Drop


Tuesday, October 6, 2015

India as the fifth strongest military nation in the world. United States of America gain first place, followed by Russia, China and Japan.

ಸೇನಾ ಬಲಾಢ್ಯತೆಯಲ್ಲಿ ಭಾರತಕ್ಕೆ
5 ನೇ ಸ್ಥಾನ
----------
ನವದೆಹಲಿ, ಅಕ್ಟೋಬರ್, 06 : ಪ್ರಗತಿಯ
ಬೆನ್ನು ಹತ್ತಿರುವ ಭಾರತ ಸೇನಾ
ಸಾಮರ್ಥ್ಯದತ್ತ ದಾಪುಗಾಲು
ಇರಿಸಿದ್ದು, ವಿಶ್ವ ಮಟ್ಟದಲ್ಲಿ 5ನೇ
ಸ್ಥಾನದಲ್ಲಿದೆ. ಅಮೆರಿಕಾ ಸೇನಾ
ಬಲಾಢ್ಯತೆಯಲ್ಲಿ
ಮುಂಚೂಣಿಯಲ್ಲಿದ್ದರೆ, ಪಾಕಿಸ್ತಾನ
11ನೇ ಸ್ಥಾನ ಪಡೆದುಕೊಂಡಿದೆ
ಸೈನಿಕರ ಸಂಖ್ಯೆ, ಯುದ್ಧ
ಟ್ಯಾಂಕ್ ಗಳು, ಯುದ್ಧ
ವಿಮಾನಗಳು ಇನ್ನಿತರ ಸೇನೆಗೆ
ಸಂಬಂಧಿಸಿದ ಹಲವಾರು
ಅಂಶಗಳನ್ನು ಪರಿಗಣಿಸಿದ ಸ್ವಿಟ್ಜರ್ಲೆಂಡ್
ನ ಬಹು ರಾಷ್ಟ್ರೀಯ ಸೇವಾ
ಕಂಪನಿ 'ಕ್ರೆಡಿಟ್ ಸ್ಯೂಸ್ಸೆ' ಈ
ವರದಿಯನ್ನು ಬಿಡುಗಡೆ ಮಾಡಿದೆ.
[ ವಿಶ್ವದ ಅತಿ ದೊಡ್ಡ ಸಂಸ್ಥೆಗಳ ಪೈಕಿ
ಭಾರತದ ಆರ್ಮಿ, ರೈಲ್ವೆ
]
ಈ ವರದಿ ಪ್ರಕಾರ ಅಮೆರಿಕಾ, ರಷ್ಯಾ,
ಚೀನಾ, ಜಪಾನ್ ಭಾರತ
ರಾಷ್ಟ್ರಗಳು ಮೊದಲ 5
ಸ್ಥಾನದಲ್ಲಿದ್ದರೆ, ಫ್ರಾನ್, ದಕ್ಷಿಣ
ಕೊರಿಯಾ, ಇಟಲಿ, ಬ್ರಿಟನ್, ಟರ್ಕಿ
ರಾಷ್ಟ್ರಗಳು ನಂತರದ 5 ಸ್ಥಾನ
ಗಳಿಸಿಕೊಂಡಿದೆ.
ಅಮೆರಿಕ ಪ್ರಥಮ : ವಾರ್ಷಿಕ ರಕ್ಷಣಾ ವೆಚ್ಚ
39 ಲಕ್ಷ ಕೋಟಿ, 14 ಲಕ್ಷ ಸೇನಾ
ಸಿಬ್ಬಂದಿ ಹೊಂದಿದ್ದು, 13, 892
ಯುದ್ಧ ವಿಮಾನ
ರಷ್ಯಾ ದ್ವಿತೀಯ : ವಾರ್ಷಿಕ
ರಕ್ಷಣಾ ವೆಚ್ಚ 5.4 ಲಕ್ಷ ಕೋಟಿ, 7.6
ಲಕ್ಷ ಸೇನಾ ಸಿಬ್ಬಂದಿ, 3,429
ಯುದ್ಧ ವಿಮಾನ ಹಾಗೂ 15,398
ಯುದ್ಧ ಟ್ಯಾಂಕ್ ಗಳು
ಚೀನಾ ತೃತೀಯ : ವಾರ್ಷಿಕ
ರಕ್ಷಣಾ ವೆಚ್ಚ 4 ಲಕ್ಷ ಕೋಟಿ, 23 ಲಕ್ಷ
ಸೇನಾ ಸಿಬ್ಬಂದಿ, 2,860 ಯುದ್ಧ
ವಿಮಾನ
ಜಪಾನ್ ನಾಲ್ಕನೇ ಸ್ಥಾನ : ವಾರ್ಷಿಕ
ರಕ್ಷಣಾ ವೆಚ್ಚ 2.7 ಲಕ್ಷ ಕೋಟಿ, 2.47
ಲಕ್ಷ ಸೇನಾ ಸಿಬ್ಬಂದಿ, ಜಪಾನ್ 1,613
ಯುದ್ಧ ವಿಮಾನ
ಭಾರತ ಐದನೇ ಸ್ಥಾನ : ವಾರ್ಷಿಕ
ರಕ್ಷಣಾ ವೆಚ್ಚ 3.25 ಲಕ್ಷ ಕೋಟಿ, 13
ಲಕ್ಷ ಸೇನಾ ಸಿಬ್ಬಂದಿ, 1,905
ಯುದ್ಧ ವಿಮಾನ