In forbes magazine 10 Kannadiga listed as rich and influential people.

ಫೋರ್ಬ್ಸ್ ಪಟ್ಟಿ: ಕರ್ನಾಟಕದ 10 ಜನ ಶ್ರೀಮಂತರು
Published: 01 Oct 2015 12:50 PM ISTಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಕನ್ನಡಿಗರು
ನವದೆಹಲಿ: ಅಮೆರಿಕ ಮೂಲದ ಫೋರ್ಬ್ಸ್ ಮ್ಯಾಗಜೀನ್‌ ಭಾರತದ ಟಾಪ್‌ 100 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ರಿಲಯನ್ಸ್‌ ಸಮೂಹದ ಮುಕೇಶ್‌ ಅಂಬಾನಿ (1,22,850 ಕೋಟಿ ರೂ.), ಸನ್‌ ಫಾರ್ಮಸ್ಯುಟಿಕಲ್ಸ್‌ನ ದಿಲೀಪ್‌ ಸಾಂ Ì (1,17,000 ಕೋಟಿ ರೂ.) ಮತ್ತು ವಿಪ್ರೋ ಸಮೂಹದ ಮುಖ್ಯಸ್ಥ ಅಜೀಂ ಪ್ರೇಮ್‌ಜೀ (1,03,350) ಪಡೆದುಕೊಂಡಿದ್ದಾರೆ.
ಪಟ್ಟಿಯಲ್ಲಿ ಕರ್ನಾಟಕದ 10 ಮಂದಿ ಪ್ರಮುಖ ಉದ್ಯಮಿಗಳು ಸೇರಿರುವುದು ವಿಶೇಷ. ಮಣಿಪಾಲ್‌ ಎಜುಕೇಷನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ನ ರಂಜನ್‌ ಪೈ ಸೇರಿದಂತೆ ಕರ್ನಾಟಕದ 10 ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಂಜಿ ರಾಜ್ಯದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ದೇಶದಲ್ಲಿ ಇವರು 3ನೇ ಸ್ಥಾನದಲ್ಲಿದ್ದಾರೆ. ಪ್ರೇಂಜಿ ಆಸ್ತಿ ಮೌಲ್ಯ 1.03 ಲಕ್ಷ ಕೋಟಿ ರೂಪಾಯಿ.
ನಂದನ್‌ ನೀಲೇಕಣಿ 69, ಇನ್ಫೋಸಿಸ್ ಕಂಪೆನಿಯ ನಾರಾಯಣಮೂರ್ತಿ 53, ದಿನೇಶ್‌ 96, ಕ್ರಿಸ್‌ ಗೋಪಾಲಕೃಷ್ಣನ್‌ 67 ನೇ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮಣಿಪಾಲ್‌ ಗ್ರೂಪ್‌ನ ರಂಜನ್‌ ಪೈ 64, ರಾಜೇಶ್‌ ಎಕ್ಸ್‌ ಪೋರ್ಟ್‌ನ ರಾಜೇಶ್‌ ಮೆಹ್ತಾ 65, ದುಬೈನಲ್ಲಿರುವ ಬಿ.ಆರ್‌. ಶೆಟ್ಟಿ 66, ಎಂಬಸಿ ಗ್ರೂಪ್‌ನ ಜಿತೇಂದ್ರ ವೀರಾÌನಿ 68ನೇ ಸ್ಥಾನ ಪಡೆದಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023