಗೊಳಿಸಿ
ಮುಖ್ಯಮಂತ್ರಿ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಿದೆ. ಆ ಸಮಿತಿ 60 ಮಂದಿ ಗಣ್ಯರನ್ನು ಆಯ್ಕೆ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.