14/11/2015 ಇಂದು ವಿಶ್ವ ಮಧುಮೇಹ ದಿನ::*

ಬೆಂಗಳೂರು: ಜಗತ್ತಿನ ಸಕ್ಕರೆ ಕಾಯಿಲೆ
ರಾಜಧಾನಿ ಎನಿಸಿರುವ ಭಾರತದಲ್ಲಿ ಯುವ
ಜನರೇ ಹೆಚ್ಚಾಗಿ ಮಧುಮೇಹ ಸಮಸ್ಯೆಗೆ
ಸಿಲುಕುತ್ತಿದ್ದಾರೆ.
ಭಾರತದಲ್ಲಿ ಪ್ರಸ್ತುತ ಆರು ಕೋಟಿ
ಮಧುಮೇಹಿಗಳಿದ್ದಾರೆ. ಅವರ ಪೈಕಿ ಶೇ
50ರಷ್ಟು 25–40ರ ವಯೋಮಾನದವರು.
'ದೇಶದ ಒಟ್ಟು ಮಧುಮೇಹಿಗಳ ಪೈಕಿ ಶೇ 20
ರಷ್ಟು ಜನ ರಾಜ್ಯದಲ್ಲೇ ಇದ್ದಾರೆ'
ಎಂದು ಮಣಿಪಾಲ್ ಆಸ್ಪತ್ರೆಯ
ಮಧುಮೇಹ ತಜ್ಞ ಡಾ.ಶಂಕರ್ ಹೇಳಿದರು.
'ಕೆಲಸದ ಒತ್ತಡ, ಬಾಯಿ ಚಟ, ದುಃಶ್ಚಟ,
ಆಲಸಿತನ ಇತ್ಯಾದಿ ಜೀವನ
ಶೈಲಿಗೆ ಸಂಬಂಧಿತ
ಕಾರಣಗಳಿಂದಾಗಿ ಯುವಜನರಲ್ಲಿ ಈ
ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ.
ಬಹುತೇಕರಿಗೆ ಈ ಕಾಯಿಲೆ ಬಂದಿದ್ದು
ಕೂಡ ತಿಳಿದಿರುವುದಿಲ್ಲ. ಅವರಿಗೆ ಅದರ
ಅರಿವು ಆಗುವ ಹೊತ್ತಿಗೆ
ಪರಿಸ್ಥಿತಿ ವಿಕೋಪಕ್ಕೆ ತಲುಪಿರುತ್ತದೆ'
ಎಂದು ತಿಳಿಸಿದರು.
ಬೆನ್ನತ್ತಿ ಬರುವ ಹಂತಕ: 'ತಂದೆ
ಮತ್ತು ತಾಯಿ ಇಬ್ಬರೂ ಮಧುಮೇಹಕ್ಕೆ
ತುತ್ತಾಗಿದ್ದರೆ ಅವರ ಮಕ್ಕಳಿಗೆ ಇದು ಶೇ
80ರಷ್ಟು ಕಾಣಿಸಿಕೊಳ್ಳುವ
ಸಾಧ್ಯತೆ ಇದೆ.
ಒಂದೊಮ್ಮೆ, ನಾಲ್ಕಾರು
ಮಕ್ಕಳಿದ್ದರೆ ಅವರಲ್ಲಿ ಒಬ್ಬರಂತೂ
ಇದರಿಂದ
ತಪ್ಪಿಸಿಕೊಳ್ಳಲು ಸಾಧ್ಯವೇ
ಇಲ್ಲ' ಎಂದು ಹೇಳಿದರು.
'ಪೋಷಕರ ಪೈಕಿ ಒಬ್ಬರಲ್ಲಿ ಮಾತ್ರ ಸಕ್ಕರೆ
ಕಾಯಿಲೆ ಇದ್ದರೆ ಅವರ ಮಕ್ಕಳಲ್ಲಿ ಶೇ 60
ರಷ್ಟು ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.
ದೊಡ್ಡಪ್ಪ, ಚಿಕ್ಕಪ್ಪ,
ಅತ್ತೆ, ಮಾವ.. ಹೀಗೆ
ತಂದೆ–ತಾಯಿ ಕಡೆ
ಸಂಬಂಧಿಗಳಲ್ಲಿ ಈ ಕಾಯಿಲೆ
ಇದ್ದರೆ ಮಕ್ಕಳಲ್ಲಿ ಅದರ ಪ್ರಭಾವ ಶೇ
30–40 ರಷ್ಟಿರುತ್ತದೆ' ಎಂದು
ತಿಳಿಸಿದರು.
'ಪೋಷಕರಿಂದ ಮಗುವಿಗೆ
ವರ್ಗಾವಣೆಯಾಗುವ ಈ ಕಾಯಿಲೆಯನ್ನು
ತಡೆಯುವಂತಹ ತಂತ್ರಜ್ಞಾನ
ಈವರೆಗೆ ಬಂದಿಲ್ಲ. ಬೀಟಾ
ಸೆಲ್ ಕಸಿ ಮತ್ತು ವಂಶವಾಹಿ
ಚಿಕಿತ್ಸೆಯಿಂದ ಈ ಕಾಯಿಲೆಯನ್ನು
ಗುಣಪಡಿಸುವ ನಿಟ್ಟಿನಲ್ಲಿ
ವಿಶ್ವದಾದ್ಯಂತ ಸಂಶೋಧನೆಗಳು
ನಡೆದಿವೆ' ಎಂದು ಅವರು ತಿಳಿಸಿದರು.
