ನೇರ ನೇಮಕಾತಿಯಲ್ಲಿ ಬದಲಾವಣೆ ಆಕ್ಷೇಪಣೆ ಸಲ್ಲಿಸಲು ಅವಕಾಶ:

ರಾಜ್ಯ ಸರಕಾರ ಇತ್ತೀಚೆಗೆ ಕರ್ನಾಟಕ
ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ
ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ)
ನಿಯಮ-2006ಕ್ಕೆ ತಿದ್ದುಪಡಿ ತಂದು ಕರಡು
ಅಧಿಸೂಚನೆ (ಡಿಪಿಆರ್ 112 ಎಸ್ಸಿಆರ್ 2013.
ದಿನಾಂಕ: 30-10-2015)
ಹೊರಡಿಸಿದ್ದು, ಆಕ್ಷೇಪ ಸಲ್ಲಿಸಲು
ಸಾರ್ವಜನಿಕರಿಗೆ ಅವಕಾಶ ನೀಡಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ)ಈಗಾಗಲೇ
ಜಾರಿಯಲ್ಲಿರುವ ವ್ಯವಸ್ಥೆ ಮತ್ತು
ಪ್ರಕ್ರಿಯೆಗಳನ್ನು ಪರಿಷ್ಕರಿಸುವ
ಉದ್ದೇಶದಿಂದ ರಾಜ್ಯ ಸರಕಾರ ಈ
ಹಿಂದೆ ರಚಿಸಿದ್ದ, ಕೇಂದ್ರ ಲೋಕಸೇವಾ
ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದ
ಸಮಿತಿಯು ಮಾಡಿರುವ ಶಿಫಾರಸುಗಳ ಅನ್ವಯ ಈ
ತಿದ್ದುಪಡಿ ಮಾಡಲಾಗಿದ್ದು, ಅಕ್ಟೋಬರ್ 30ರಂದು
ಕರಡು ಅಧಿಸೂಚನೆ
ಪ್ರಕಟಗೊಂಡಿದೆ. 15 ದಿನಗಳ
ಒಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ.
ಬದಲಾವಣೆ ಏನೇನು? ಪ್ರಸ್ತುತ ತಿದ್ದುಪಡಿ
ನಿಯಮಾವಳಿ ಪ್ರಸ್ತಾವಿತ ನಿಯಮ 5ನೇ
ತಿದ್ದುಪಡಿಯಲ್ಲಿ ಆಯ್ಕೆಯ ವಿಧಾನವನ್ನು
ಸ್ಪಷ್ಟಪಡಿಸಲಾಗಿದ್ದು (ಮೆತಡ್ ಆಫ್ ಸೆಲೆಕ್ಷನ್),
ಗ್ರೂಪ್ 'ಎ' ಮತ್ತು 'ಬಿ' ತಾಂತ್ರಿಕ ಮತ್ತು
ತಾಂತ್ರಿಕೇತರ ಹುದ್ದೆಗಳಿಗೆ ಅಭ್ಯರ್ಥಿಗಳು
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ
ಅಂಕಗಳು ಹಾಗೂ ಸಂದರ್ಶನದಲ್ಲಿ ಪಡೆದ
ಅಂಕಗಳನ್ನು ಒಟ್ಟು ಗೂಡಿಸಿ (ನಿಯಮ 6ರ
ಪ್ರಕಾರ) ಆಯ್ಕೆ ಮಾಡುವುದು ಎಂದು ತಿಳಿಸಲಾಗಿದೆ.
ಅಲ್ಲದೆ ಗ್ರೂಪ್ 'ಸಿ'ಯ ತಾಂತ್ರಿಕ ಮತ್ತು
ತಾಂತ್ರಿಕೇತರ ಹುದ್ದೆಗಳಿಗೆ ಸಂದರ್ಶನ
ನಡೆಸದೇ,ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ
ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ
ಆಯ್ಕೆಮಾಡಲಾಗುವುದು ಎಂದು ತಿಳಿಸಲಾಗಿದೆ.
