FDA Kannada keys:-

FDA KANNADA KEY ANS
ಸೂಚನೆ : ಈ ಕೆಳಗೆ ಕೊಟ್ಟ
ಶಬ್ದಗಳಲ್ಲಿ (ಪ್ರಶ್ನೆಸಂಖ್ಯೆ 1-6)
ಒಂದು ಪದ ಉಳಿದವುಗಳ ಗುಂಪಿಗೆ
ಸೇರುವುದಿಲ್ಲ. ಅಂತಹ ಪದ ಗುರುತಿಸಿ
1. 1) ಸಸಿ 2) ಮರ 3) ಗಿಡ  4) ಬಳ್ಳಿ
ಉತ್ತರ: 4) ಬಳ್ಳಿ
2. 1) ವಿಶ್ವೇಶ್ವರಯ್ಯ 2) ಅಬ್ದುಲ್
ಕಲಾಂ  3) ಸಿ.ಎನ್. ಆರ್. ರಾವ 4) ಎಸ್.ಎಲ್.
ಭೈರಪ್ಪ
ಉತ್ತರ: 4) ಎಸ್.ಎಲ್ ಭೈರಪ್ಪ
3. 1) ಆರೋಪ 2) ಪ್ರತ್ಯಾರೋಪ  3) ವಿಧಾನ 4) ದೂರು
ಉತ್ತರ: 3) ವಿಧಾನ
4. 1) ಲಾರಿ 2) ಬಸ್ಸು 3) ಕಾರು 4) ರೈಲು
ಉತ್ತರ: 4) ರೈಲು
5. 1) ಕುವೆಂಪು 2) ಬೇಂದ್ರೆ  3) ಮಾಸ್ತಿ
4) ಲಂಕೇಶ
ಉತ್ತರ: 4) ಲಂಕೇಶ
6. 1) ಆಂದೋಲನ 2) ಅನುಭಾವ  3)
ಕ್ರಾಂತಿ 4) ಸುಧಾರಣೆ
ಉತ್ತರ: 2) ಅನುಭಾವ
ಸೂಚನೆ: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ
ಭಾಗ ತಪ್ಪಾಗಿದ್ದರೆ ಮುಂದೆ
ಕೊಡಲಾದ ಮೂರು ಪರ್ಯಾಯ
ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ,
ತಪ್ಪಿಲ್ಲದಿದ್ದರೆ `ತಪ್ಪಿಲ್ಲ' ಎಂಬ (4)ನ್ನು
ಗುರುತಿಸಿ (ಪ್ರಶ್ನೆ ಸಂಖ್ಯೆ 7-13)
7. ವಿಶ್ವಮಾನವ ಸಂದೇಶದ ಪ್ರಚಾರ ಮತ್ತು
ಪ್ರಸಾರ ಅತ್ಯಂತ ತುರ್ತಾಗಿ ಆಗಬೇಕಿದೆ.
ಉತ್ತರ: 4 (ತಪ್ಪಿಲ್ಲ)
8. ಅಧಿಕಾರದಲ್ಲಿರುವವರಿಗೆ ಯೋಜನೆಗಳನ್ನು ಘೋಶಣೆ
ಮಾಡುವುದು ಒಂದು ಹವ್ಯಾಸವಾಗಿದೆ.
ಉತ್ತರ: 2 (ಘೋಷಣೆ)
9. ವಿದ್ಯಾರ್ಥಿಗಳಿಗೆ ಚಿತ್ತೇಕಾಗ್ರತೆ ತುಂಬಾ
ಮುಖ್ಯ
ಉತ್ತರ: 1 (ಚಿತ್ತೈಕಾಗ್ರತೆ)
10. ಸಂಸ್ಕೃತಿಯು
ಪ್ರತಿಯೊಂದು
ಆಚರಣೆಯನ್ನು ತರ್ಕಬದ್ಧ ವ್ಯವಸ್ಥಿತ
ಅಧ್ಯಯನಕ್ಕೊಳಪಡಿಸುತ್ತದೆ.
