Drop


Monday, November 9, 2015

ಗ್ರೇಡ್-1 ಪ್ರಾಂಶುಪಾಲರ ವರ್ಗಾವಣೆಗೆ ಕೌನ್ಸೆಲಿಂಗ್

ಗ್ರೇಡ್-1 ಪ್ರಾಂಶುಪಾಲರ ವರ್ಗಾವಣೆಗೆ ಕೌನ್ಸೆಲಿಂಗ್
GKPOINTS

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-1 ಪ್ರಾಂಶುಪಾಲರ 2015-16ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ಸರಕಾರ
ಅನುಮೋದನೆ ನೀಡಿದ್ದು, ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ.

ಗ್ರೇಡ್-1 ಪ್ರಾಂಶುಪಾಲರು ನ. 15ರ ವರೆಗೆ ಇಎಂಐಎಸ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

17ರಂದು ವರ್ಗಾವಣೆಗೆ ಅರ್ಹರಿರುವ ಪ್ರಾಂಶುಪಾಲರ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನ.19ರಂದು ನಗರದ ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ.

ಕಾಯಂ ಗ್ರೇಡ್-1 ಪ್ರಾಂಶುಪಾಲರು ಮಾತ್ರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಬಹುದು. ಆದರೆ, ಪ್ರಭಾರ
ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹ/
ಸಹಾಯಕ ಪ್ರಾಧ್ಯಾಪಕರು ವರ್ಗಾವಣೆ ಪ್ರಕ್ರಿಯೆಯಲ್ಲಿ
ಪಾಲ್ಗೊಳ್ಳಲು ಅರ್ಹರಿರುವುದಿಲ್ಲ.
ವರ್ಗಾವಣೆ ಕೌನ್ಸೆಲಿಂಗ್ಗೆ ಹಾಜರಾಗುವ ಅರ್ಹ ಪ್ರಾಂಶುಪಾಲರು ಅಂಗವೈಕಲ್ಯ, ಮಾರಣಾಂತಿಕ
ಕಾಯಿಲೆ, ಪತಿ-ಪತ್ನಿ ಪ್ರಕರಣ/ವಿಧವೆ ಈ ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆ, ಗುರುತಿನ ಪತ್ರ ಹಾಗೂ ಆನ್ಲೈನ್ ಮೂಲಕ ವರ್ಗಾವಣೆಗೆ ಅರ್ಜಿ
ಸಲ್ಲಿಸುವ ಸಂದರ್ಭದಲ್ಲಿ ಪಡೆದಿರುವ ಸ್ವೀಕೃತಿ ಪತ್ರದೊಂದಿಗೆ ಕೌನ್ಸೆಲಿಂಗ್ಗೆ ಹಾಜರಾಗುವಂತೆ ಸೂಚಿಸಲಾಗಿದೆ.
ವಿಧವಾ ವಿಶೇಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಪತ್ರ 3
(ಸಿ) ಅನ್ನು ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸಬೇಕು. ಪತಿ-ಪತ್ನಿ ವಿಶೇಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಪತ್ರ 3 (ಡಿ) ಅನ್ನು ದೃಢೀಕರಿಸಿ ಕಡ್ಡಾಯವಾಗಿ ಸಲ್ಲಿಸುವುದರ
ಜತೆಗೆ, ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಂದ ಪ್ರಮಾಣ ಪತ್ರ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.