Drop


Wednesday, November 18, 2015

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ
    ♦GKPOINTS♦

ಬೆಂಗಳೂರು, ನ.18- ಮುಂಬರುವ ಜನವರಿ ಅಂತ್ಯದೊಳಗೆ 9511 ಶಿಕ್ಷಕರನ್ನು ನೇಮಕಾತಿ
ಮಾಡಿಕೊಳ್ಳ ಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್
ಪರವಾಗಿ ಉತ್ತರಿಸಿದ ಸಚಿವರು, 1 ರಿಂದ 5ನೇ ತರಗತಿವರೆಗೆ 2511
ಹಾಗೂ 6 ರಿಂದ 8ನೇ ತರಗತಿವರೆಗೆ 7000 ಶಿಕ್ಷಕರ ಹುದ್ದೆಗಳನ್ನು
ಇದೇ ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, 1:2ರಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಅಭ್ಯರ್ಥಿಗಳ
ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ
ಶಾಲೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ
ಹೊಸ ಶಿಕ್ಷಕರನ್ನು ನೀಡಲಾಗುವುದು ಎಂದು ತಿಳಿಸಿದರು.

♠ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು
ಹೊಂದಿರುವವರನ್ನು ಮಾತ್ರ ರೋಸ್ಟರ್ ಹಾಗೂ ಮೆರಿಟ್ ಆಧಾರದ
ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

♠ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ
ಶೌಚಾಲಯ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ
ಬದ್ಧವಾಗಿದೆ ಎಂದು ಶಾಸಕ ಯು.ಬಿ.ಬಣಕಾರ್ ಅವರ ಪ್ರಶ್ನೆಗೆ
ಸಚಿವರು ಉತ್ತರಿಸಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ
ಬಿಜೆಪಿ ಹಿರಿಯ ಸದಸ್ಯ ಗೋವಿಂದ ಖಾರಜೋಳ ಮಾತನಾಡಿ, ಸರ್ಕಾರ
ಆದ್ಯತೆಯಂತೆ ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ಶೌಚಾಲಯ ನಿರ್ಮಿಸುವ ಕೆಲಸವನ್ನು ಶೀಘ್ರವೇ ಮಾಡಬೇಕೆಂದು ತಾಕೀತು ಮಾಡಿದರು.

♦4671 ಹುದ್ದೆ ಖಾಲಿ:♦

ರಾಜ್ಯದಲ್ಲಿನ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಡೈಸ್ ಮಾಹಿತಿಯಂತೆ 4671 ಹುದ್ದೆಗಳು ಖಾಲಿ ಇವೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ 3446 ಹುದ್ದೆಗಳು ಹಾಗೂ ಸರ್ಕಾರಿ ಪ್ರಾಥಮಿಕ
ಶಾಲೆಗಳಲ್ಲಿ 25634 ಹುದ್ದೆಗಳು ಖಾಲಿ ಇವೆ ಎಂದು ಬಿಜೆಪಿ ಶಾಸಕ
ಜೀವರಾಜ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಅನುದಾನಿತ
ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಹೆಚ್ಚುವರಿ ಶಿಕ್ಷಕರೂ ಇದ್ದಾರೆ ಹೆಚ್ಚುವರಿ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ನಿಯೋಜಿಸಲಾಗುತ್ತಿದೆ
ಎಂದು ತಿಳಿಸಿದರು. ಅಲ್ಲದೆ ಸರ್ಕಾರಿ ಪ್ರೌಢಶಾಲೆಗಳಲ್ಲಿ 1727
ಅತಿಥಿ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 15980 ಅತಿಥಿ
ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಆಗ ಜೀವರಾಜ್ ಮಾತನಾಡಿ, ಒಂದು ಕಡೆ ಅನುದಾನಿತ
ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಮತ್ತೊಂದು ಕಡೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು
ಹೇಳುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ, ಸದನಕ್ಕೆ ತಪ್ಪು ಉತ್ತರ
ನೀಡಬಾರದು ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಶಾಸಕರ ಸಲಹೆಯಂತೆ ಶಿಕ್ಷಕರ ನೇಮಕಾತಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

♥ಗೌಡ್ರು ಬೆನಕನಾಳ♥