ಬಿಗಿ ಬಂದೋಬಸ್ತ್; ಲಂಡನ್ ನಲ್ಲಿ ಮೋದಿಯಿಂದ ಬಸವಣ್ಣ ಪ್ರತಿಮೆ ಅನಾವರಣ::

ಲಂಡನ್: 12ನೇ ಶತಮಾನದ ಸಮಾಜ ಸುಧಾರಕ
ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು
ಲಂಡನ್ ನ ಲ್ಯಾಂಬೆತ್ ನಗರದ ಥೇಮ್ಸ್
ನದಿ ದಂಡೆಯ ಆಲ್ಬರ್ಟ್ ಎಂಬಾಕ್
ಮೆಂಟ್ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ
ಮೋದಿ ಶನಿವಾರ (ಲಂಡನ್ ಕಾಲಮಾನ ಬೆಳಗ್ಗೆ
9.45ಕ್ಕೆ) ಮಧ್ಯಾಹ್ನ ಭಾರತೀಯ
ಕಾಲಮಾನ 3.45ಕ್ಕೆ ಲೋಕಾರ್ಪಣೆ ಮಾಡಿದರು. ಈ
ಸಂದರ್ಭದಲ್ಲಿ ಭಾರತದ ಸಂವಿಧಾನ ಶಿಲ್ಪಿ
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕವನ್ನೂ
ಉದ್ಘಾಟಿಸಲಾಯಿತು.
ಶಿರಾ ಗ್ರೇ ಗ್ರಾನೈಟ್, ಕಪ್ಪು ಕಲ್ಲಿನಿಂದ
ನಿರ್ಮಿಸಿರುವ ಸುಮಾರು 2 ಅಡಿ ಎತ್ತರದ ಬಸವಣ್ಣ
ಪ್ರತಿಮೆ ಲೋಕಾರ್ಪಣೆಗೊಂಡಿದೆ.
ಹಡಗಿನ ಮೂಲಕ ಲಂಡನ್ ಗೆ ಪುತ್ಥಳಿಯನ್ನು
ರವಾನಿಸಲಾಗಿತ್ತು. 2012ರ ಜುಲೈ ತಿಂಗಳಲ್ಲಿ
ಬಸವಣ್ಣ ಪ್ರತಿಮೆ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು.
2013ರ ಫೆಬ್ರುವರಿಯಲ್ಲಿ ತುಮಕೂರಿನ
ಸಿದ್ದಗಂಗಾ ಶ್ರೀಗಳು
ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಿದ್ದರು.
ಪ್ರತಿಮೆ ಸ್ಥಾಪನೆಗೂ ಮುನ್ನ ಹಲವಾರು ವಿಘ್ನಗಳು
ಎದುರಾಗಿತ್ತು. ಕೊನೆಗೂ ಛಲಬಿಡದೆ
ನೀರಜ್ ಪಾಟೀಲ್ ಥೇಮ್ಸ್ ನದಿ
ದಂಡೆ ಮೇಲೆ ಬಸವಣ್ಣ ಪ್ರತಿಮೆ
ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು.
ಕಲಬುರಗಿ ಮೂಲದ ಕನ್ನಡಿಗ, ಲಂಡನ್ ನ
ಲ್ಯಾಂಬೆತ್ ನಗರದ ಮಾಜಿ ಮೇಯರ್
ಡಾ.ನೀರಜ್ ಪಾಟೀಲ ಅವರ
ಪರಿಶ್ರಮದಿಂದ ಥೇಮ್ಸ್ (ಬ್ರಿಟನ್
ಪಾರ್ಲಿಮೆಂಟ್ ಎದುರು) ನದಿ ದಂಡೆಯ
ಪ್ರದೇಶದಲ್ಲಿ ಬಸವೇಶ್ವರರ ಪ್ರತಿಮೆಯನ್ನು
ನಿರ್ಮಿಸಲಾಗಿತ್ತು.
