ಇಂದು ವಿಶ್ವ ಅಂಚೆ ದಿನ. ಅಕ್ಟೋಬರ್‌ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ.:

1874ರಲ್ಲಿ ಸ್ವಿಡ್ಚರ್‌ಲ್ಯಾಂಡ್‌ನ 'ವಿಶ್ವ ಅಂಚೆ ಒಕ್ಕೂಟ' ವಿಶ್ವ ಅಂಚೆ ದಿನವನ್ನು ಹುಟ್ಟುಹಾಕಿತ್ತು. 95 ವರ್ಷಗಳ ನಂತರ ಅಂದ್ರೆ, 1969ರಲ್ಲಿ, ಜಪಾನ್‌ನ ಟೋಕಿಯೋದಲ್ಲಿರೋ 'ವಿಶ್ವ ಅಂಚೆ ಒಕ್ಕೂಟ' ಅಂತರಾಷ್ಟ್ರೀಯ ಅಂಚೆ ದಿನವನ್ನು ಘೋಷಿಸಿತು. ಅದಕ್ಕೆ ಯುನೆಸ್ಕೋ ಕೂಡ ಸಾಥ್‌ ನೀಡ್ತು. ಹೀಗಾಗಿ ಈಗ ವಿಶ್ವದ ಸುಮಾರು 150 ರಾಷ್ಟ್ರಗಳಲ್ಲಿ ಪ್ರತಿ ವರ್ಷವೂ ವಿಶ್ವ ಅಂಚೆ ದಿನ ಆಚರಿಸಲಾಗುತ್ತಿದೆ.

ಅನಾದಿ ಕಾಲದಿಂದ ಜನರು ಸಂಪರ್ಕ ಸಾಧನವನ್ನಾಗಿ ಪತ್ರವ್ಯವಹಾರವನ್ನೇ ಅವಲಂಬಿಸಿದ್ರು. 4ಸಾವಿರ ವರ್ಷಗಳ ಹಿಂದೆ ಬ್ಯಾಬಿಲೋನಿಯಾದಲ್ಲಿ, ಅಕ್ಷರಗಳ ಅಚ್ಚುಮಾಡಿದ ಮಣ್ಣಿನ ಫಲಕಗಳನ್ನು ಸಂಪರ್ಕಕ್ಕಾಗಿ ಬಳಸಲಾಗಿತ್ತು. ಈಜಿಪ್ಟಿಯನ್ನರು ದೂತರ ಮೂಲಕ ಸುದ್ದಿ ಕಳಿಸುವ ವ್ಯವಸ್ಥೆ ತಂದ್ರು. ಅಲ್ಲಲ್ಲಿ ಪಾರಿವಾಳಗಳು ಹಾಗೂ ಅಶ್ವಾರೋಹಿಗಳ ಮೂಲಕ ಪತ್ರ ಕಳಿಸುವ ಪದ್ಧತಿಯೂ ಇತ್ತು. ಆದ್ರೆ, ಅವೆಲ್ಲ ಪತ್ರವ್ಯವಹಾರಕ್ಕೆ ಒಂದು ಪದ್ಧತಿ ನೀಡಿದ್ದು ಅಂಚೆ ವ್ಯವಸ್ಥೆ.