ಪ್ರಸ್ತಾವಿತ ಕರಡು ತಿದ್ದುಪಡಿಯಲ್ಲಿ ನಿಯಮ 6ಕ್ಕೆ
ತಿದ್ದುಪಡಿ ಸೂಚಿಸಲಾಗಿದ್ದು, ಮುಖ್ಯವಾಗಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ
ತಿದ್ದುಪಡಿ ಅನ್ವಯವಾಗಲಿದೆ. ಗ್ರೂಪ್ 'ಎ' ಮತ್ತು
'ಬಿ' ತಾಂತ್ರಿಕ ಮತ್ತು ತಾಂತ್ರಿಕೇತರ
ಹುದ್ದೆಗಳಿಗೆ ಮತ್ತು ಗ್ರೂಪ್ 'ಸಿ'ಯ ತಾಂತ್ರಿಕ
ಹುದ್ದೆಗಳಿಗೆ ತಲಾ 200 ಅಂಕಗಳ ತಲಾ 2 ಪ್ರಶ್ನೆ
ಪತ್ರಿಕೆಗಳನ್ನು ನಿಗದಿಪಡಿಸಲಾಗಿದೆ.
ಮೊದಲ ಪತ್ರಿಕೆಯು (ಪತ್ರಿಕೆ-1)
ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ,
ಪ್ರಚಲಿತ ವಿದ್ಯಮಾನಗಳಿಸ
ಸಂಬಂಧಿಸಿದ ವಿಷಯ, ಸಾಮಾನ್ಯ
ವಿಜ್ಞಾನ, ಭಾರತೀಯ ಇತಿಹಾಸ, ಭೂಗೋಳ,
ಸಮಾಜ ವಿಜ್ಞಾನ, ಸಾಮಾನ್ಯ ಮಾನಸಿಕ ಸಾಮರ್ಥ್ಯ
ಮತ್ತು ಅಭ್ಯರ್ಥಿಯು ದಿನನಿತ್ಯ ಗ್ರಹಿಸುವ
ಮತ್ತು ಪಡೆಯುವ ಜ್ಞಾನವನ್ನು
ಪರೀಕ್ಷಿಸುವ ವಿಷಯಗಳನ್ನು
ಒಳಗೊಂಡಿರಲಿದೆ.
ಎರಡನೇ ಪತ್ರಿಕೆಯು (ಪತ್ರಿಕೆ-2) ನಿದಿಷ್ಟ
ವಿಷಯಗಳಿಗೆ (ಛ್ಚಿಜ್ಛಿಜ್ಚಿ ಛ್ಟಿ)
ಸಂಬಂಧಿಸಿದ್ದಾಗಿರುತ್ತದೆ. ಈ ಪ್ರಶ್ನೆ
ಪತ್ರಿಕೆಯನ್ನು ಆಯೋಗವು, ಯಾವ ಹುದ್ದೆಗೆ ನೇಮಕಾತಿ
ಮಾಡಿಕೊಳ್ಳಲಾಗುತ್ತದೆ,
ನಿರ್ವಹಿಸಬೇಕಾಗಿರುವ ಕಾರ್ಯವೇನು, ವಿದ್ಯಾರ್ಹತೆ
ಏನಾಗಿದೆ ಎಂಬುದನ್ನು ಪರಿಶೀಲಿಸಿ,
ನೇಮಕಾತಿ ಮಾಡಿಕೊಳ್ಳುವ ಇಲಾಖೆ
ಅಥವಾ ಪ್ರಾಧಿಕಾರದೊಂದಿಗೆ
ಸಮಾಲೋಚನೆ ನಡೆಸಿ, ಸಿದ್ಧಪಡಿಸಲಿದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ
ಪ್ರಶ್ನೆಪತ್ರಿಕೆಯನ್ನು ಒದಗಿಸಲಾಗುತ್ತದೆ. ಈ ಎರಡೂ
ಪತ್ರಿಕೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ
ಅಭ್ಯರ್ಥಿಯನ್ನು 1:3 ಅನುಪಾತದಲ್ಲಿ ಗ್ರೂಪ್ 'ಎ'
ಮತ್ತು 'ಬಿ' ಹುದ್ದೆಗಳಿಗೆ ಸಂದರ್ಶನಕ್ಕೆ
ಆಹ್ವಾನಿಸಲಾಗುತ್ತದೆ. ಇದೇ ತಿದ್ದುಪಡಿಯ ನಿಯಮ
7ರಲ್ಲಿ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಹುದ್ದೆಗಳಿಗೆ
ಸಂದರ್ಶನದ ಗರಿಷ್ಠ ಅಂಕವನ್ನು
ನಿಗದಿಪಡಿಸಲಾಗಿದ್ದು, ಒಟ್ಟು ಅಂಕಗಳಲ್ಲಿ ಇದು
ಶೇ. 12.50ರಷ್ಟಾಗಿರುತ್ತದೆ.