ಪ್ಯಾರಿಸ್ ನಲ್ಲಿ ಶುಕ್ರವಾರ ಐಸಿಸ್ ಉಗ್ರರು 7 ಕಡೆ
ದಾಳಿ ನಡೆಸಿದ್ದು, 150ಕ್ಕೂ ಅಧಿಕ ಜನರು
ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಬಸವಣ್ಣ
ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಿಗಿ
ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವೈಮಾನಿಕ ಗಸ್ತು, 30ಕ್ಕೂ ಹೆಚ್ಚು
ಸಿಬ್ಬಂದಿಯಿಂದ ಬಿಗಿ ಭದ್ರತೆ:
ಥೇಮ್ಸ್ ನದಿ ದಂಡೆಯ ಮೇಲೆ ಜಗಜ್ಯೋತಿ
ಬಸವಣ್ಣನ ಪ್ರತಿಮೆ ಅನಾವರಣಕ್ಕೂ ಮುನ್ನ
ವೈಮಾನಿಕ ಗಸ್ತು ನಿಯೋಜಿಸಲಾಗಿತ್ತು. ಅಲ್ಲದೇ ಪ್ರಧಾನಿ
ಮೋದಿ ಬಸವಣ್ಣನ ಪ್ರತಿಮೆ ಲೋಕಾರ್ಪಣೆ ಮಾಡುವ
ಮೊದಲು ಬಾಂಬ್ ತಪಸಣಾ ದಳ,
ಭದ್ರತಾ ಸಿಬ್ಬಂದಿಗಳು ಸ್ಥಳವನ್ನು
ಪರಿಶೀಲಿಸಿದ್ದರು. ತದನಂತರ ಸ್ಕಾಟ್
ಲ್ಯಾಂಡ್ ಯಾರ್ಡ್ ನ ಸುಮಾರು 30ಕ್ಕೂ ಹೆಚ್ಚು
ಭದ್ರತಾ ಸಿಬ್ಬಂದಿಗಳಿಂದ ಬಿಗಿ ಭದ್ರತೆ
ಒದಗಿಸಲಾಗಿತ್ತು.
ಸಮಾರಂಭದಲ್ಲಿ ಬ್ರಿಟನ್ ಸಂಸದ
ಕೀತ್ ವಾಜ್, ಲ್ಯಾಂಬೆತ್ ನಗರದ
ಮಾಜಿ ಮೇಯರ್ ನೀರಜ್ ಪಾಟೀಲ್,
ಬ್ರಿಟನ್ ಸ್ಫಿಕರ್ ಜಾನ್ ಬರ್ಕೌ ಹಾಜರಿದ್ದರು.ಹನಿ, ಹನಿ
ಮಳೆಯ ನಡುವೆಯೇ ಬಸವಣ್ಣ ಪ್ರತಿಮೆ
ಅನಾವರಣದ ನಂತರ ಪ್ರಧಾನಿ ಮೋದಿ ಸುಮಾರು
ನೂರು ಮಂದಿ ಅತಿಥಿಗಳನ್ನು ಉದ್ದೇಶಿಸಿ
ಮಾತನಾಡಿದರು.
ಇದು ನನ್ನ ಜೀವನದ ಅಪೂರ್ವ ಕ್ಷಣ:
ಮೋದಿ
12ನೇ ಶತಮಾನದಲ್ಲಿ ಲಿಂಗ ಸಮಾನತೆ ಸಾರಿದ್ದ
ಬಸವಣ್ಣ. ಲಂಡನ್ ನಲ್ಲಿ ಪ್ರತಿಮೆ ಸ್ಥಾಪಿಸಲು
ಅವಕಾಶ ಸಿಕ್ಕಿದ್ದು ಸಂತಸವಾಗಿದೆ. ಇದು ನನ್ನ
ಜೀವನದ ಅಪೂರ್ವ ಕ್ಷಣವಾಗಿದೆ
ಎಂದು ಜಗಜ್ಯೋತಿ ಬಸವಣ್ಣನ ಪ್ರತಿಮೆ
ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಪ್ರಧಾನಿ
ನರೇಂದ್ರ ಮೋದಿ ಹೇಳಿದರು.
ಬಸವಣ್ಣನವರ ಪ್ರತಿಮೆ ಅನಾವರಣ ಮಾಡೋ ಅವಕಾಶ
ಸಿಕ್ಕಿದ್ದು ನನ್ನ ಸೌಭಾಗ್ಯ. ಜಾತಿ ಅಸಮಾನತೆ
ಹೋಗಲಾಡಿಸುವಲ್ಲಿ ಬಸವಣ್ಣನವರ ಪಾತ್ರ
ಮಹತ್ತರವಾದದ್ದು. ಅನುಭವ ಮಂಟಪದ
ಕಲ್ಪನೆ ನೀಡಿದ್ದ ಬಸವಣ್ಣ ಮಹಾನ್
ಮಾನವತಾವಾದಿ ಎಂದು ಮೋದಿ ಬಣ್ಣಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023