Drop


Wednesday, November 11, 2015

ನವೆಂಬರ್ 27ರಂದು ಹುಟ್ಟುವ ಮಗುವಿಗೆ 2 ಲಕ್ಷ!:- 7846888805 ಈ ವಾಟ್ಸಾಪ್ ನಂಬರ್ಗೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು. ಆ ಬಳಿಕ ಆ ದಿನದಂದು ಹುಟ್ಟುವ ಮಗುವಿನ ಬಗ್ಗೆ ವಿವರಣೆ ಕೊಡಬೇಕು.:


ಉದಯವಾಣಿ, Nov 11, 2015, 2:41 PM
IST
ನವೆಂಬರ್ 27 ರಂದು ಜನಿಸುವ
ಒಂದು ಮಗುವಿಗೆ ಎರಡು ಲಕ್ಷ
ರೂ.ಗಳ ಉಚಿತ ಬಾಂಡ್!
ಅರೇ, ಇದು ಯಾವುದೇ
ಸರ್ಕಾರದ ಸ್ಕೀಮ್ ಅಂತೂ ಅಲ್ಲ.
ಹಾಗಂದುಕೊಂಡು
ಖುಷಿಗೊಳ್ಳುವಂತೆಯೂ ಇಲ್ಲ.
ಆದರೆ, ಇಂಥದ್ದೊಂದು ಒಳ್ಳೆಯ
ಅವಕಾಶ ಕೊಡುತ್ತಿರೋದು
ಚಿತ್ರವೊಂದರ ನಿರ್ಮಾಪಕರು.
ಹೌದು, ನವೆಂಬರ್ 27ರಂದು ಜನಿಸುವ
ಮಗುವಿನ ಶಿಕ್ಷಣಕ್ಕೆ ಕೊಡುತ್ತಿರುವ
ಎರಡು ಲಕ್ಷ ರೂ.ಗಳ ಕೊಡುಗೆ
ಇದು. ಅಷ್ಟಕ್ಕೂ 2 ಲಕ್ಷ ರೂ.ಗಳ ಗಿಫ್ಟ್
ಕೊಡುತ್ತಿರೋ ಆ ನಿರ್ಮಾಪಕರು
ಬೇರಾರೂ ಅಲ್ಲ, "ಫಸ್ಟ್ರ್ಯಾಂಕ್
ರಾಜು' ಚಿತ್ರ ನಿರ್ಮಿಸಿರುವ
ಮಂಜುನಾಥ್ ಕಂದಕೂರ.
ಹೌದು, "ಫಸ್ಟ್ರ್ಯಾಂಕ್ ರಾಜು'
ನವೆಂಬರ್ 27 ರಂದು
ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಹಾಗಾಗಿ, ಚಿತ್ರ ಬಿಡುಗಡೆ ಆಗುವ
ದಿನದಂದೇ ರಾಜ್ಯದಲ್ಲಿ
ಹುಟ್ಟುವ ಒಂದು ಮಗುವಿಗೆ
ಮಾತ್ರ ನಿರ್ಮಾಪಕರು ಎರಡು ಲಕ್ಷ
ರೂ.ಗಳನ್ನು ಆ ಮಗುವಿನ
ಶಿಕ್ಷಣಕ್ಕಾಗಿ ಕೊಡುವುದಾಗಿ
ಘೋಷಿಸಿದ್ದಾರೆ. ಅಂದು
ರಾಜ್ಯದಲ್ಲಿ ಜನಿಸುವ ಅಷ್ಟೂ
ಮಗುವಿಗೆ ಈ ಅವಕಾಶವಿಲ್ಲ. ಬದಲಿಗೆ
ಒಂದು ಮಗು ಮಾತ್ರ ಈ ಅವಕಾಶ
ಪಡೆದುಕೊಳ್ಳಲಿದೆ.
ಅಷ್ಟಕ್ಕೂ ನಿರ್ಮಾಪಕ ಮಂಜುನಾಥ್
ಕಂದಕೂರ ಅವರು
ಇಂಥದ್ದೊಂದು ಒಳ್ಳೆಯ
ಉದ್ದೇಶ ಇಟ್ಟಿದ್ದು. ತಮ್ಮ
ಚಿತ್ರದಲ್ಲಿರುವ ಸಂದೇಶಕ್ಕಾಗಿ.
ಚಿತ್ರದಲ್ಲೂ ಶಿಕ್ಷಣದ ಕುರಿತಾದ
ವಿಷಯಗಳಿವೆ. ಹಾಗಾಗಿ
ಮಗುವೊಂದರ ಶಿಕ್ಷಣಕ್ಕೆ ಎರಡು ಲಕ್ಷ
ಕೊಡಲು ಮುಂದಾಗಿದ್ದಾರೆ.
ಹಾಗಾದರೆ, ಎರಡು ಲಕ್ಷ ರೂ
ಪಡೆಯಲು ಆನುಸರಿಸಬೇಕಿರುವ
ವಿಧಾನವಿಷ್ಟೇ. 7846888805 ಈ
ವಾಟ್ಸಾಪ್ ನಂಬರ್ಗೆ ಮೊದಲು
ರಿಜಿಸ್ಟರ್ ಮಾಡಿಕೊಳ್ಳಬೇಕು. ಆ ಬಳಿಕ
ಆ ದಿನದಂದು ಹುಟ್ಟುವ ಮಗುವಿನ
ಬಗ್ಗೆ ವಿವರಣೆ ಕೊಡಬೇಕು.
ಬಂದಂತಹ ಎಲ್ಲಾ ನಂಬರ್ಗಳನ್ನು
ಒಂದೆಡೆ ಕಲೆಹಾಕಿ, ಒಂದನ್ನು ಮಾತ್ರ
ಲಕ್ಕಿಡಿಪ್ನಲ್ಲಿ ಆಯ್ಕೆ
ಮಾಡಲಾಗುವುದು.
ಆಯ್ಕೆಯಾದ ಮಗುವಿಗೆ ನಿರ್ಮಾಪಕರು
ಎರಡು ಲಕ್ಷ ರೂಗಳ ಬಾಂಡ್
ವಿತರಿಸುತ್ತಾರೆ. ಈಗಾಗಲೇ ಚಿತ್ರದ
ಪ್ರಚಾರ ಕಾರ್ಯಕ್ಕೆ ರಾಘವೇಂದ್ರ
ರಾಜ್ಕುಮಾರ್ ಚಾಲನೆ ನೀಡಿದ್ದು,
ರಾಜ್ಯಾದ್ಯಂತ ಚಿತ್ರತಂಡ
ಪ್ರಚಾರಕ್ಕಿಳಿದಿದೆ.