ಋಣಾತ್ಮಕ ಅಂಕ ನಿಯಮ 6ರ
ತಿದ್ದುಪಡಿಯಲ್ಲಿ ತಾಂತ್ರಿಕೇತರ
'ಸಿ'ಗುಂಪಿನ ಹುದ್ದೆಗಳಿಗೆ (ಪದವಿ ಅರ್ಹತೆ) ತಲಾ
100ಅಂಕಗಳ 2 ಪತ್ರಿಕೆಗಳನ್ನು
ನಿಗದಿಪಡಿಸಲಾಗಿದ್ದು, ಎರಡೂ ಪತ್ರಿಕೆಗಳು
ಕಡ್ಡಾಯವಾಗಿರುತ್ತವೆ. ಪತ್ರಿಕೆ-1 ಸಾಮಾನ್ಯ
ಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು,
ಇದರಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ
ವಿಜ್ಞಾನ, ಭೂಗೋಳ, ಸಾಮಾಜ ವಿಜ್ಞಾನ,
ಭಾರತೀಯ ಸಾಮಾಜ ಮತ್ತು ಇದರ
ಬೆಳವಣಿಗೆ, ಭಾರತದ ಇತಿಹಾಸ, ಭಾರತದ ಸಂವಿಧಾನ
ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ
ಮತ್ತು ಮಾನಸಿಕ ಸಾಮರ್ಥ್ಯ, ಕರ್ನಾಟಕದ ಸಾಮಾಜಿಕ
ಮತ್ತು ಸಾಂಸ್ಕೃತಿಕ ಇತಿಹಾಸ, ಸ್ವಾತಂತ್ರ್ಯ
ನಂತರದ ಕರ್ನಾಟಕದಲ್ಲಿನ ಭೂ ಸುಧಾರಣೆ ಮತ್ತು
ಸಾಮಾಜಿಕ ಬದಲಾವಣೆ, ಕರ್ನಾಟಕದ ಆರ್ಥಿಕತೆ ಮತ್ತು
ಇದರ ಶಕ್ತಿ ಮತ್ತು ದೌರ್ಬಲ್ಯ, ಪ್ರಸ್ತುತ ಸ್ಥಿತಿ,
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ
ಸಂಸ್ಥೆಗಳು, ಕರ್ನಾಟಕದ ಪರಿಣಾಮಕಾರಿ
ಆಡಳಿತದಲ್ಲಿ ವಿಜ್ಞಾನ ಮತ್ತು
ತಂತ್ರಜ್ಞಾನದ ಪಾತ್ರ ಹಾಗೂ ಕರ್ನಾಟಕದ ಪರಿಸರ
ಸಮಸ್ಯೆಗಳು ಮತ್ತು ಅಭಿವೃದ್ಧಿಯ ವಿಷಯಗಳು
ಇರಲಿವೆ.
