Drop


Wednesday, October 28, 2015

ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ


GKPOINTS

ಖಟ್ಮಂಡು : ನೇಪಾಳದ ಆಡಳಿತ ಪಕ್ಷ ಸಿ ಪಿ ಎನ್-ಯು ಎನ್ ಎಲ್ ನ ಉಪಾಧ್ಯಕ್ಷೆ ವಿದ್ಯಾ ದೇವಿ ಭಂಡಾರಿ
ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಚುನಾವಣೆಗಳಲ್ಲಿ ನೇಪಾಳದ ಕಾಂಗ್ರೆಸ್ ಅಭ್ಯರ್ಥಿ ಕೌಲ್ ಬಹದೂರ್ ಗುರಂಗ್ ಅವರನ್ನು ಬಂಢಾರಿ ಸೋಲಿಸಿದ್ದಾರೆ.

ನೇಪಾಳ ಸಂಸತ್ತಿನ ಸ್ಪೀಕರ್ ಅನ್ಸಾರಿ
ಘರ್ತಿ ಮಗರ್ ಅವರು ಈ ವಿಷಯವನ್ನು ಘೋಷಿಸಿದ್ದಾರೆ.
ಮಾಜಿ ಭದ್ರತಾ ಸಚಿವೆ ಭಂಡಾರಿ ಕ್ಯಾನ್ಸರ್ ರೋಗದಿಂದ ಪಾರಾಗಿದ್ದರು ಮತ್ತು ತಮ್ಮ ಪತಿ ಎಡ ಪಕ್ಷದ ನಾಯಕ ಮದನ್ ಭಂಡಾರಿ ಅವರನ್ನು ೧೯೯೧ರಲ್ಲಿ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದರು.

೨೦೦೮ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ರಾಮ್ ಬರಣ್ ಯಾದವ್
ಆವರನ್ನು ಬಂಢಾರಿ ಬದಲಿಸಲಿದ್ದಾರೆ.