Drop


Sunday, November 15, 2015

ನೂತನ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್:

ಬೆಂಗಳೂರು: ಕರ್ನಾಟಕ ಸರಕಾರದ
ಅಡ್ವೊಕೇಟ್ ಜನರಲ್ ಆಗಿ ಹಿರಿಯ
ನ್ಯಾಯವಾದಿ ಮಧುಸೂದನ್ ನಾಯಕ್ ಅವರನ್ನು
ನೇಮಿಸಲಾಗಿದೆ.
ಅಡ್ವೊಕೇಟ್ ಜನರಲ್ ಆಗಿದ್ದ
ಹಿರಿಯ ನ್ಯಾಯವಾದಿ ಪ್ರೊ.
ರವಿವರ್ಮಕುಮಾರ್ ಅವರು ಅ.27ರಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ
ರಾಜೀನಾಮೆ ನೀಡಿದ್ದರು. ದಿಲ್ಲಿ
ಪ್ರವಾಸದಲ್ಲಿದ್ದ ಮುಖ್ಯಮಂತ್ರಿ
ಸಿದ್ದರಾಮಯ್ಯ, ಬೆಂಗಳೂರಿಗೆ ವಾಪಸ್ ಆದ
ಬಳಿಕ ಇನ್ನೊಮ್ಮೆ ಚರ್ಚಿಸಿ
ರಾಜೀನಾಮೆ ಅಂಗೀಕರಿಸುವ
ಬಗ್ಗೆ ತೀರ್ಮಾನಿಸುವೆ ಎಂದು
ಹೇಳಿದ್ದರು.
ರವಿವರ್ಮಕುಮಾರ್ ರಾಜೀನಾಮೆ
ಅಂಗೀಕರಿಸಿದ್ದ ಸಿದ್ದರಾಮಯ್ಯ,
ನ.13ರಂದು ನೂತನ ಎ.ಜಿ.ಯಾಗಿ ಮಧುಸೂದನ್
ನಾಯಕ್ ಅವರನ್ನು ನೇಮಿಸಿ ಆದೇಶ
ಹೊರಡಿಸುವಂತೆ ಕಾನೂನು ಇಲಾಖೆಗೆ
ಸೂಚಿಸಿದ್ದರು.
ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ
ಕೂಡಲೇ ಪ್ರೊ. ರವಿವರ್ಮಕುಮಾರ್
ಅವರನ್ನು ಅಡ್ವೊಕೇಟ್ ಜನರಲ್ ಆಗಿ
ನೇಮಕ ಮಾಡಿದ್ದರು. ಅಹಿಂದ, ಪ್ರಗತಿಪರ
ಚಳವಳಿಗಳಲ್ಲಿ ಸಕ್ರಿಯವಾಗಿ
ತೊಡಗಿಸಿಕೊಂಡಿದ್
ದ ರವಿವರ್ಮಕುಮಾರ್, ಸರಕಾರದ ಪ್ರಗತಿಪರ ನಡೆಗೆ
ಬೆನ್ನುಲುಬಾಗಿ ನಿಲ್ಲಲಿದ್ದಾರೆ ಎಂಬ
ನಂಬಿಕೆಯೂ ಸರಕಾರಕ್ಕೆ ಇತ್ತು. ಭಾಷಾ
ಮಾಧ್ಯಮದ ವಿಷಯದಲ್ಲಿ ಅವರು ಸಮರ್ಥವಾಗಿ
ವಾದ ಮಂಡಿಸಲಿಲ್ಲ ಎಂದು ಪ್ರತಿಪಕ್ಷ
ನಾಯಕರು ಅನೇಕ ಬಾರಿ
ಟೀಕಿಸಿದ್ದುಂಟು. ಸಿದ್ದರಾಮಯ್ಯ
ಸಂಪುಟದ ಅನೇಕ ಸಚಿವರಿಗೆ ಅವರ ಧೋರಣೆ ಕುರಿತು
ಆಕ್ಷೇಪವೂ ಇತ್ತು.
ಕಾವೇರಿ ಮತ್ತು ಕೃಷ್ಣಾ ನ್ಯಾಯಾಧಿಕರಣಕ್ಕೆ ತಮ್ಮ
