ಪಿಯು ಉಪನ್ಯಾಸಕರ ನೇಮಕಾತಿ ಶುರು

ಪಿಯು ಉಪನ್ಯಾಸಕರ ನೇಮಕಾತಿ ಶುರು
♣GKPOINTS♣

ಬೆಂಗಳೂರು: ಎಸ್​ಸಿ, ಎಸ್ಟಿ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ದುಬಾರಿ ಶುಲ್ಕದ ವಿಚಾರವಾಗಿ ಅರ್ಧಕ್ಕೇ ಸ್ಥಗಿತವಾಗಿದ್ದ ಪಿಯು ಉಪನ್ಯಾಸಕರ ನೇಮಕಾತಿಗೆ ಸರ್ಕಾರ 3 ತಿಂಗಳ ಬಳಿಕ ಹಸಿರು ನಿಶಾನೆ ತೋರಿದೆ.

ಸಂಗೀತ, ಗಣಕ ವಿಜ್ಞಾನ ಹಾಗೂ ಜೀವಶಾಸ್ತ್ರ ವಿಭಾಗದ 61 ಹುದ್ದೆಗಳನ್ನು ಹೊರತುಪಡಿಸಿ, ಉಳಿದ 1,069 ಪಿಯು ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಪಿಯು ಉಪನ್ಯಾಸಕರ ಹುದ್ದೆಗಾಗಿ 30 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 7.5 ಕೋಟಿ ರೂ.
ಶುಲ್ಕ ಸಂಗ್ರಹವಾಗಿದೆ. ಈಗಾಗಲೇ ಅರ್ಧಂಬರ್ಧ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೂಡ ಪೂರ್ಣವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನೇರ ನೇಮಕಾತಿ ವಿಧಾನದಡಿ ಭರ್ತಿ
ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಖಾಲಿಯಿರುವ 1130 ಪಿಯು ಉಪನ್ಯಾಸಕರ ಹುದ್ದೆಗೆ 2015ರ ಮೇ 16ರಂದು ಅರ್ಜಿ ಆಹ್ವಾನಿಸಲಾಗಿತ್ತು. ಜೂ.16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.

ಗೊಂದಲ ಏನು?:

ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು ಸಂಬಂಧಪಟ್ಟ ಸ್ನಾತಕೋತ್ತರ ಕೋರ್ಸ್​ನಲ್ಲಿ ಶೇ.55 ಅಂಕ ಪಡೆದಿರಬೇಕು ಎಂದು ಪಿಯು ಇಲಾಖೆ ಸುತ್ತೋಲೆ ಹೊರಡಿಸಿತ್ತು. ಯುಜಿಸಿ ನಿಯಮದಂತೆ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲಿ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ ಶೇ.5 ಮೀಸಲಾತಿ ನೀಡಬೇಕು.

ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲೂ ಈ ನಿಯಮ ಪಾಲಿಸಿದ್ದಾರೆ. ಆದರೆ, ಪಿಯು ಇಲಾಖೆ, ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ ಮೀಸಲಾತಿ ನೀಡದಿರುವುದಕ್ಕೆ ಹಲವರು
ಆಕ್ಷೇಪಣೆ ಸಲ್ಲಿಸಿದ್ದರು. ಸಂಗೀತ, ಗಣಕ ವಿಜ್ಞಾನ ಹಾಗೂ ಜೀವಶಾಸ್ತ್ರ ಉಪನ್ಯಾಸಕರ ವಿದ್ಯಾರ್ಹತೆ ಗೊಂದಲ ಹಾಗೂ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳ ಶುಲ್ಕ ಗೊಂದಲ ಸಂಬಂಧ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ 2015ರ ಅಗಸ್ಟ್ ಮೊದಲ ವಾರದಲ್ಲಿ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲಾಗಿತ್ತು.
ಶುಲ್ಕ ವಿನಾಯ್ತಿ: ಸಾಮಾನ್ಯ ಮತ್ತು ಇತರೆ ಪ್ರವರ್ಗದ ಅಭ್ಯರ್ಥಿಗಳಿಗೆ 2500 ರೂ. ಹಾಗೂ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 2000 ರೂ. ಅರ್ಜಿ ಶುಲ್ಕ ನಿಗದಿ ಮಾಡಿತ್ತು. ಇದಕ್ಕೂ ರಾಜ್ಯದ ಎಲ್ಲ ಭಾಗದಿಂದಲೂ ಸಾಕಷ್ಟು ಆಕ್ಷೇಪ ಬಂದಿರುವ ಹಿನ್ನೆಲೆಯಲ್ಲಿ, ಎಸ್​ಸಿ ಮತ್ತು ಎಸ್​ಟಿ ಅಭ್ಯರ್ಥಿಗಳ ಶುಲ್ಕ ವಿನಾಯ್ತಿ ಮಾಡುವಂತೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸಂಗೀತ, ಗಣಕ ವಿಜ್ಞಾನ, ಜೀವಶಾಸ್ತ್ರ ಉಪನ್ಯಾಸಕರ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಪರಿಷ್ಕರಿಸಬೇಕಾಗಿ ರುವುದರಿಂದ, ಈ 3 ವಿಷಯದ 61 ಉಪನ್ಯಾಸಕರನ್ನು ಹೊರತು ಪಡಿಸಿ, 1,069 ಉಪನ್ಯಾಸಕರ ನೇಮಕ ಪ್ರಕ್ರಿಯೆ ಮುಂದುವರಿಸಿದ್ದೇವೆ.

| ಕಿಮ್ಮನೆ ರತ್ನಾಕರ, ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023