1688ರಲ್ಲಿ ಇಂಗ್ಲೆಂಡ್‌ನಲ್ಲಿ ಪೆನ್ನಿ ಪೋಸ್ಟ್ ವ್ಯವಸ್ಥೆ ಜಾರಿಯಲ್ಲಿತ್ತು. 1837ರ ವರ್ಷದಲ್ಲಿ ಸಾರ್ವಜನಿಕ ಅಂಚೆ ಪದ್ಧತಿ ಅಧಿಕೃತವಾಗಿ ಇಂಗ್ಲೆಂಡ್‌ನಲ್ಲಿ ಜಾರಿಗೆ ಬಂತು.. ಬ್ರೀಟೀಷರ ಮೂಲಕ 1766ರಲ್ಲಿಯೇ ನಮ್ಮ ದೇಶಕ್ಕೆ ಅಂಚೆ ವ್ಯವಸ್ಥೆ ಪರಿಚಿತಗೊಂಡಿದ್ರೂ, ಅಂಚೆ ಪದ್ಧತಿ ಜನಸಾಮಾನ್ಯರಿಗೆ ತಲುಪಲು ಪ್ರಾರಂಭವಾಗಿದ್ದು 1837ರಿಂದಲೇ. ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಅಂಚೆ ಪದ್ಧತಿ, ಮಾನವನ ಅಭಿವೃದ್ಧಿಗೆ ಸ್ಪಂದಿಸುತ್ತಾ.. ತಾನೂ ಅಭಿವೃದ್ಧಿಗೊಳ್ತಾ ಇದೆ. ಇಂದಿನ ನಮ್ಮ ಭಾರತೀಯ ಅಂಚೆ ವ್ಯವಸ್ಥೆಯಂತೂ ಯಾವ ರಾಷ್ಟ್ರೀಕೃತ ಬ್ಯಾಂಕ್‌ಗೂ ಕಡಿಮೆ ಇಲ್ಲ.

ವಿಶ್ವ ಅಂಚೆ ದಿನದಂದು, ಕೆಲವು ರಾಷ್ಟ್ರಗಳು ಸರ್ಕಾರಿ ರಜೆಯನ್ನೇ ಘೋಷಿಸಿವೆ. ಮತ್ತೆ ಹಲವು ದೇಶಗಳು ಈ ದಿನದಂದು ಹೊಸ ಹೊಸ ಅಂಚೆ ಯೋಜನೆಯನ್ನು ಪರಿಚಯಿಸುತ್ತವೆ. ವಿಶ್ವ ಅಂಚೆ ಒಕ್ಕೂಟ ಮತ್ತು ಯುನೆಸ್ಕೋ ಸಹಯೋಗದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ವಿಶ್ವ ಮಟ್ಟದಲ್ಲಿ ಏರ್ಪಡಿಸಲಾಗುತ್ತೆ. ಪ್ರತೀ ವರ್ಷವೂ,ಸ್ಪರ್ಧಾರ್ಥಿಗಳಿಗೆ ಬೇರೆ ಬೇರೆ ವಿಷಯ ನೀಡಲಾಗುತ್ತೆ.

ಏನೇ ಹೇಳಿ ನಮ್ಮ ಹಳೆಯ ನೆನಪುಗಳ ನಮ್ಮ ನಿಮ್ಮೆಲ್ಲರ ರಾಯಭಾರಿ ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ ಅಥವಾ 'ಪೋಸ್ಟ್ ಮ್ಯಾನ್' ಬರೇ ಒಂದು ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ ಅವನು ಪ್ರತಿ ಮನೆಯ ಅಂತರಂಗದ ಸದಸ್ಯ. ಎಸ್ಸೆಸ್ಸೆಲ್ಸಿ ಪಲಿತಾಂಶ  , ಹೆರಿಗೆ, ಮದುವೆ, ಕೋರ್ಟು ವಾರಂಟು, ಸಾವು, ರೋಗ, ರುಜಿನ ಎಲ್ಲವನ್ನೂ 'ನಿರಪೇಕ್ಷ ಯೋಗ'ದಲ್ಲಿ ಹಂಚಿಕೊಂಡು ಮನೆಯಿಂದ ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊಂಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾಂಡಲ್ಲಿಗೆ ಸಿಕ್ಕಿಸಿಕೊಂಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕಂಡು ಫಕ್ಕನೆ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನೆಂಟ. ಸಮಾಜದ ಒಳಬಾಳು ಅಂತ ಕರೀತೇವಲ್ಲ ಅಂಥ ಒಳಬಾಳಿನ ಚಲನಶೀಲ ಸದಸ್ಯ."

ಮಾನವನ ದಿನ ನಿತ್ಯ ಜೀವನದಲ್ಲಿ ಹಾಸು ಹೊಕ್ಕಿರುವ, ಅಂಚೆ ಪದ್ಧತಿ ಸಮಾಜದ ಸಾಥಿಯಾಗಿ ಎಂದರೆ ತಪ್ಪಾಗಲ್ಲ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023