Drop


Thursday, November 5, 2015

ಭಾರತೀಯ ಮೂಲದ ಹರ್ಜಿತ್ ಸಿಂಗ್ ಕೆನಡಾದ ನೂತನ ರಕ್ಷಣಾ ಸಚಿವ:

ಒಟ್ಟಾವಾ (ಕೆನಡಾ): ಭಾರತೀಯ ಮೂಲದ
ಕೆನಡಾ ಸಿಖ್ಖ್ ಹರ್ಜಿತ್ ಸಜ್ಜಾನ್ (45ವರ್ಷ)
ಅವರನ್ನು ಕೆನಡಾದ ನೂತನ ರಕ್ಷಣಾ ಸಚಿವರನ್ನಾಗಿ
ನೇಮಕ ಮಾಡಿಕೊಳ್ಳುವ ಮೂಲಕ
ಪ್ರಧಾನಿ ಜುಸ್ಟಿನ್ ಅವರ ಸಂಪುಟಕ್ಕೆ
ಸೇರ್ಪಡೆಗೊಂಡಿದ್ದಾರೆ.
ಪ್ರಧಾನಿ ಜುಸ್ಟಿನ್ ಅವರ 30 ಕ್ಯಾಬಿನೆಟ್ ಸದಸ್ಯರು
ಬುಧವಾರ ಒಟ್ಟಾವಾದಲ್ಲಿ ಪ್ರಮಾಣವಚನ
ಸ್ವೀಕರಿಸಿದರು. ಕೆನಡಾ ಆರ್ಮಿ ಫೋರ್ಸ್ ನಲ್ಲಿ
ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದ
ಹರ್ಜಿತ್ ಸಜ್ಜಾನ್ ಅವರು ಕೆನಡಾ ದಕ್ಷಿಣ ವ್ಯಾನ್
ಕೋವರ್ ಕ್ಷೇತ್ರದಿಂದ ಸಂಸದರಾಗಿ
ಆಯ್ಕೆಯಾಗಿದ್ದರು. ಇದೀಗ ನಿವೃತ್ತ
ಕರ್ನಲ್ ಸಜ್ಜಾನ್, ಹಾಲಿ ರಕ್ಷಣಾ ಸಚಿವ.
ಭರ್ಜರಿ ಸಮಾರಂಭದಲ್ಲಿ ಜುಸ್ಟಿನ್ ಕೆನಡಾದ
23ನೇ ಪ್ರಧಾನಿಯಾಗಿ ಪ್ರತಿಜ್ಞಾವಿಧಿ
ಸ್ವೀಕರಿಸಿದ್ದರು. ಹರ್ಜಿತ್ ಸಜ್ಜಾನ್
ಬೋಸ್ನಿಯಾ ಮತ್ತು ಅಫ್ಘಾನಿಸ್ತಾನದ ಕಂದಹಾರ್
ನಲ್ಲಿ ಮಿಲಿಟರಿ ಸೇವೆ ಸಲ್ಲಿಸಿದ್ದರು. ಹರ್ಜಿತ್
ಸೇವೆಗಾಗಿ 2013ರಲ್ಲಿ ಪದಕವನ್ನು ಪಡೆದಿದ್ದರು.