ಪತ್ರಿಕೆ-2 ಸಂವಹನಕ್ಕೆ
ಸಂಬಂಧಿಸಿದ್ದಾಗಿದ್ದು, ಇದರನ್ನು ಮೂರು
ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ತಲಾ 35
ಅಂಕಗಳ ಸಾಮಾನ್ಯ ಕನ್ನಡ ಮತ್ತು
ಸಾಮಾನ್ಯ ಇಂಗ್ಲಿಷ್ ಪತ್ರಿಕೆ ಹಾಗೂ 30
ಅಂಕಗಳ ಕಂಫ್ಯೂಟರ್ ಜ್ಞಾನ ಪತ್ರಿಕೆ
ಇರಲಿದೆ. ಈ ಪರೀಕ್ಷೆಗಳಲ್ಲಿ
ಪ್ರತಿಯೊಂದು ತಪ್ಪು
ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಮಾಡಿ,
0.25 ಅಂಕಗಳನ್ನು ದಂಡನೆಯಾಗಿ
ಕಳೆಯಲಾಗುತ್ತದೆ ಎಂದು ಪ್ರಸ್ತಾವಿತ
ತಿದ್ದುಪಡಿಯಲ್ಲಿ ಹೇಳಲಾಗಿದೆ.
ಗ್ರೂಪ್ 'ಸಿ' ಹುದ್ದೆಗಳಿಗೆ (ಡಿಪ್ಲಮೊ,
ಪಿಯುಸಿ ಮತ್ತು ಎಸ್ಎಸ್ಎಲ್ಸಿ ಅರ್ಹತೆ) ಕೂಡ 100
ಅಂಕಗಳ ಎರಡು ಪತ್ರಿಕೆ ಇರಲಿದೆ. ಪತ್ರಿಕೆ-1
ಸಾಮಾನ್ಯಜ್ಞಾನಕ್ಕೆ
ಸಂಬಂಧಿಸಿದ್ದಾಗಿದ್ದು, ಪ್ರಚಲಿತ
ವಿದ್ಯಮಾನ, ಭಾರತೀಯ ಸಂವಿಧಾನ,
ವಿಶೇಷವಾಗಿ ಕರ್ನಾಟಕವನ್ನು
ಒಳಗೊಂಡಂತೆ ಭಾರತದ
ಇತಿಹಾಸ, ಕರ್ನಾಟಕ ಸೇರಿದಂತೆ ಭಾರತದ ಭೌಗೋಳಿಕತೆ,
ರಾಜ್ಯ ಮತ್ತು ಪ್ರಾದೇಶಿಕ ಆಡಳಿತ, ಕರ್ನಾಟಕದ
ಆರ್ಥಿಕತೆ ಗ್ರಾಮೀಣಾಭಿವೃದ್ಧಿ ಇತ್ಯಾದಿ,
ಕರ್ನಾಟಕದ ಪರಿಸರ ಸಮಸ್ಯೆಗಳು ಮತ್ತು
ಅಭಿವೃದ್ಧಿಯ ವಿಷಯಗಳಿಗೆ
ಸಂಬಂಧಿಸಿದ ಪ್ರಶ್ನೆ ಕೇಳಲಾಗುತ್ತದೆ.
ಇದರಲ್ಲಿಯು ಕೂಡ ಪತ್ರಿಕೆ-2 ಸಂವಹನಕ್ಕೆ
ಸಂಬಂಧಿಸಿದ್ದಾಗಿದ್ದು, ಇದರನ್ನು ಮೂರು
ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ತಲಾ 35
ಅಂಕಗಳ ಸಾಮಾನ್ಯ ಕನ್ನಡ ಮತ್ತು
ಸಾಮಾನ್ಯ ಇಂಗ್ಲಿಷ್ ಪತ್ರಿಕೆ ಹಾಗೂ 30
ಅಂಕಗಳ ಕಂಫ್ಯೂಟರ್ ಜ್ಞಾನ ಪತ್ರಿಕೆ
ಇರಲಿದೆ. ಋಣಾತ್ಮಕ ಮೌಲ್ಯಮಾಪನವನ್ನು
ಇಲ್ಲಿಯೂ ನಡೆಸಲಾಗುತ್ತದೆ.