ಉತ್ತರ: 4) (ತಪ್ಪಿಲ್ಲ)
11. ಆಡಳಿತದ ಮಾದರಿಗಳಲ್ಲಿ ಪ್ರಜಾಧಿಪತ್ಯವೇ
ಆದರ್ಶವಾದುದು
ಉತ್ತರ: 4) (ತಪ್ಪಿಲ್ಲ)
12. ಪ್ರತಿಯೊಬ್ಬ ವ್ಯಕ್ತಿಯೂ
ಸಹ ವಸ್ತುಸ್ತಿತಿ ಯನ್ನರಿತು ಮಾತನಾಡಬೇಕು.
ಉತ್ತರ : 1) (ವಸ್ತುಸ್ಥಿತಿ)
13. ಭಾರತೀಯ ಸಂಸ್ಕೃತಿ ತುಂಬಾ
ವೈವಿಧ್ಯತೆ ಯಿಂದ ಕೂಡಿದೆ.
ಉತ್ತರ : 4) (ತಪ್ಪಿಲ್ಲ)
ಸೂಚನೆ: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ
ಉತ್ತರವನ್ನು ಗುರುತಿಸಿ. (ಪ್ರಶ್ನೆಸಂಖ್ಯೆ
14-38)
14. ಭಾಷೆಯಅತ್ಯಂತ ಚಿಕ್ಕ
ಘಟಕವೆಂದರೆ -----
ಉತ್ತರ: 4) (ದ್ವನಿ)
15. ದ್ರಾವಿಡ ಭಾಷೆಗಳಲ್ಲಿ ಅತಿ
ಪ್ರಾಚೀನವಾದ ಭಾಷೆ
ಉತ್ತರ: 3) (ತಮಿಳು)
16. `ಹೊರಡು' ಎಂಬುದು ----
ಉತ್ತರ: 3) (ಕ್ರಿಯಾಪ್ರಕೃತಿ)
17. ಆ ಮರದ ಮೇಲೆ ಒಂದು ಹಕ್ಕಿ ಕುಳಿತಿದೆ
ಎಂಬುದು — ವಾಕ್ಯ
ಉತ್ತರ : 3) (ಪ್ರಸ್ತಾವನಾ ವಾಕ್ಯ)
18. ಬಲಶಾಲಿಯಾದ ಭೀಮನು
ದುರ್ಯೋಧನನನ್ನು ಕೊಂದನು
ಇಲ್ಲಿ `ಭೀಮನು' ಎಂಬುದು ----
ಉತ್ತರ : 2) (ವಿಶೇಷ್ಯ)
19. `ಹಣದಾಸೆಗೆ' ಎಂಬ ಪದದಲ್ಲಿ -----
ಸಂಧಿಯಿದೆ.
ಉತ್ತರ : 1/3) 1) ಸವರ್ಣ ದೀರ್ಘ / 3)
ಲೋಪ
20. `ಮಗುವಿಗೆ' ಎಂಬ ಪದದಲ್ಲಿ---
ಸಂಧಿಯಿದೆ.
ಉತ್ತರ: 2) (ಆಗಮ)
21. `ಹುಲ್ಲುಗಾವಲು' ಎಂಬ ಪದದಲ್ಲಿ ----
ಸಂಧಿಯಿದೆ
ಉತ್ತರ: 4) (ಆದೇಶ)
22. `ತಾನು' ಎಂಬುದು - - -ಸರ್ವನಾಮ
ಉತ್ತರ : 4) (ಆತ್ಮಾರ್ಥಕ)
23. `ದೊಡ್ಡವರು' ಎಂಬುದು
---- ವಚನ
ಉತ್ತರ:  2) (ಬಹುವಚನ)
24. `ಮಾಡಿರಿ' ಎಂಬುದು ---- ಪದ
ಉತ್ತರ: 1) (ವಿದ್ಯರ್ಥಕ)
25. `ನೆನಯರು' ಎಂಬುದು ---- ಪದ
ಉತ್ತರ:  2) (ನಿಷೇದಾರ್ಥಕ)
26. `ಇದ್ದಾನು' ಎಂಬುದು---- ಪದ
ಉತ್ತರ : 4) (ಸಂಭಾವನಾರ್ಥಕ)
27. `ನಕ್ಕವನು' ಎಂಬುದು - - -ಪದ
ಉತ್ತರ : 1) (ಕೃದಂತನಾಮ)
28. `ಚಾಡಿಕೋರ' ಎಂಬುದು ---- ನಾಮ
ಉತ್ತರ: 1) (ತದ್ಧಿತಾಂತ)
29. ಹಗಲು ಕನಸು ಎಂಬುದು ---- ಸಮಾಸ
ಉತ್ತರ : 3) (ತತ್ಪುರುಷ)
30. `ಸಿಡಿಮದ್ದು' ಎಂಬುದು — ಸಮಾಸ
ಉತ್ತರ : *
31. `ಕೆಳದುಟಿ' ಎಂಬುದು — ಸಮಾಸ
ಉತ್ತರ : 1) (ಅಂಶಿ)
32. `ಕಥೆಹೇಳು' ಎಂಬುದು — ಸಮಾಸ
ಉತ್ತರ : 4) (ಕ್ರಿಯಾ)
33. ----- ಎಂಬುದು ಅವಧಾರಣೆಯಿಂದ
ಕೂಡಿದ ಪದ
ಉತ್ತರ : 3) (ನಾನೇ)
34. ಆ ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೇ
ಹಿಂತಿರುಗಿದೆನು. ಇಲ್ಲಿ ಕೂಡಲೇ ಎಂಬುದು
ಉತ್ತರ: 2) (ಸಾಮಾನ್ಯಾವ್ಯಯ)
35. ಆಹಾ, ನೀರು ಅಮೃತದಂತಿದೆ.
