Friday, October 16, 2015

ವಿಶ್ವಸಂಸ್ಥೆಯ 70ನೇ ಸಾಮಾನ್ಯ ಸಭೆಗೆ ಭಾರತದ ಪ್ರತಿನಿಧಿಯಾಗಿ ಮುದ್ದಹನುಮೇಗೌಡ:


ತುಮಕೂರು.ಅ.16-ಅಮೆರಿಕಾದ ನ್ಯೂಯಾರ್ಕ್ನಲ್ಲಿ
ನಡೆಯಲಿರುವ ವಿಶ್ವಸಂಸ್ಥೆಯ 70ನೇ
ಸಾಮಾನ್ಯ ಸಭೆಗೆ ಪಾಲ್ಗೊಳ್ಳಲು
ಭಾರತದ ಪ್ರತಿನಿಧಿಯಾಗಿ ಕೇಂದ್ರದ
ವಿದೇಶಾಂಗ ಇಲಾಖೆಯು ತಮ್ಮನ್ನು
ನಿಯೋಜಿಸಿದ್ದು, ಅಕ್ಟೋಬರ್ 17 ರಿಂದ 2 ವಾರಗಳ
ಕಾಲ ನ್ಯೂಯಾರ್ಕ್ ಪ್ರವಾಸ
ಕೈಗೊಳ್ಳಲಿದ್ದೇನೆ ಎಂದು
ಸಂಸದ ಎಸ್.ಪಿ. ಮುದ್ದಹನುಮೇಗೌಡ
ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿ
ಸಭಾಂಗಣದಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ
ಅವರು,ನ್ಯೂಯಾರ್ಕ್ನಲ್ಲಿ ಅಕ್ಟೋಬರ್
19ರಿಂದ ವಿಶ್ವಸಂಸ್ಥೆ ಸಾಮಾನ್ಯ ಸಭೆ
ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸಲು ತಾವು,
ಭ್ರಾತೃಹರಿ ಮೆಹತಾಬ್,ಪಾಸ್ವಾನ್ ಸೇರಿ ಭಾರತದಿಂದ
ನಾಲ್ವರು ಪ್ರತಿನಿಧಿಗಳು
ತೆರಳಲಿದ್ದೇವೆ.ಸಂಸದರಾಗಿ ಆಯ್ಕೆ
ಮಾಡಿರುವುದರಿಂದ ಈ ಅವಕಾಶ ನನಗೆ
ದೊರೆತಿದ್ದು, ಜಿಲ್ಲೆಯ ಜನತೆಗ
ಅಭಾರಿಯಾಗಿದ್ದೇನೆ ಎಂದು ಭಾವಪೂರ್ಣವಾಗಿ
ಹೇಳಿದರು.
ಸುಮಾರು 183 ದೇಶಗಳು ಪ್ರತಿನಿಧಿಸಲಿರುವ ಈ
ಸಭೆಯಲ್ಲಿ ರಾಷ್ಟ್ರಕ್ಕೆ
ಸಂಬಂಧಿಸಿದಂತೆ ಪ್ರಸ್ತಾಪ ಮಾಡುವ
ವಿಷಯವನ್ನು ಭಾರತದ ರಾಯಭಾರಿ ಕಚೇರಿ
ನಿರ್ಣಯಿಸಲಿದೆ.ಪ್ರವಾಸದಿಂದ ಮರಳಿದ
ನಂತರ ಸಭೆಯಲ್ಲಿ ಚರ್ಚಿಸಿದ ಅಂಶಗಳ
ಬಗ್ಗೆ ಮಾಹಿತಿ ನೀಡುತ್ತೇನೆ ಎಂದು
ತಿಳಿಸಿದರು.