ಆರ್ಥಿಕ ಹೊರೆ:
'ಮಧುಮೇಹಕ್ಕೆ ತುತ್ತಾಗುವ
ಪೀಡಿತರು ಸಕ್ಕರೆ
ಅಂಶವನ್ನು ಹತೋಟಿಯಲ್ಲಿ
ಇಟ್ಟುಕೊಳ್ಳದಿದ್ದರೆ ಅವರ
ಆದಾಯದ ಶೇ 20 ರಷ್ಟು ಪ್ರತಿ
ತಿಂಗಳು ಚಿಕಿತ್ಸೆಗೆ ವೆಚ್ಚ ಮಾಡುವುದು
ತಪ್ಪದು.
ಒಂದೊಮ್ಮೆ,
ಹೃದಯ, ಮೂತ್ರಪಿಂಡ
ತೊಂದರೆ
ಕಾಣಿಸಿಕೊಂಡರಂತೂ
ಅದರ ಪ್ರಮಾಣ ಇನ್ನೂ ಹೆಚ್ಚುತ್ತದೆ'
ಎಂದು ಶಂಕರ್ ಹೇಳಿದರು.
'ಸಕ್ಕರೆ ಕಾಯಿಲೆ ಬಂದ ಮಾತ್ರಕ್ಕೆ
ಹೆದರುವ ಅವಶ್ಯಕತೆ ಇಲ್ಲ. ಆದರೆ,
ತಕ್ಷಣವೇ ಜೀವನ ಶೈಲಿಯಲ್ಲಿ
ಬದಲಾವಣೆ ಮಾಡಿಕೊಳ್ಳಬೇಕು.
ಯೋಗ, ವ್ಯಾಯಾಮ, ನಡಿಗೆ ಇತ್ಯಾದಿ
ಚಟುವಟಿಕೆಗಳ ಮೂಲಕ ನಿತ್ಯ 45
ನಿಮಿಷವಾದರೂ ದೇಹ ದಂಡಿಸಲೇ ಬೇಕು.
ಇದು ಸಾಧ್ಯವಾಗದಿದ್ದರೆ ವಾರಕ್ಕೆ 150
ನಿಮಿಷವಾದರೂ ಬೆವರು ಹರಿಸಲೇ ಬೇಕು'
ಎಂದು ತಿಳಿಸಿದರು.
ಹೇಗಿರಬೇಕು ಆಹಾರ: 'ತಿನ್ನುವ ಆಹಾರದಲ್ಲಿ
ತಲಾ ಶೇ40 ರಷ್ಟು ಪ್ರೋಟಿನ್ ಮತ್ತು
ಕಾರ್ಬೋಹೈಡ್ರೆಟ್ ಮತ್ತು ಶೇ 20 ರಷ್ಟು ಸಕ್ಕರೆ
ಅಂಶ ಇರಬೇಕು.
ಸೊಪ್ಪು, ತರಕಾರಿ,
ಮೊಳಕೆ ಕಾಳುಗಳು,
ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು.
ಮದ್ಯಪಾನ, ಧೂಮಪಾನದಂತಹ
ದುಶ್ಚಟಗಳನ್ನು ತ್ಯಜಿಸಬೇಕು' ಎಂದು
ಹೇಳಿದರು.
'ಮಧುಮೇಹ
ಒಂದೊಮ್ಮೆ
ಬಂದರೆ ಅದರಿಂದ
ತಪ್ಪಿಸಿಕೊಳ್ಳಲು ಆಗದು
ಅದನ್ನು ಉತ್ತಮ
ಜೀವನಶೈಲಿಯಿಂದ ಮಾತ್ರ
ನಿಯಂತ್ರಣದಲ್ಲಿ
ಇಟ್ಟುಕೊಳ್ಳಲು ಸಾಧ್ಯ.
ಹೀಗಾಗಿ, 'ಆರೋಗ್ಯಕರ
ಜೀವನ ಮತ್ತು ಮಧುಮೇಹ'
ಎನ್ನುವುದು ಈ ಬಾರಿಯ ವಿಶ್ವ ಮಧುಮೇಹ
ದಿನದ ಘೋಷಣೆಯಾಗಿದೆ' ಎಂದು
ಅಪೋಲೊ ಆಸ್ಪತ್ರೆ ವೈದ್ಯ
ಡಾ.ದಿನೇಶ್ ಕಾಮತ್ ತಿಳಿಸಿದರು.
ಕಾರಣವಾಗುವ ಅಂಶಗಳು..
ಅತಿಯಾದ ಬೊಜ್ಜು
* ಅತಿಯಾದ ತೂಕ
*ಅಧಿಕ ಕೊಬ್ಬಿನ
ಅಂಶದ ಸೇವನೆ
*ಶ್ರಮವಿಲ್ಲದ ಜೀವನ ಶೈಲಿ
*ಅಧಿಕ ಕುರುಕಲು ತಿಂಡಿ ಸೇವನೆ
ಮಧುಮೇಹದ ಲಕ್ಷಣಗಳು..
*ತುಂಬಾ ನೀರು ಕುಡಿಯುವುದು
*ಹೆಚ್ಚು ಊಟ ಮಾಡಬೇಕು ಎನಿಸುವುದು
*ತೂಕ ಕಳೆದುಕೊಳ್ಳುವುದು
*ಬಹಳ ಹಸಿವಾಗುವುದು
*ನರಗಳ ದೌರ್ಬಲ್ಯ
*ಲಘು ಹೃದಯಾಘಾತ
*ಕಣ್ಣುಗಳಲ್ಲಿ ಸೋಂಕು
*ಗಾಯಗಳು ಮಾಯದಿರುವುದು
ನಪುಂಸಕತ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023