ಇಲ್ಲಿ ಆಹಾ ಎಂಬುದು---
ಉತ್ತರ: 4) (ಭಾವಸೂಚಕಾವ್ಯಯ)
36. ಮಗು ಕುಣಿಯುತ್ತಾ ಬೀದಿಗೆ ಹೋಯಿತು
ಇಲ್ಲಿ ಕುಣಿಯುತ್ತಾ --- ಪದ
ಉತ್ತರ : 3) (ಸಾಪೇಕ್ಷ ಕ್ರಿಯಾಪದ)
37. ನೀವು ಬುದ್ಧಿವಂತರಾಗಿ ಬಾಳಿ
ಇಲ್ಲಿ `ಬುದ್ಧಿವಂತರಾಗಿ' ಎಂಬುದು
ಉತ್ತರ : 4) (ಭಾವನಾಮ)
38. `ಅಂಥದು' ಎಂಬ ಪದ ----
ವಾಚಕ
ಉತ್ತರ : 3) (ಪ್ರಕಾರ ವಾಚಕ)
ಸೂಚನೆ: ಕೆಳಗಿನ ಪ್ರಶ್ನೆಗಳಲ್ಲಿ
(ಪ್ರಶ್ನೆಸಂಖ್ಯೆ 39-42) ಕನ್ನಡ ಮೂಲದ್ದು
ಅಲ್ಲದ (ಅನ್ಯಭಾಷೆಯಿಂದ
ಸ್ವೀಕೃತವಾದ) ಶಬ್ದವನ್ನು ಗುರುತಿಸಿ.
39. 1) ಮನೆ  2) ಹೊಲ 3) ಗದ್ದೆ
4) ನದಿ
ಉತ್ತರ: 4 (ನದಿ)
40. 1) ಹೀರು  2) ಬೀದಿ 3)
ಸಾರು 4) ಕಾರು
ಉತ್ತರ: 4 (ಕಾರು)
41. 1) ಕದ 2) ಕಾಗದ 3) ಹೊಲಿ 4)
ನೆಲ
ಉತ್ತರ: 2 (ಕಾಗದ)
42. 1) ಮೆಲ್ಲಗೆ 2) ಸುಮ್ಮನೆ  3) ಬದಲು 4)
ಕಲ್ಲು
ಉತ್ತರ: 4 (ಕಲ್ಲು)
ಸೂಚನೆ: ಕೆಳಗಿನ ವಾಕ್ಯಗಳಲ್ಲಿನ
(ಪ್ರಶ್ನೆಸಂಖ್ಯೆ 43-45) ದೋಷವಿದ್ದರೆ
ಅದನ್ನು ಸರಿಪಡಿಸಲು ಮುಂದೆ
ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ
ಸೂಕ್ತವಾದುದನ್ನು ಗುರುತಿಸಿ ದೋಷವಿಲ್ಲದಿದ್ದರೆ ಸುಧಾರಣೆ
ಬೇಕಿಲ್ಲ ಆಗ (4)ನ್ನು ಗುರುತಿಸಿ
43. ಹುಡುಗರು ಆ ನಾಯಿಗೆ ಅಟ್ಟಿದರು
ಉತ್ತರ: 3) (ನಾಯಿಯನ್ನು)
44. ಗುಡಿ ಕೈಗಾರಿಕೆಗಳು ಕಚ್ಚಾಪದಾರ್ಥಗಳ
ಕೊರತೆಯಿಂದ ತಮ್ಮ
ಅಸ್ತಿತ್ವವನ್ನು ಕಳೆದುಕೊಂಡವು.
