Friday, November 20, 2015

ಐದನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ:-

ಪಟನಾ: ಐದನೇ ಬಾರಿಗೆ ಬಿಹಾರದ
ಮುಖ್ಯಮಂತ್ರಿಯಾಗಿ ಜೆಡಿಯು
ಮುಖಂಡ ನಿತೀಶ್ ಕುಮಾರ್ ಅವರು
ಶುಕ್ರವಾರ ಪ್ರಮಾಣ ವಚನ
ಸ್ವೀಕರಿಸಿದರು. ರಾಜ್ಯಪಾಲ
ರಾಮನಾಥ್ ಕೋವಿಂದ್ ಅವರು
ನಿತೀಶ್ ಕುಮಾರ್ ಅವರಿಗೆ ಪ್ರಮಾಣ
ವಚನ ಬೋಧಿಸಿದರು.
ರಾಷ್ಟ್ರೀಯ ಜನತಾದಳ (ಆರ್​ಜೆಡಿ)
ಮುಖ್ಯಸ್ಥ ಲಾಲು ಪ್ರಸಾದ್
ಯಾದವ್ ಅವರ ಮಕ್ಕಳಾದ ತೇಜಸ್ವಿ
ಯಾದವ್ ಮತ್ತು ತೇಜ್ ಪ್ರತಾಪ್
ಯಾದವ್ ಸೇರಿದಂತೆ 28 ಮಂದಿ
ಸಚಿವರಾಗಿ ನಿತೀಶ್ ಕುಮಾರ್
ಜೊತೆಗೇ ಪ್ರಮಾಣ ವಚನ
ಸ್ವೀಕರಿಸಿದರು. ನಿತೀಶ್ ಹೊರತಾಗಿ
ಆರ್​ಜೆಡಿ ಮತ್ತು ಜೆಡಿ(ಯು)ವಿನ ತಲಾ 12
ಮಂದಿ ಮತ್ತು ಕಾಂಗ್ರೆಸ್​ನ 4 ಮಂದಿ
ಸಚಿವರಾಗಿ ರಾಜ್ಯಪಾಲರಿಂದ
ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸಮಾರಂಭದಲ್ಲಿ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಹಾಗೂ 8 ರಾಜ್ಯಗಳ
ಮುಖ್ಯಮಂತ್ರಿಗಳು ಸೇರಿದಂತೆ
ಅಂದಾಜು 2 ಲಕ್ಷಕ್ಕೂ ಅಧಿಕ ಮಂದಿ
ಸಾಕ್ಷಿಯಾದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಆರ್ ಜೆ
ಡಿ ಹಾಗೂ ಜೆಡಿಯು ಮೈತ್ರಿಕೂಟದ
ನಿತೀಶ್ ಹಾಗೂ ಸಂಪುಟ
ಸಹದ್ಯೋಗಿಗಳ ಪ್ರಮಾಣ ವಚನ
ಸಮಾರಂಭ ನಡೆಯಿತು. ಕಾಂಗ್ರೆಸ್
ಉಪಾಧ್ಯಕ್ಷ ರಾಹುಲ್ ಗಾಂಧಿ, ಎನ್
ಸಿ ಪಿ ಅಧ್ಯಕ್ಷ ಶರದ್ ಪವಾರ್, ಮಾಜಿ
ಪ್ರಧಾನಿ ಎಚ್.ಡಿ.ದೇವೇಗೌಡ
ಸೇರಿದಂತೆ ಗಣ್ಯಾತೀಗಣ್ಯರು
ಹಾಜರಾಗಿದ್ದರು.
ವಿವಿಧ ರಾಜ್ಯಗಳ
ಮುಖ್ಯಮಂತ್ರಿಗಳಾದ ಮಮತಾ
ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್,
ತರುಣ್ ಗೊಗೋಯ್,
ಪಿ.ಕೆ.ಚಾಮ್ಲಿಂಗ್, ಓ.ಐಬೊಬೈ
ಸಿಂಗ್, ನಬಾಂ ತುಕಿ, ವೀರಭದ್ರ ಸಿಂಗ್
ಹಾಗೂ ಸಿದ್ದರಾಮಯ್ಯ
ಸಮಾರಂಭದಲ್ಲಿ
ಪಾಲ್ಗೊಂಡಿದ್ದರು.
ಆಹ್ವಾನ ನೀಡಲಾಗಿದ್ದರೂ
ಪ್ರಧಾನಿ ನರೇಂದ್ರ ಮೋದಿ
ಅವರು ಸಮಾರಂಭದಲ್ಲಿ
ಪಾಲೊಂಡಿರಲಿಲ್ಲ. ಪಕ್ಷದ ರಾಜ್ಯ
ನಾಯಕರು ಹಾಗೂ ಕೇಂದ್ರ
ಸಚಿವರಾದ ವೆಂಕಯ್ಯ ನಾಯ್ಡು
ಮತ್ತು ರಾಜೀವ್ ಪ್ರತಾಪ್ ರೂಡಿ
ಅವರು ಬಿಜೆಪಿಯನ್ನು ಪ್ರತಿನಿಧಿಸಿದ್ದರು.