Drop


Sunday, November 1, 2015

‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮ :-


ರವಿವಾರ - ನವೆಂಬರ್ -01-2015
ಹೊಸದಿಲ್ಲಿ, ಅ.31:
ರಾಜ್ಯವೊಂದು ಪ್ರತಿವರ್ಷವೂ
ಇನ್ನೊಂದು ರಾಜ್ಯವನ್ನು
ಆಯ್ಕೆ ಮಾಡಿಕೊಂಡು ಅದರ
ಸಂಸ್ಕೃತಿ ಮತ್ತು ಭಾಷೆಗೆ ಉತ್ತೇಜನ
ನೀಡುವ ವಿನೂತನ ಅಭಿಯಾನ
ವೊಂದನ್ನು ಕೇಂದ್ರ ಸರಕಾರ
ರೂಪಿಸುತ್ತಿದೆ.
'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ
ಹೊಸ ಕಾರ್ಯಕ್ರಮವೊಂದನ್ನು
ಪ್ರಧಾನಿ ನರೇಂದ್ರ ಮೋದಿ
ಶನಿವಾರ ಘೋಷಿಸಿದ್ದಾರೆ.
ಸದ್ಯದಲ್ಲೇ ಈ ಯೋಜನೆಯನ್ನು
ಆರಂಭಿ ಸಲಾಗುತ್ತಿದ್ದು, ದೇಶದ
ಜನರ ನಡುವೆ ಸಾಂಸ್ಕೃತಿಕ ಸಂಪರ್ಕ
ಸೇತುವೆಯಾಗಲಿದೆ. ಜೊತೆಗೆ,
ಬೇರೆಬೇರೆ ರಾಜ್ಯಗಳಲ್ಲಿ
ವಾಸಿಸುತ್ತಿರುವ ಜನರ ನಡುವೆ ಹೆಚ್ಚಿನ
ಸಂವಾದಕ್ಕೆ ನೆರವಾ ಗಲಿದೆ ಎಂದು
ತಿಳಿಸಲಾಗಿದೆ. ಈ ಕಾರ್ಯಕ್ರಮದ
ಸಂಬಂಧ ವಾಗಿ ನಾನು ಸಣ್ಣ
ಸಮಿತಿಯೊಂದನ್ನು ರಚಿಸಿದ್ದು, ಈ
ಸಮಿತಿ ಯು ಕಾರ್ಯಕ್ರಮದ
ರೂಪುರೇಷೆಯನ್ನು
ಸಿದ್ಧಪಡಿಸುತ್ತಿದೆ ಎಂದು ಪ್ರಧಾನಿ
ಮೋದಿ ತಿಳಿಸಿದ್ದಾರೆ. ದೇಶದ ಪ್ರಥಮ
ಗೃಹ ಸಚಿವ ಸರ್ದಾರ್ ವಲ್ಲಭಭಾಯಿ
ಪಟೇಲ್ರವರ ಜನ್ಮದಿನದ ಸಂದರ್ಭದಲ್ಲಿ
ಆಚರಿಸಲಾಗುತ್ತಿರುವ ರಾಷ್ಟ್ರೀಯ
ಏಕತಾ ದಿನದ ಕಾರ್ಯಕ್ರಮದಲ್ಲಿ
ಮಾತನಾಡುತ್ತ ಪ್ರಧಾನಿ ಈ
ವಿಷಯವನ್ನು ತಿಳಿಸಿದರು.
ಉದಾಹರಣೆಗೆ, 2016ರಲ್ಲಿ ಹರ್ಯಾಣವು
ತಮಿಳುನಾಡಿನೊಂದಿಗೆ ಸಂಪರ್ಕ
ಬೆಳೆಸಲು ನಿರ್ಧರಿಸಿದಲ್ಲಿ ಹರ್ಯಾಣದ
ಶಾಲೆಗಳ ವಿದ್ಯಾರ್ಥಿಗಳಿಗೆ ತಮಿಳು
ಭಾಷೆಯ ನೂರು ವಾಕ್ಯಗಳನ್ನು
ಕಲಿಸಲಾಗುವುದು. ಜೊತೆಗೆ, ಅವರಿಗೆ
ತಮಿಳು ಹಾಡುಗಳನ್ನು ಹಾಡಲು
ಕಲಿಸಲಾಗುವುದು ಎಂದು
ಪ್ರಧಾನಿ ಹೇಳಿದರು.
ಇದರ ಜೊತೆಗೆ, ರಾಜ್ಯಗಳ ಆಹಾರ
ಉತ್ಸವಗಳು, ಎರಡೂ ರಾಜ್ಯಗಳ ಜನರ
ನಡುವೆ ಪ್ರವಾಸ ಇತ್ಯಾದಿ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಬಹುದು ಎಂದು
ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.