ಸಿಂಗಪುರ: ಟ್ರೋಫಿ ಗೆದ್ದ ಸಾನಿಯಾ-ಮಾರ್ಟಿನಾ ವಿಶ್ವದ ನಂ.1
ಸಿಂಗಪುರ: ಟ್ರೋಫಿ ಗೆದ್ದ ಸಾನಿಯಾ-ಮಾರ್ಟಿನಾ
ವಿಶ್ವದ ನಂ.1
ಸಿಂಗಪುರ, ನ.01: ಭಾರತೀಯ ಟೆನಿಸ್
ತಾರೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್
ಅವರು ಸಿಂಗಪುರ ಡಬ್ಲ್ಯೂಟಿಎ ಫೈನಲ್ ನಲ್ಲಿ
ಭರ್ಜರಿ ವಿಜಯ ದಾಖಲಿಸಿದ್ದಾರೆ. ಪ್ರಸಕ್ತ
ವರ್ಷದಲ್ಲಿ ಈ ಯಶಸ್ವಿ ಜೋಡಿ 9ನೇ
ಪ್ರಶಸ್ತಿಯನ್ನು ತನ್ನ
ಮುಡಿಗೇರಿಸಿಕೊಂಡಿದೆ. ಈ
ಮೂಲಕದ ವಿಶ್ವದ ಡಬಲ್ಸ್ ನಂ. 1 ಜೋಡಿ
ಎನಿಸಿಕೊಂಡಿದೆ.
ಟಾಪ್ ಸೀಡ್ ನ ಸಾನಿಯಾ ಮಿರ್ಜಾ ಹಾಗೂ
ಮಾರ್ಟಿನಾ ಹಿಂಗಿಸ್ ಅವರು ಎಂಟನೇ
ಸೀಡ್ ನ ಗಾರ್ಬಿನ್ ಮುಗುರುಜಾ ಹಾಗೂ ಕರ್ಲಾ
ಸ್ವಾರೇಜ್ ನವರೋ ಅವರನ್ನು ಭಾನುವಾರ ನಡೆದ
ಅಂತಿಮ ಹಣಾಹಣಿಯಲ್ಲಿ 6-0, 6-3 ನೇರ
ಸೆಟ್ ಗಳಲ್ಲಿ ಜಯ ದಾಖಲಿಸಿದ್ದಾರೆ. ಸುಮಾರು
ಒಂದು ಗಂಟೆ 6 ನಿಮಿಷಗಳ ಕಾಲ ನಡೆದ
ಪಂದ್ಯದಲ್ಲಿ 9ನೇ ಪ್ರಶಸ್ತಿಯನ್ನು
ತನ್ನದಾಗಿಸಿಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಹಿಂಗಿಸ್ ಹಾಗೂ ಮಿರ್ಜಾ
ಅವರು 10 ಫೈನಲ್ ಗಳನ್ನು ಪ್ರವೇಶಿಸಿ 9-1
ನಂತೆ ಯಶಸ್ಸು ಗಳಿಸಿದ್ದಾರೆ.
* ಎರಡು ಗ್ರ್ಯಾನ್ ಸ್ಲಾಮ್ (ವಿಂಬಲ್ಡನ್,
ಯುಎಸ್ ಓಪನ್)
* ಐದು ಡಬ್ಲ್ಯೂಟಿಎ ಪ್ರಿಮಿಯರ್ ಪ್ರಶಸ್ತಿ
(ಬಿಎನ್ ಪಿ ಪರಿಬಾಸ್ ಓಪನ್, ಇಂಡಿಯನ್ ವೆಲ್ಸ್,
ಮಿಯಾಮಿ ಓಪನ್, ಫ್ಯಾಮಿಲಿ ಸರ್ಕಲ್ ಕಪ್-
ಚಾರ್ಲೆಸ್ಟನ್, ಡೊಂಗ್
ಫೆಂಗ್ ಮೋಟರ್ ವುಹಾನ್ ಓಪನ್, ಚೀನಾ
ಓಪನ್-ಬೀಜಿಂಗ್)
* ಒಂದು ಡಬ್ಲ್ಯೂಟಿಎ
ಅಂತಾರಾಷ್ಟ್ರೀಯ ಪ್ರಶಸ್ತಿ
(ಗ್ವಾಜಾಂಹೋ ಅಂತಾರಾಷ್ಟ್ರೀಯ
ಮಹಿಳೆಯರ ಓಪನ್ಸ್)
ಸಾನಿಯಾ ಮಿರ್ಜಾ ಅವರ ಸಾಧನೆಯನ್ನು ಪರಿಗಣಿಸಿದ
ಕ್ರೀಡಾ ಸಚಿವಾಲಯ ಅವರಿಗೆ
ರಾಜೀವ್ ಗಾಂಧಿ ಖೇಲ್ ರತ್ನ
ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದನ್ನು
ಇಲ್ಲಿ ಸ್ಮರಿಸಬಹುದು.
ಒಟ್ಟಾರೆ, ಈ ಜೋಡಿ 6 ಪ್ರಮುಖ ಟೂರ್ನಿಗಳಿಂದ
22 ಪಂದ್ಯಗಳಿಂದ ಅಜೇಯವಾಗಿ
ಉಳಿದಿದೆ. ಮಾರ್ಟಿನಾ ಹಿಂಗಿಸ್ ಅವರಿಗೆ
ಸಿಂಗಪುರ ಡಬ್ಲ್ಯೂಟಿಎ ಪ್ರಶಸ್ತಿ
ವಿಶೇಷವಾಗಿದ್ದು, ಇದು ಅವರ ವೃತ್ತಿ ಬದುಕಿನ 50ನೇ
ಡಬ್ಲ್ಯೂಟಿಎ ಡಬಲ್ಸ್ ಪ್ರಶಸ್ತಿಯಾಗಿದೆ. ವಿಶ್ವದ
15 ಮಂದಿ ಆಟಗಾರರು ಮಾತ್ರ ಈ ಮೈಲಿಗಲ್ಲು
ದಾಟಿದ್ದಾರೆ.
Comments
Post a Comment