ಉತ್ತರ: 4) (ಸುಧಾರಣೆ ಬೇಕಿಲ್ಲ)
45. ಒಟ್ಟಿನಲ್ಲಿ ಆ ಇತ್ಯರ್ಥವನ್ನು
ಹೀಗೆ ವಿವರಿಸಬಹುದು
ಉತ್ತರ: 1) (ಇತ್ಯರ್ಥ)
ಸೂಚನೆ: ಕೆಳಗಿನವುಗಳಲ್ಲಿ (ಪ್ರಶ್ನೆಸಂಖ್ಯೆ
46-50) ಗೆರೆ ಹಾಕಿದ ಭಾಗ ಗಳು ತಪ್ಪಾಗಿವೆ. ಅವುಗಳ
ಮುಂದೆ ಕೊಟ್ಟ ನಾಲ್ಕು
ಪರ್ಯಾಯ ರೂಪಗಳಿಂದ ಸರಿಯಾದ
ಉತ್ತರವನ್ನು ಗುರುತಿಸಿ.
46. ಕನ್ನಡದ
ಮೊಟ್ಟಮೊದಲ
ತ್ರಿಪದಿರೂಪ ಜಿನವಲ್ಲಭನ ಶಾಸನದಲ್ಲಿ ಸಿಗುತ್ತದೆ.
ಉತ್ತರ : 2) (ಬಾದಾಮಿ ಶಾಸನ)
47. ಹಲ್ಮಿಡಿ ಶಾಸನ ಹಳಗನ್ನಡ ಭಾಷಾ
ರೂಪದಲ್ಲಿದೆ
ಉತ್ತರ:  3) (ಪೂರ್ವದ ಹ
ಳೆಗನ್ನಡ)
48. ಕನ್ನಡದಲ್ಲಿ
ಮೊಟ್ಟಮೊದಲು
ಸರಸ್ವತಿ ಸನ್ಮಾನ್ ಪಡೆದ ಸಾಹಿತಿ ಕುವೆಂಪು
ಉತ್ತರ : 3) (ಎಸ್.ಎಲ್. ಭೈರಪ್ಪ)
49. ಉರಿಯ ನಾಲಿಗೆ ಇದು ಹಾ.ಮಾ. ನ ರವರ ಕೃತಿ
ಉತ್ತರ: 4) (ಕೀರ್ತಿನಾಥ ಕುರ್ತುಕೋಟಿ)
50. ಹಗಲುಗನಸುಗಳು ಕೃತಿಯ ಕರ್ತೃ
ಚಂದ್ರಶೇಖರ ಕಂಬಾರ
ಉತ್ತರ: 3) (ಎ.ಎನ್. ಮೂರ್ತಿರಾವ್)
ಸೂಚನೆ: ಮುಂದಿನ ವಾಕ್ಯಗಳಲ್ಲಿ
(ಪ್ರಶ್ನೆಸಂಖ್ಯೆ 51-58) ಪದಗಳು
ಕ್ರಮಬದ್ಧವಾಗಿಲ್ಲ. ಅವು
ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ
ಭಾಗಗಳನ್ನು ಪುನಃ ಜೋಡಿಸಿ ಅವುಗಳ ಅನುಕ್ರಮವನ್ನು
ಗುರುತಿಸಿ.