ಪ್ರಸ್ತಾವಿತ ತಿದ್ದುಪಡಿಯಲ್ಲಿ ಅಂತಿಮ
ಆಯ್ಕೆ ಪಟ್ಟಿ ಸಿದ್ಧಪಡಿಸುವುದಕ್ಕೆ ಮತ್ತು
ಪ್ರಕಟಣೆಗೆ ಸಂಬಂಧಿಸಿದಂತೆ ಕೂಡ
ಕೆಲ ಬದಲಾವಣೆ ಮಾಡಲಾಗಿದ್ದು, ಆಸಕ್ತರು ತಮ್ಮ
ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಗ್ರಾಮೀಣರಿಗೆ ಅನ್ಯಾಯ? ಗ್ರೂಪ್ 'ಸಿ'
ಹುದ್ದೆಗಳಿಗೆ ನಿಗದಿಮಾಡಲಾಗಿರುವ ಎರಡನೇ
ಪತ್ರಿಕೆಯಲ್ಲಿ ಸಾಮಾನ್ಯಾ ಇಂಗ್ಲಿಷ್ ಮತ್ತು
ಕಂಪ್ಯೂಟರ್ ಜ್ಞಾನದ ವಿಷಯಗಳನ್ನು
ಸೇರಿಸಿರುವುದಕ್ಕೆ ಈಗಾಗಲೇ ತೀವ್ರ ವಿರೋಧ
ವ್ಯಕ್ತವಾಗಿದೆ. ಈ ವಿಷಯಗಳನ್ನು
ಸೇರಿಸಿರುವುದರಿಂದ ಗ್ರಾಮೀಣ ಭಾಗದ
ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ
ಎಂದು ಕೆಲವರು ದೂರಿದ್ದಾರೆ. ಈ ಹಿಂದೆ
ಯುಪಿಎಸ್ಸಿ ಸಾಮಾನ್ಯ ಇಂಗ್ಲಿಷ್
ಪ್ರಶ್ನೆಪತ್ರಿಕೆಯನ್ನು ಜಾರಿಗೆ ತಂದಾಗ
ಹಿಂದಿ ಮಾಧ್ಯಮದ ಅಭ್ಯರ್ಥಿಗಳು
ಪ್ರತಿಭಟನೆ ನಡೆಸಿದ್ದರು. ಕೊನೆಗೆ ಈ
ಪ್ರಶ್ನೆಪತ್ರಿಕೆಯನ್ನು ಕೈಬಿಡಲಾಗಿತ್ತು. ಆದರೆ
ರಾಜ್ಯದಲ್ಲಿ ಮಾತ್ರ ಅದನ್ನು ಮತ್ತೆ ಜಾರಿಗೆ
ತರಲಾಗುತ್ತಿದೆ ಎಂದು ದೂರಿದ್ದಾರೆ. ರಾಜ್ಯದಲ್ಲಿ
ಪಿಯುಸಿ ತರಗತಿಗಳಲ್ಲಾಗಲೀ,
ಪ್ರೌಢಶಿಕ್ಷಣದಲ್ಲಾಗಲೀ
ಕಂಪ್ಯೂಟರ್ ವಿಷಯವನ್ನು ಪಠ್ಯವಾಗಿ
ಸೇರಿಸಿಲ್ಲ. ಹೀಗಾಗಿ ಈ ಕುರಿತು
ಪರೀಕ್ಷೆ ನಡೆಸುವುದು ಸಹ ಸರಿ ಇಲ್ಲ
ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023