Drop


Sunday, October 11, 2015

ಖಡ್ಗ ಪ್ರಸಾದ್ ಶರ್ಮಾ ಒಲಿ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆ

ಖಡ್ಗ ಪ್ರಸಾದ್ ಶರ್ಮಾ ಒಲಿ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆ.

★ GKPOINTS★

ಕಠ್ಮಂಡು: ಹೊಸ ಸಂವಿಧಾನದ ಮೂಲಕ ಹಿಂದೂ ರಾಜಪ್ರಭುತ್ವದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ
ಗಣರಾಜ್ಯವಾಗಿ ಹೊರಹೊಮ್ಮಿದ ನೇಪಾಳ ರಾಷ್ಟ್ರಕ್ಕೆ ನೂತನ ಪ್ರಧಾನಿಯಾಗಿ ಖಡ್ಗ ಪ್ರಸಾದ್
ಶರ್ಮಾ ಒಲಿ ಅವರು ಆಯ್ಕೆಯಾಗಿದ್ದಾರೆ.

★ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ಸಿಪಿಎನ್ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ಅವರಿಗೆ 598 ಸದಸ್ಯರ ಪೈಕಿ 338 ಮತಗಳು ದೊರಕಿದ್ದು, ನೇಪಾಳದ 38ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

★ನೇಪಾಳದ ಹಾಲಿ ಪ್ರಧಾನಿಯಾಗಿದ್ದ ಸುಶೀಲ್ ಕೊಯಿರಾಲಾ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶನಿವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ
ಬೆನ್ನಲ್ಲೇ, ಪ್ರಧಾನಿ ಆಯ್ಕೆಗೆ ಮತ್ತೆ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ
ಸಲ್ಲಿಸಿದ ಸುಶೀಲ್ ಕೊಯಿರಾಲಾ ಅವರಿಗೆ 249 ಮತಗಳು
ದೊರಕಿವೆ.

★ನೂತನ ಪ್ರಧಾನಿ ಒಲಿಗೆ ಮೋದಿ ಅಭಿನಂದನೆ ನೇಪಾಳದ 38ನೇ ಪ್ರಧಾನಿಯಾಗಿ ಒಲಿ ಅವರು
ಆಯ್ಕೆಯಾಗುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.