Drop


Sunday, November 15, 2015

ಇಂದಿನಿಂದ ಸ್ವಚ್ಛ ಭಾರತ ಸೆಸ್ ಜಾರಿ : ಪಾನ್ಕಾರ್ಡ್ ಬೆಲೆ 107ಕ್ಕೆ ಏರಿಕೆ

ನವದೆಹಲಿ, ನ.15-ಕೇಂದ್ರ ಸರ್ಕಾರ
ಪ್ರಾಯೋಜಿತ ಸ್ವಚ್ಛ ಭಾರತ ಸೆಸ್ ಯೋಜನೆ
ಇಂದಿನಿಂದ ಅನುಷ್ಠಾನಕ್ಕೆ
ಬಂದಿದ್ದು, ಬಹುಪಯೋಗಿ ಪಾನ್ಕಾರ್ಡ್ ಬೆಲೆ 1ರೂ.
ಹೆಚ್ಚಲಿದೆ. ಇದುವರೆಗೆ 106 ರೂ.ಗಳಿಗೆ
ದೊರೆಯುತ್ತಿದ್ದ ಪಾನ್ (ಪಿಎಎನ್-
ಪರ್ಮನೆಂಟ್ ಅಕೌಂಟ್ ನಂಬರ್)
ಕಾರ್ಡ್ ಇಂದಿನಿಂದ 107ರೂ. ಆಗಲಿದೆ.
ಕಳೆದ ವಾರವೇ ಕೇಂದ್ರ ಸರ್ಕಾರ ಘೋಷಿಸಿದ್ದ
ಶೇ.0.5ರಷ್ಟು ಸೆಸ್ ಅನ್ನು ತೆರಿಗೆ ವಿಧಿಸಲರ್ಹವಾದ
ಎಲ್ಲಾ ಸೇವೆಗಳ ಮೇಲೆ ವಿಧಿಸುವ ನೂತನ ವ್ಯವಸ್ಥೆ
ಇಂದಿನಿಂದ (ನ.15)
ಕಾರ್ಯಾನುಷ್ಠಾನದಲ್ಲಿ ಬಂದಿದೆ.
ದೇಶೀಯವಾಗಿ ಯಾವುದೇ ಕಂಪೆನಿ
ಅಥವಾ ವ್ಯಕ್ತಿಗಳ ಎಲ್ಲಾ ಆರ್ಥಿಕ ಚಟುವಟಿಕೆಗಳ
ಮೇಲೆ ಸೂಕ್ತ ನಿಗಾ ವಹಿಸುವ ಅಥವಾ ಸರಿಯಾದ
ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ
ಆದಾಯ ತೆರಿಗೆ ಇಲಾಖೆ ವತಿಯಿಂದ
ನೀಡಲಾಗುವ ಖಾಯಂ ಖಾತಾ
ಸಂಖ್ಯೆ (ಪಾನ್) ಕಾರ್ಡ್ ಪಡೆಯಲು ಇನ್ನು
106ರೂ.ಗಳಿಗೆ ಬದಲು 107 ರೂ.ಗಳನ್ನು
ತೆರಬೇಕಾಗುತ್ತದೆ.
ಇದೇ ರೀತಿ ದೇಶಬಿಟ್ಟು ವಿದೇಶಗಳಲ್ಲಿ ಪಾನ್
ಕಾರ್ಡ್ ಪಡೆಯಲು ಈವರಗೆ
ಕೊಡುತ್ತಿದ್ದ 985 ರೂ.ಗಳ ಬದಲು
ಹೆಚ್ಚುವರಿ 4 ರೂ. ಅಂದರೆ 989ರೂ.
ನೀಡಬೇಕಾಗುತ್ತದೆ.