Drop


Wednesday, October 14, 2015

ನಾಗರಿಕ ಸೇವಾ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟ

GKPOINTS

ನವದೆಹಲಿ: 2015ನೇ ಸಾಲಿನ ಕೇಂದ್ರ ನಾಗರಿಕ ಸೇವೆಗಳ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 15 ಸಾವಿರ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಫಲಿತಾಂಶಕ್ಕಾಗಿ www.upsc.gov.in ವೆಬ್​ಸೈಟ್​ಗೆ ಭೇಟಿ ನೀಡಬಹುದು.

15,008 ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಬಾರಿ 9,45,908 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ನಂತರ ಆಗಸ್ಟ್ 23ರಂದು ನಡೆದ ಅರ್ಹತಾ ಪರೀಕ್ಷೆಯಲ್ಲಿ 4.63 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ನಡೆದ 50 ದಿನಗಳಲ್ಲಿ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಯುಪಿಎಸ್​ಸಿ ಕಾರ್ಯದರ್ಶಿ ಅಸೀಮ್ ಖರಾನಾ ತಿಳಿಸಿದ್ದಾರೆ.

ಅಭ್ಯರ್ಥಿಗಳು ಫಲಿತಾಂಶ ಪಡೆಯಲು www.upsc.gov.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಯುಪಿಎಸ್​ಸಿ ಮಾಹಿತಿ ನೀಡಲು ಮತ್ತು ಪರೀಕ್ಷಾರ್ಥಿಗಳ ದೂರು ಆಲಿಸಲು ಮಾಹಿತಿ ಕೇಂದ್ರ ಆರಂಭಸಿದ್ದು, ಅಭ್ಯರ್ಥಿಗಳು ದೂ. ಸಂಖ್ಯೆ 011-23385271, 011-23098543 ಮತ್ತು 011-23381125ಗೆ ಸಂಪರ್ಕಿಸಬಹುದು