ಅಭಿಪ್ರಾಯ ಕೇಳದೆ ಕರ್ನಾಟಕ ಸರಕಾರದ ಪರ ಹಿರಿಯ
ನ್ಯಾಯವಾದಿಗಳನ್ನು ನೇಮಿಸಲಾಗಿದೆ ಎಂದು
ಅಸಮಾಧಾನ ತೋರಿದ್ದ ರವಿವರ್ಮಕುಮಾರ್
ರಾಜೀನಾಮೆ ನೀಡಲು
ಮುಂದಾಗಿದ್ದರು. ಇತ್ತೀಚೆಗೆ
ಗುಲ್ಬರ್ಗದ ಹೈಕೋರ್ಟ್ ಪೀಠಕ್ಕೆ ಹೆಚ್ಚುವರಿ
ಅಡ್ವೊಕೇಟ್ ಜನರಲ್ ಆಗಿ
ರಾಘವೇಂದ್ರ ನಾಡಗೌಡ ಹಾಗೂ ಧಾರವಾಡ ಹೈಕೋರ್ಟ್
ಪೀಠಕ್ಕೆ ದೇವದತ್ ಕಾಮತ್ ಅವರನ್ನು
ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ
ನೇಮಕ ಮಾಡುವ ಮುನ್ನ ತಮ್ಮನ್ನು ಕಡೆಗಣಿಸಲಾಗಿದೆ
ಎಂದು ರವಿವರ್ಮಕುಮಾರ್
ಮುನಿಸಿಕೊಂಡಿದ್ದರು. ಈ
ಹಿನ್ನೆಲೆಯಲ್ಲಿಯೇ ಅವರು ರಾಜೀನಾಮೆ
ಸಲ್ಲಿಸಿದ್ದರು ಎಂದು ಮೂಲಗಳು ಹೇಳಿದ್ದವು.
ಉತ್ತರ ಕನ್ನಡ ಜಿಲ್ಲೆಯವರು...
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ
ಹೊನ್ನೇಹಳ್ಳಿಯವರಾದ ಮಧುಸೂದನ್
ನಾಯಕ್ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ
ಮುಗಿಸಿದರು. ಮೈಸೂರಿನ ಶಾರದಾ ವಿಲಾಸ ಲಾ ಕಾಲೇಜ್,
ಶಿವಮೊಗ್ಗದ ನ್ಯಾಷನಲ್ ಲಾ
ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ
ನಾಯಕ್ ಅವರು ಮೈಸೂರು ವಿ.ವಿ.ಯಿಂದ
1976ರಲ್ಲಿ ಕಾನೂನು ಪದವಿ ಪಡೆದರು.
ನ್ಯಾ. ಸಂತೋಷ ಹೆಗ್ಡೆ ಮಾರ್ಗದರ್ಶನದಲ್ಲಿ
ವಕೀಲ ವೃತ್ತಿ ಆರಂಭಿಸಿದ ನಾಯಕ್,
ನ್ಯಾ. ಶಿವಶಂಕರ ಭಟ್ ಅವರು
ನ್ಯಾಯಮೂರ್ತಿಗಳಾಗಿ ನೇಮಕವಾಗುವ ಮುನ್ನ ಅವರ
ಅಧೀನದಲ್ಲಿ ಕಾರ್ಯನಿರ್ವಹಿಸಿದ್ದರು.
2006ರಲ್ಲಿ ಹೈಕೋರ್ಟ್ನಿಂದ ಹಿರಿಯ
ನ್ಯಾಯವಾದಿ ಎಂದು
ನಿಯೋಜನೆಗೊಂಡ ಅವರು,
ಆನೆಗಳ ರಕ್ಷಣೆಯ ಅಮಿಕಸ್ಕ್ಯೂರಿ ಆಗಿ
ನೇಮಕವಾಗಿದ್ದರು. ಬಳಿಕ ಕರ್ನಾಟಕ
ವನ್ಯಜೀವಿ ಮಂಡಳಿಗೆ
ನಾಮನಿರ್ದೇಶನವಾಗಿದ್ದರು.