51. ಸಾಮೂಹಿಕ ಶಿಸ್ತು (P)ಏಕರೂಪದ ಆಚರಣೆಯಲ್ಲ
(Q) ಎಂದರೆ(R) ವಿವೇಚನಾರಹಿತ(S)
ಉತ್ತರ : 3) (PRSQ)
52. ಜೀವನ (P) ಸಂಸ್ಕೃತಿವಂತ
(Q) ನಡೆಯುತ್ತದೆ (R) ಗುರಿಯರಿತು(S)
ಉತ್ತರ : 1) (QPSR)
53. ಪ್ರಸ್ತುತ ಸಂದರ್ಭದ (P) ಕನ್ನಡದಲ್ಲಿ
(Q) ಚಿಂತಕರಲ್ಲೊಬ್ಬರು(R)
ಮಹತ್ವದ(S)
ಉತ್ತರ: 2) (QPSR)
54. ಎಂತಹ ಭಯಂಕರ(P)
ಕಾದಿದೆಯೊ ನಿಮಗೆ(Q) ಹೋರಾಟ(R) ಆ
ಕಾಲ ಪುರುಷನೇ ಬಲ್ಲ(S)
ಉತ್ತರ : 4) (PRQS)
55. ಮಾಡಬೇಕು(P) ವಿದ್ಯೆ (Q)
ವಿಚಾರವಂತರನ್ನಾಗಿ(R) ಮನುಷ್ಯನನ್ನು(S)
ಉತ್ತರ : 2) (QSRP)
56. ಪ್ರಸಿದ್ಧವಾಗಿದೆ(P) ದಕ್ಷಿಣಕಾಶಿ(Q)
ಎಂದು(R) ನಂಜನಗೂಡು(S)
ಉತ್ತರ : 2) (SQRP)
57. ಅಕ್ಷರಸ್ತರಾಗುತ್ತಿದ್ದಾರೆ(P)
ವಿದ್ಯಾವಂತರು(Q) ಕೇವಲ(R)
ಇತ್ತೀಚಿನ ದಿನಗಳಲ್ಲಿ(S)
ಉತ್ತರ : 4) (QSRP)
58. ಸಂಸ್ಕೃತಿವಂತ
ರಾಷ್ಟ್ರಜೀವನ (P) ಸಾಧಿಸುವುದಾಗಿರಬೇಕು(Q)
ಮಾನವ ಕುಲದ(R) ಗುರಿಯನ್ನು(S)
ಉತ್ತರ : 2) (PRSQ)
ಸೂಚನೆ: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ
ಸಂಖ್ಯೆ 59-64) (1) (2) (3) ಎಂಬ
ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ
ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ
ಸಂಬಂಧಿಸಿದ ದೋಷ ವಿದ್ದರೆ ಆ ಭಾಗವನ್ನು
ಗುರುತಿಸಿ. ಯಾವ ಭಾಗದಲ್ಲೂ ದೋಷ ವಿಲ್ಲದಿದ್ದರೆ
`ತಪ್ಪಿಲ್ಲ' ಎಂಬ (4)ನೇ ಭಾಗವನ್ನು ಗುರುತಿಸಿ.
59. ವಚನಗಳು(1) ಕನ್ನಡ(2) ಉಪನಿಷತ್ತುಗಳು
(3)   ತಪ್ಪಿಲ್ಲ(4)
ಉತ್ತರ: 2 (ಕನ್ನಡ)
60. ಅಬ್ದುಲ್ ಕಲಾಂರವರು(1) ನಮ್ಮ ದೇಶ
(2) ಕ್ಷಿಪಣಿ ಪಿತಾಮಹರು(3) ತಪ್ಪಿಲ(4)
ಉತ್ತರ: 2 (ನಮ್ಮ ದೇಶ)
61. ಪಂಪನು ಕನ್ನಡ ಸಾಹಿತ್ಯ (1)
ಪರಂಪರೆಯ(2) ನಿರ್ಮಾಪಕ(3) ತಪ್ಪಿಲ್ಲ
(4)
ಉತ್ತರ : 4 (ತಪ್ಪಿಲ್ಲ)
62. ಅದ್ಯಾಪಕರು(1) ವಿದ್ಯಾರ್ಥಿಗಳಿಗೆ(2)
ಮಾದರಿಯಾಗಿರಬೇಕು(3) ತಪ್ಪಿಲ್ಲ (4)
ಉತ್ತರ: 1 (ಅದ್ಯಾಪಕರು)
63. ಮೈಸೂರಿನ (1) ಅರಮಣೆ(2)
ಜಗತ್ಪ್ರಸಿದ್ಧವಾದುದು(3) ತಪ್ಪಿಲ್ಲ (4)
ಉತ್ತರ: 2 (ಅರಮಣೆ)
64. ಗಾಯಕ(1) ಹಾಡನ್ನು ಹೇಳಲು(2)
ತೊಡಗಿಸಿದ(3) ತಪ್ಪಿಲ್ಲ(4)
ಉತ್ತರ: 3 (ತೊಡಗಿಸಿದ)
ಸೂಚನೆ: ಕೆಳಗಿನ ವಾಕ್ಯಗಳಲ್ಲಿ
(ಪ್ರಶ್ನೆಸಂಖ್ಯೆ 65-70) ಗೆರೆ ಎಳೆದ ಭಾಗ
ದಲ್ಲಿ ಕೊಡಲಾದ ಇಂಗ್ಲಿಷ್
ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು
ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು
ಗುರುತಿಸಿ.
