68ನೇ ವರ್ಷಾಚರಣೆ ಆಚರಿಸಲಿರುವ ಜಮ್ಮು- ಕಾಶ್ಮೀರ:-

ಶ್ರೀನಗರ: ಭಾರತ ಒಕ್ಕೂಟದ ಅವಿಭಾಜ್ಯ
ಅಂಗವಾಗಿ ಜಮ್ಮು-ಕಾಶ್ಮೀರ
ರಾಜ್ಯ ಸೇರ್ಪಡೆಗೊಂಡ 68ನೇ
ವರ್ಷಾಚರಣೆ, ನಾಡಿದ್ದು 27ನೇ
ತಾರೀಖಿನಂದು ನಡೆಯಲಿದ್ದು, ಈ
ಸಂಭ್ರಮಾಚರಣೆಗಾಗಿ ಅಂದು ರಾಜ್ಯದ
ಜನತೆ ತಮ್ಮ ಮನೆ-ಮನೆಗಳ ಮೇಲೆ ತ್ರಿವರ್ಣ
ಧ್ವಜವನ್ನು ಹಾರಿಸಬೇಕೆಂದು ಜಮ್ಮು ಮತ್ತು
ಕಾಶ್ಮೀರ ರಾಷ್ಟ್ರೀಯ
ಪ್ಯಾಂಥರ್ಸ್ ಪಕ್ಷ ಮನವಿ ಮಾಡಿದೆ.
ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಹರ್ಷ ದೇವ್
ಸಿಂಗ್ ಜಮ್ಮು ನಗರದಲ್ಲಿ ಮಾತನಾಡಿ, ಈ
ಸಂದರ್ಭದಲ್ಲಿ ರಾಷ್ಟ್ರದ ಹೆಮ್ಮೆ ಮತ್ತು
ಗೌರವಗಳನ್ನು ಎತ್ತಿ ಹಿಡಿಯುವ
ಪ್ರತೀಕವಾಗಿ ಜನತೆ
ಪಾಲ್ಗೊಳ್ಳಬೇಕೆಂದು ಮನವಿ
ಮಾಡಿದರು. 1947ರ ಅಕ್ಟೋಬರ್
27ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ
ಭಾರತದ ಗೌರ್ನರ್ ಜನರಲ್ ಆಗಿದ್ದ ಲಾರ್ಡ್
ಮೌಂಟ್ ಬ್ಯಾಟನ್ ಜಮ್ಮು
ಕಾಶ್ಮೀರವನ್ನು ಭಾರತ ಒಕ್ಕೂಟಕ್ಕೆ
ಸೇರಿಸಿಕೊಳ್ಳುವ ಒಪ್ಪಂದಕ್ಕೆ ಸಹಿ
ಹಾಕಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023