Drop


Friday, October 16, 2015

ಆಫ್ರಿಕಾ ದ್ವೀಪ ರಾಷ್ಟ್ರದಿಂದ ದುರ್ಗೆ ಅಂಚೆಚೀಟಿ ಬಿಡುಗಡೆ:


ಕೋಲ್ಕತ್ತ (ಪಿಟಿಐ): ಭಾರತದ ನವರಾತ್ರಿ ಉತ್ಸವ ಹಾಗೂ
ದುರ್ಗಾ ಪೂಜೆ ಬಗೆಗಿನ ಆಸಕ್ತಿಯಿಂದ ಆಫ್ರಿಕಾದ
ದ್ವೀಪ ರಾಷ್ಟ್ರ ಸಾವೊ
ಟೊಮ್ ಮತ್ತು ಪ್ರಿನ್ಸಿಪ್,
ದುರ್ಗಾದೇವಿಯ ಚಿತ್ರವಿರುವ ವಿಶೇಷ
ಅಂಚೆಚೀಟಿ ಬಿಡುಗಡೆ ಮಾಡಿದೆ.
'ಮಕ್ಮಲ್ ಬಟ್ಟೆಯ ನುಣುಪು ಹಾಗೂ
ಹೊಳೆಯುವ ಗುಣಲಕ್ಷಣ
ಹೊಂದಿರುವ ಈ
ಅಂಚೆಚೀಟಿಯನ್ನು
ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ
ಮಾಡಲಾಗಿದೆ' ಎಂದು ನಾಣ್ಯ ಸಂಗ್ರಹಕಾರ
ಅಲೋಕ್ ಗೋಯಲ್ ತಿಳಿಸಿದ್ದಾರೆ.
'ಹುಲಿಯ ಮೇಲೆ ದುರ್ಗಾದೇವಿ ಕುಳಿತಿರುವ ಚಿತ್ರವನ್ನು
ಅಂಚೆಚೀಟಿ
ಹೊಂದಿದೆ. ದ್ವೀಪ
ರಾಷ್ಟ್ರದಲ್ಲಿ ಇದರ ಬೆಲೆ 86 ಸಾವಿರ ದೋಬ್ರ
(ಭಾರತದಲ್ಲಿ ₹260). ಕೇವಲ 1500 ಅಂಚೆ
ಚೀಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ
ಪೈಕಿ ಸಾವಿರ ಅಂಚೆಚೀಟಿಗಳು ಭಾರತದ
ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮಿಕ್ಕ 500
ಅಂಚೆ ಚೀಟಿಗಳು ದ್ವೀಪ
ರಾಷ್ಟ್ರದಲ್ಲಿಯೇ ಮಾರಾಟವಾಗಲಿದೆ' ಎಂದು
ಮಾಹಿತಿ ನೀಡಿದ್ದಾರೆ.