Drop


Tuesday, October 6, 2015

ಪೋಪ್ಗಿಂತ ಮೋದಿ ಪವರ್ಫುಲ್!

ಮುಂಬೈ: ಅಮೆರಿಕ ಮೂಲದ
ಮಾಧ್ಯಮ ಸಂಸ್ಥೆ ಬ್ಲೂಮ್ಬರ್ಗ್
ವಿಶ್ವದ ಪ್ರಭಾವಿ ನಾಯಕರ
ಪಟ್ಟಿಯೊಂದನ್ನು
ತಯಾರಿಸಿದ್ದು, ಅದರಲ್ಲಿ ಪ್ರಧಾನಿ
ನರೇಂದ್ರ ಮೋದಿ ಅವರು ಇದೇ
ಮೊದಲ ಬಾರಿಗೆ ಸ್ಥಾನ
ಪಡೆದುಕೊಂಡಿದ್ದಾರೆ. 50 ವಿಶ್ವ
ನಾಯಕರ ಪಟ್ಟಿಯಲ್ಲಿ ಮೋದಿ
ಅವರು 13ನೇ ಸ್ಥಾನ ಪಡೆಯುವ
ಮೂಲಕ ಗಮನ ಸೆಳೆದಿದ್ದಾರೆ.
"ಬ್ಲೂಮ್ಬರ್ಗ್ ಮಾರುಕಟ್ಟೆಗಳ
ಅತ್ಯಂತ ಪ್ರಭಾವಿಗಳ' ಪಟ್ಟಿಯಲ್ಲಿ
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್
ಮುಖ್ಯಸ್ಥ ಜಾನೆಟ್ ಯೆಲ್ಲೆನ್,
ಚೀನಾ ಪ್ರಧಾನಿ ಕ್ಸಿ ಜಿನ್ಪಿಂಗ್, ಅಮೆರಿಕ
ಅಧ್ಯಕ್ಷ ಬರಾಕ್ ಒಬಾಮಾ, ಜರ್ಮನಿ
ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು
ಮೋದಿಗಿಂತ ಮುಂದಿದ್ದಾರೆ. ಆದರೆ
ಕ್ರೈಸ್ತರ ಪರಮೋಚ್ಚ ಧರ್ಮಗುರು
ಪೋಪ್ ಫ್ರಾನ್ಸಿಸ್ (31) ಅವರು
ಮೋದಿಗಿಂತ ಹಿಂದಿದ್ದಾರೆ.
50 ವಿಶ್ವ ನಾಯಕರ ಪಟ್ಟಿಯಲ್ಲಿ
ಮೋದಿ ಅವರನ್ನು ಹೊರತುಪಡಿಸಿ
ಸ್ಥಾನ ಪಡೆದಿರುವ ಮತ್ತೂಬ್ಬ
ಭಾರತೀಯ ರುಚಿರ್ ಶರ್ಮಾ.
ಮಾರ್ಗನ್ ಸ್ಟಾನ್ಲಿ ಹೂಡಿಕೆ ನಿರ್ವಹಣಾ
ಸಂಸ್ಥೆಯಲ್ಲಿ ಅಭಿವೃದ್ಧಿಶೀಲ
ಮಾರುಕಟ್ಟೆ ವಿಭಾಗದ
ಮುಖ್ಯಸ್ಥರಾಗಿರುವ 41 ವರ್ಷದ
ರುಚಿರ್ ಅವರು 50ನೇ
ಸ್ಥಾನದಲ್ಲಿದ್ದಾರೆ.
2014ರ ಲೋಕಸಭಾ
ಚುನಾವಣೆಯಲ್ಲಿ 30 ವರ್ಷಗಳಲ್ಲೇ
ಭಾರಿ ಅಂತರದಿಂದ ಗೆಲುವು ಸಾಧಿಸಿದ
ಮೋದಿ ಅವರು, ಹೂಡಿಕೆ ಸ್ನೇಹಿ
ಸುಧಾರಣೆಗಳನ್ನು ಜಾರಿಗೆ
ತರುತ್ತಿದ್ದಾರೆ. ಇದರ ಫಲವಾಗಿ ಈ ವರ್ಷ
ಚೀನಾಕ್ಕಿಂತ ಹೆಚ್ಚು ವೇಗದಲ್ಲಿ
ಭಾರತ ಅಭಿವೃದ್ಧಿ ಸಾಧಿಸುವ ನಿರೀಕ್ಷೆ
ಇದೆ ಎಂದು ಬ್ಲೂಮ್ಬರ್ಗ್ ಸಂಸ್ಥೆ
ಮೋದಿ ಅವರ ಬಗ್ಗೆ ಪ್ರಶಂಸೆ
ವ್ಯಕ್ತಪಡಿಸಿದೆ.