65. ಈ ಹಾಡಿನ ಕಾಂಪೋಝಿಶನ್ ತುಂಬಾ
ಚೆನ್ನಾಗಿದೆ
ಉತ್ತರ: 2) (ಸಂಯೋಜನೆ)
66. ಯಾವುದೇ ಚಲನಚಿತ್ರದ ಯಶಸ್ಸು ಆ ಚಿತ್ರದ
ಡೈರೆಕ್ಷನ್ ಮೇಲೆ ನಿಂತಿರುತ್ತದೆ
ಉತ್ತರ 4) (ನಿರ್ದೇಶನ)
67. ವ್ಯಾಪಾರಿಗಳು ಯುಗಾದಿ ಹಬ್ಬದ
ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಮೇಲೆ
ಡಿಸ್ಕೌಂಟ್ನ್ನು ಕೊಡುವುದು
ಸಾಮಾನ್ಯ ವಿಷಯ
ಉತ್ತರ 2) (ರಿಯಾಯಿತಿ)
68. ದೇಶದ ಆರ್ಥಿಕತೆಯ ಮೇಲೆ
ಭ್ರಷ್ಟಾಚಾರದಿಂದಾಗುವ ಪರಿಣಾಮ ವನ್ನು
ಇಮ್ಯಾಜಿನ್ ಮಾಡಿಕೊಳ್ಳಲು
ಸಾಧ್ಯವಿಲ್ಲ
ಉತ್ತರ: 2) (ಊಹಿಸು)
69. ಚಾನ್ಸಲರ್ರವರು ಒಂದು
ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿ ರುತ್ತಾರೆ.
ಉತ್ತರ : 3) (ಕುಲಪತಿ)
70. ಪಾಶ್ಚಾತ್ಯೀಕರಣದ
ಪ್ರಭಾವದಿಂದ ರಿಲೇಶನ್ನಗಳು ತುಂಬಾ
ಯಾಂತ್ರಿಕವಾಗುತ್ತಿವೆ.
ಉತ್ತರ : 4) (ಸಂಬಂಧ)
ಸೂಚನೆ: ಈ ಕೆಳಗೆ (ಪ್ರಶ್ನೆಸಂಖ್ಯೆ 71-73)
PQRS ಎಂಬ ನಾಲ್ಕು ವಾಕ್ಯಗಳನ್ನು
ಕೊಡಲಾಗಿದೆ. ಈ ವಾಕ್ಯಗಳು
ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ
ಜೋಡಿಸುವ ಉತ್ತರವನ್ನು ಗುರುತಿಸಬೇಕು.
71. P. ಆದರೆ ಖಂಡಿತವಾಗಿಯೂ ಅದು ತಪ್ಪು
ಅರ್ಥ
Q. ಒಂದು ರಾಜ್ಯಶಾಸ್ತ್ರದ ಪುಸ್ತಕ ಸುಮ್ಮನೆ
ಪ್ರಸ್ತಾಪಿಸಿ ಅದರ ಅಧಿಕಾರಗಳು ರಾಜನ ಮೂಲಕ
ಬರುತ್ತವೆ ಎಂದು ಹೇಳುತ್ತದೆ.
R. ಹೆಚ್ಚಿನ ರಾಜ್ಯಗಳಲ್ಲಿ ಅದನ್ನು ಸರಕಾರಿ
ಯಂತ್ರದ ಭಾಗವೆಂದು
ಪರಿಗಣಿಸಿರಲಿಲ್ಲ.
