Drop


Wednesday, October 14, 2015

ಗೌರವಕ್ಕೆ ಪಾತ್ರರಾದ ಜಮೈಕಾದ ಮೊದಲ ಲೇಖಕ ಮರ್ಲಾನ್ ಜೇಮ್ಸ್ ಮಡಿಲಿಗೆ ‘ಬುಕರ್ ಪ್ರಶಸ್ತಿ-

ಲಂಡನ್ (ಪಿಟಿಐ): 2015ನೇ ಸಾಲಿನ
ಮ್ಯಾನ್ ಬುಕರ್
ಅಂತರರಾಷ್ಟ್ರೀಯ ಪ್ರಶಸ್ತಿಗೆ
ಜಮೈಕಾದ ಮರ್ಲಾನ್ ಜೇಮ್ಸ್
ಅವರು ಪಾತ್ರರಾಗಿದ್ದಾರೆ. ಈ
ಮೂಲಕ ಬ್ರಿಟನ್ನ ಈ ಪ್ರತಿಷ್ಠಿತ ಪ್ರಶಸ್ತಿಗೆ
ಭಾಜನರಾದ ಜಮೈಕಾದ ಮೊದಲ
ಲೇಖಕ ಎಂಬ ಹೆಗ್ಗಳಿಕೆ ಜೇಮ್ಸ್
ಅವರದಾಗಿದೆ.
ಜೇಮ್ಸ್ ಅವರ 'ಅ ಬ್ರೀಫ್ ಹಿಸ್ಟರಿ ಆಫ್
ಸೆವೆನ್ ಕಿಲ್ಲಿಂಗ್ಸ್' ಕೃತಿಗೆ ಈ ಪುರಸ್ಕಾರ
ಸಂದಿದೆ. ಅಂದಹಾಗೆ ಇದು ಜೇಮ್ಸ್
ಅವರ ಮೂರನೇ ಕೃತಿ.
ಭಾರತ ಮೂಲದ ಬ್ರಿಟಿಷ್ ಲೇಖಕ
ಸಂಜೀವ್ ಸಹೊತಾ ಹಾಗೂ ಇತರ
ನಾಲ್ಕು ಅಂತರರಾಷ್ಟ್ರೀಯ
ಲೇಖಕರ ಕೃತಿಗಳನ್ನು ಹಿಂದಿಕ್ಕಿ
ಜೇಮ್ಸ್ ಪ್ರಶಸ್ತಿ
ಒಲಿಸಿಕೊಂಡಿದ್ದಾರೆ. ಸಂಜೀವ್
ಅವರ 'ದ ಇಯರ್ ಆಫ್ ರುನಾವೇಸ್'
ಕೃತಿಯು ಬುಕರ್ ಪ್ರಶಸ್ತಿ
ಸ್ಪರ್ಧೆಯಲ್ಲಿತ್ತು.
'ಇದು ತುಂಬಾ ಅವಾಸ್ತವ. ನಾನು
ನಾಳೆ ಎದ್ದಾಗ ಇದೆಲ್ಲ ಕನಸು ಎಂದು
ಭಾಸವಾಗಬಹುದು ಎಂದೆನಿಸುತ್ತಿದೆ'
ಎಂದು 44 ವರ್ಷದ ಜೇಮ್ಸ್
ನುಡಿದಿದ್ದಾರೆ.
ಇದು 1970ರ ಬಾಬ್ ಮರ್ಲೆ ಅವರ ಹತ್ಯೆ
ಯತ್ನದ ಜೀವಂತ ಘಟನೆಯಿಂದ
ಪ್ರೇರೆಪಿತರಾಗಿ ರಚಿಸಿದ ಕೃತಿ. ರೆಗೇ
ಸಂಗೀತ ಮಾಧ್ಯಮದ ಮೂಲಕ
ಜಮೈಕಾದ ರಾಜಕೀಯವೂ 686
ಪುಟಗಳ ಬೃಹತ್ ಕೃತಿಯಲ್ಲಿ
ಚಿತ್ರತವಾಗಿದೆ.