Drop


Thursday, November 5, 2015

ಟಿ.ಎಸ್. ಠಾಕೂರ್ ಮುಂದಿನ ಸಿಜೆಐ:

ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಟಿ.ಎಸ್.
ಠಾಕೂರ್ ಅವರು ಸುಪ್ರೀಂಕೋರ್ಟ್ನ
43ನೇ ಮುಖ್ಯ ನ್ಯಾಯಮೂರ್ತಿಯಾಗಿ
ನೇಮಕವಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿ
ಎಚ್.ಎಲ್. ದತ್ತು ಅವರು ಡಿಸೆಂಬರ್
2ರಂದು ನಿವೃತ್ತರಾಗಲಿದ್ದು,
ಸುಪ್ರೀಂಕೋರ್ಟ್ನ ಅತಿ ಹಿರಿಯ
ನ್ಯಾಯಮೂರ್ತಿಗಳಾದ ಠಾಕೂರ್ ಅವರು ತೆರವಾಗುವ
ಸ್ಥಾನವನ್ನು ತುಂಬಲಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಠಾಕೂರ್ ಅವರ ಹೆಸರನ್ನು
ದತ್ತು ಅವರು ಸೋಮವಾರ ಶಿಫಾರಸು ಮಾಡಿದ್ದಾರೆ
ಎಂದು ಮೂಲಗಳು ತಿಳಿಸಿವೆ. ನ್ಯಾಯಮೂರ್ತಿ
ಠಾಕೂರ್ ಅವರ ನೇಮಕದ ಕಡತಕ್ಕೆ ಕಾನೂನು
ಸಚಿವಾಲಯವು ಅನುಮೋದನೆ ನೀಡಿದ
ಬಳಿಕ ಅದನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ.
ರಾಷ್ಟ್ರಪತಿ ಅವರ ಅನುಮತಿ
ದೊರೆತ ಬಳಿಕ ಅವರಿಗೆ ಅಧಿಕಾರ
ನೀಡಲಾಗುತ್ತದೆ.
1952ರಂದು ಜನಿಸಿದ ನ್ಯಾಯಮೂರ್ತಿ ಠಾಕೂರ್
ಅವರು, 1972ರಿಂದ ವಕೀಲಿಕೆ
ಪ್ರಾರಂಭಿಸಿದರು. ಜಮ್ಮು ಮತ್ತು
ಕಾಶ್ಮೀರ ಹೈಕೋರ್ಟ್ನಲ್ಲಿ ನಾಗರಿಕ,
ಅಪರಾಧ, ತೆರಿಗೆ ಮತ್ತು ಸಾಂವಿಧಾನಿಕ ಹಾಗೂ ಸೇವಾ
ಪ್ರಕರಣ ಸೇರಿದಂತೆ ಎಲ್ಲಾ ವಿಧದ
ವಿಷಯಗಳಲ್ಲಿಯೂ ವಕೀಲಿಕೆ
ಮಾಡಿದರು.
ಬಳಿಕ ಖ್ಯಾತ ನ್ಯಾಯವಾದಿಯಾಗಿದ್ದ
ತಂದೆ ಡಿ.ಡಿ. ಠಾಕೂರ್
ಅವರೊಂದಿಗೆ
ಸೇರಿಕೊಂಡರು. ಡಿ.ಡಿ. ಠಾಕೂರ್
ಅವರು ಜಮ್ಮು ಮತ್ತು ಕಾಶ್ಮೀರ
ಹೈಕೋರ್ಟ್ನ ನ್ಯಾಯಮೂರ್ತಿಯಾಗಿ, ನಂತರ
ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
1990ರಲ್ಲಿ ಹಿರಿಯ ವಕೀಲರಾಗಿ ಬಡ್ತಿ
ಪಡೆದ ಟಿ.ಎಸ್. ಠಾಕೂರ್, 1994ರ ಫೆಬ್ರುವರಿಯಲ್ಲಿ
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ
ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದರು.
1994ರಲ್ಲಿ ಕರ್ನಾಟಕ ಹೈಕೋರ್ಟ್ಗೆ ಅವರು
ನ್ಯಾಯಮೂರ್ತಿಯಾಗಿ
ವರ್ಗಾವಣೆಗೊಂಡರು.
ಅವರು 1995ರಲ್ಲಿ ಕಾಯಂ
ನ್ಯಾಯಮೂರ್ತಿಯಾಗಿ ನೇಮಕವಾದರು. ಬಳಿಕ
2004ರಲ್ಲಿ ದೆಹಲಿ ಹೈಕೋರ್ಟ್ಗೆ
ವರ್ಗಾವಣೆಗೊಂಡರು. ಅವರು
2008ರ ಏಪ್ರಿಲ್ನಲ್ಲಿ ದೆಹಲಿ ಹೈಕೋರ್ಟ್ನ
ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ,
2008ರ ಆಗಸ್ಟ್ನಲ್ಲಿ ಪಂಜಾಬ್ ಮತ್ತು
ಹರಿಯಾಣ ಹೈಕೋರ್ಟ್ನ ಮುಖ್ಯ
ನ್ಯಾಯಮೂರ್ತಿಯಾಗಿ ಅವರು ಸೇವೆ ಸಲ್ಲಿಸಿದರು.
ಟಿ.ಎಸ್. ಠಾಕೂರ್ (63) ಅವರು 2009ರ
ನವೆಂಬರ್ 17ರಂದು
ಸುಪ್ರೀಂಕೋರ್ಟ್ನ
ನ್ಯಾಯಮೂರ್ತಿಯಾಗಿ
ನೇಮಕಗೊಂಡರು. 2017ರ
ಜನವರಿ 4ರಂದು ಅವರು ನಿವೃತ್ತರಾಗಲಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್,
ಶಾರದಾ ಚಿಟ್ ಫಂಡ್ ಹಾಗೂ ಬಹುಕೋಟಿ
ಎನ್ಆರ್ಎಚ್ಎಂ ಹಗರಣ ಸೇರಿದಂತೆ
ಅನೇಕ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ
ನ್ಯಾಯಪೀಠದ ನೇತೃತ್ವವನ್ನು ಠಾಕೂರ್
ವಹಿಸಿದ್ದಾರೆ