S. ಹಳ್ಳಿಯ ಪರಿಷತ್ತು ಖಂಡಿತವಾಗಿ ಭಾರತದ
ಎಲ್ಲಾ ಕಡೆಗೆ ಇದ್ದಿತಾದರೂ ಅದರ ಉಲ್ಲೇಖ ಕಡಿಮೆ.
ಉತ್ತರ: 3) SRQP
72. P. ತಪ್ಪು ದಾರಿ ಹಿಡಿದ ಹೆಂಡತಿ ತನ್ನ
ಅಧಿಕಾರಗಳನ್ನು ಕಳೆದುಕೊಳ್ಳುತ್ತಿದ್ದಳು
Q.ಧರ್ಮಶಾಸ್ತ್ರದ ದೃಷ್ಠಿಯಿಂದ
ಮದುವೆಯಲ್ಲಿ ಒಂದು ಸಲ ಸಪ್ತಪದಿಯನ್ನು
ಜೊತೆಯಾಗಿ ತುಳಿದ ಮೇಲೆ
ಬೇರ್ಪಡಿಸಲಾಗುತ್ತಿರಲಿಲ್ಲ.
R. ವಿಚ್ಛೇದನ ತೀರ
ಅಸಂಭವವಾಗಿತ್ತು.
S. ನಿಷೇಧವಾಗಿರದಿದ್ದರೂ ಅದನ್ನು ರದ್ದುಪಡಿಸಲಾಗುತ್
ತಿರಲಿಲ್ಲ.
ಉತ್ತರ : 3) PRQS
73. P. ದಶರಥನ ಕೀರ್ತಿಯಂತೆ
ಬಿಳಿಯ ಭಸ್ಮರಾಶಿ ಶೋಭಿಸಿತು. ಎಲ್ಲರೂ ಚಿತೆಯನ್ನು
ಪ್ರದಕ್ಷಿಣೆ ಮಾಡಿ ಸರಯೂ ನದಿಯ
ತೀರಕ್ಕೆ ಬಂದರು.
Q. ಅಲ್ಲಿ ಜಲ ತರ್ಪಣವನ್ನು ನೀಡಿ
ದುಃಖದಿಂದ ಶೂನ್ಯವನ್ನು ಪ್ರವೇಶಿಸುವ
ಛಾಯೆಗಳಂತೆ ರಾಜಧಾನಿಯನ್ನು
ಹೊಕ್ಕರು.
R. ಋತ್ವಿಜರು ದೊರೆಯ ದೇಹವನ್ನು
ಸೂಡಿನ ಮೇಲಿಟ್ಟರು. ಗುರುವಿನ ಸನ್ನೆಯಂತೆ
ಭರತ ಉರಿಯಿಕ್ಕಿದನು.
S. ರಾಣಿಯರ ರೋಧನ ಮತ್ತು ಋತ್ವಿಜರ ಸಾಮಗಾನದ
ನಡುವೆ ಅಗ್ನಿ ಆಕಾಶದವರೆಗೂ ಹಬ್ಬಿತು.
ಉತ್ತರ : 4) SRQP
ಸೂಚನೆಗಳು: ಕೆಳಗಿನ ಪದಗಳಿಗೆ
(ಪ್ರಶ್ನೆಸಂಖ್ಯೆ 74-82) ಅವುಗಳ
ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ
ಸಮಾನಾರ್ಥ ಕವಾದ ಅಥವಾ ಅತಿ ಸಮೀಪದ
ಅರ್ಥವುಳ್ಳ ರೂಪವನ್ನು ಗುರುತಿಸಿ.
