-: ದ್ವಿರುಕ್ತಿಗಳು :- GKPOINTS (ದ್ವಿ - ಎರಡು, ಉಕ್ತಿ - ಮಾತು/ ಹೇಳಿಕೆ) ಯಾವುದಾದರೊಂದು ವಿಶೇಷಾರ್ಥವನ್ನು ಹೇಳುವುದಕ್ಕಾಗಿ ಎರಡೆರಡು ಬಾರಿ ಪ್ರಯೋಗ ಮಾಡಲ್ಪಡುವ ಪದವೊಂದಕ್ಕೆ ’ದ್ವಿರುಕ್ತಿ’ ಎನ್ನುವರು. ಉದಾ :- ಬೇಗ ಬೇಗ ನಡೆಯಿರಿ. ಅವರು ಓಡಿ ಓಡಿ ದಣಿದರು. ಅವು ದೊಡ್ಡ ದೊಡ್ಡ ಗ್ರಂಥಗಳು. ಅವನ ಆಟ ನೋಡಿ ನೋಡಿ ಸಾಕಾಯಿತು. ತಿಂದು ತಿಂದು ದಪ್ಪ ಆಗಬೇಡಾ. ದ್ವಿರುಕ್ತಿಗಳ ಪ್ರಯೋಗದಿಂದ ಕೇಳುವವರ ಮನಸ್ಸಿನ ಮೇಲೆ ಪರಿಣಾಮವುಂಟಾಗುತ್ತದೆ. ಭಾವನೆಗಳ ಅಭಿವ್ಯಕ್ತಿಗೆ ಪುಷ್ಟಿ ದೊರೆಯುತ್ತದೆ. ದ್ವಿರುಕ್ತಿಗಳನ್ನು ಅನೇಕಾರ್ಥದಲ್ಲಿ ಬಳಸಲಾಗುತ್ತದೆ. ಅವುಗಳು ಈ ಮುಂದಿನಂತಿವೆ... ೧) ಉತ್ಸಾಹ ತೋರುವಾಗ :- ಹೌದು! ಹೌದು! ಗೆದ್ದವನು ನಾನೇ! ನಿಲ್ಲುನಿಲ್ಲು, ನಾನೂ ಬರುತ್ತೇನೆ. ೨) ಅತಿಶಯಾ(ಆಧಿಕ್ಯ)ರ್ಥದಲ್ಲಿ :- ಹೆಚ್ಚು ಹೆಚ್ಚು ಜನ ಬರಬೇಕು. ಅವರು ಉರುಳಿ ಉರುಳಿ ಸೇವೆ ಸಲ್ಲಿಸಿದರು. ೩) ಪ್ರತಿಯೊಂದು ಎಂಬ ಅರ್ಥದಲ್ಲಿ :- ಮನೆಮನೆಗಳನ್ನು ತಿರುಗಿದರು. ಪರಿಪರಿಯಾಗಿ ಹೇಳಿದರು. ೪) ಕೋಪಾರ್ಥದಲ್ಲಿ :- ಎಲೆಲಾ! ಮೂರ್ಖ! ನಿಲ್ಲುನಿಲ್ಲು, ಬಂದೆ. ನೀಚಾ! ನೀಚಾ! ಬಾಯಿಮುಚ್ಚು. ೫) ಸಂಭ್ರಮದಲ್ಲಿ :- ಬನ್ನಿ, ಬನ್ನಿ, ಕುಳಿತುಕೊಳ್ಳಿ. ಹತ್ತಿರ ಹತ್ತಿರ ಬಾ. ೬) ಆಶ್ಚರ್ಯದಲ್ಲಿ :- ಅಬ್ಬಬ್ಬಾ! ಎಂಥ ದೃಶ್ಯ! (ಅಬ್ಬ + ಅಬ್ಬಾ) ಅಹಹಾ! ಆತನ ಆಟ ನೋಡಿ! (ಅಹ + ಅಹಾ) ೭) ಆಕ್ಷೇಪಾರ್ಥದಲ್ಲಿ :- ಬೇಡ ಬೇಡ, ಅವನಿಗೆ ಕೊಡಬೇಡ. ನಡೆನಡೆ, ದೊಡ್ಡವರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023