74. "ಪರುವ" ಎಂದರೆ
ಉತ್ತರ : 1) (ಉತ್ಸವ)
75. "ಪರುಮೆ" ಎಂದರೆ
ಉತ್ತರ : 2) (ದುಂಬಿ)
76. "ನವನೀತ" ಎಂದರೆ
ಉತ್ತರ : 4) (ಬೆಣ್ಣೆ)
77. "ಜಗಜಗಿಸು"ಎಂದರೆ
ಉತ್ತರ: 2) (ಪ್ರಕಾಶಿಸು)
78. "ಮುನ್ನೀರು" ಎಂದರೆ
ಉತ್ತರ:  3) (ಸಮುದ್ರ)
79. "ಮೂರ್ತ" ಎಂದರೆ
ಉತ್ತರ: 2) (ಆಕಾರವಿರುವ)
80. "ಮೃಷೆ" ಎಂದರೆ
ಉತ್ತರ:  1) (ಸುಳ್ಳು)
81. "ವಜ್ರ
ಧರ" ಎಂದರೆ
ಉತ್ತರ: 4) (ಇಂದ್ರ)
82. "ಶಿಬಿಕೆ"ಎಂದರೆ
ಉತ್ತರ : 2) (ಚಟ್ಟ)
ಸೂಚನೆ: ಕೆಳಗೆ ಕೊಟ್ಟಿರುವ ಪದಗಳಿಗೆ
(ಪ್ರಶ್ನೆಸಂಖ್ಯೆ 83-90) ವಿರುದ್ಧಾರ್ಥಕ
ಪದಗಳನ್ನು ಮುಂದೆ ಕೊಟ್ಟಿರುವ
ಪರ್ಯಾಯ ರೂಪಗಳಿಂದ ಗುರುತಿಸಿ.
83. ಯೋಚನೆ
ಉತ್ತರ: 3) (ನಿರ್ಯೋಚನೆ)
84. ರವ
ಉತ್ತರ : 2) (ನೀರವ)
85. ಗರತಿ
ಉತ್ತರ : 3) (ಗಯ್ಯಾಳಿ)
86. ಊರ್ಜಿತ
ಉತ್ತರ : 2) (ಅನೂರ್ಜಿತ)
87. ಸ್ಥಾಪಕ
ಉತ್ತರ : 3) (ಭಂಜಕ)
88. ಆಕಸ್ಮಿಕ
ಉತ್ತರ : 4) (ನಿರೀಕ್ಷಿತ)
89. ಸ್ವಾತಂತ್ರ್ಯ
ಉತ್ತರ : 3) (ಪಾರತಂತ್ರ್ಯ)
90. ನೇರ
ಉತ್ತರ : 4) (ವಕ್ರ)
ಸೂಚನೆ: ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು
(ಪ್ರಶ್ನೆಸಂಖ್ಯೆ 91-100) ಅವುಗಳ
ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು
ನೀಡಿದೆ. ನುಡಿಗಟ್ಟಿನ ಅರ್ಥವನ್ನು
ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.
91. ಅರ್ಧಚಂದ್ರ ಪ್ರಯೋಗ
ಉತ್ತರ : 4) (ಕುತ್ತಿಗೆ ಹಿಡಿದು ನೂಕುವುದು)
92. "ಕಣ್ಣಲ್ಲಿ
ಜೀವವಿಟ್ಟುಕೊಂಡು"
ಉತ್ತರ 3) (ತುಂಬಾ
ಆಸೆಯಿಟ್ಟುಕೊಂಡು)
93. "ಮೈಯೆಲ್ಲಾ ಕಣ್ಣಾಗು" ಎಂದರೆ
ಉತ್ತರ : 3) (ತುಂಬಾ ಜಾಗರೂಕನಾಗಿರು)
94."ಏಳು ಕೆರೆ ನೀರು ಕುಡಿಸು"
ಉತ್ತರ : 3) (ಬಹಳ ಕಷ್ಟ ಕೊಡು)
95. "ಕೂಪ ಮಂಡೂಕ"
ಉತ್ತರ: 2) (ಸಂಕುಚಿತ ಮನಸ್ಸಿನವ)
96. ಗಳಸ್ಯ-ಕಂಠಸ್ಯ
ಉತ್ತರ : 4) (ಅತಿ ಆತ್ಮೀಯತೆ)
97. ಉಷ: ಕಾಲ ಎಂದರೆ
ಉತ್ತರ : 1) (ಮುಂಜಾನೆಯ ಸಮಯ)
98. ಕಣ್ಮಣಿ
ಉತ್ತರ : 1) (ಅಚ್ಚುಮೆಚ್ಚಿನ)
99. "ಅಜಗಜಾಂತರ" ವೆಂದರೆ
ಉತ್ತರ : 4) (ಆಡು-ಆನೆಯಷ್ಟು ವ್ಯತ್ಯಾಸ)
100. ಉತ್ಸವ ಮೂರ್ತಿ
ಉತ್ತರ : 3) (ಸದಾ ತಿರುಗಾಡುತ್ತಾ ಮೆರೆಯುವ
ಸ್ವಭಾವದವ)

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023