ಚಿನ್ನದ ಠೇವಣೆ ಯೋಜನೆಗೆ ಪ್ರಧಾನಿ ಚಾಲನೆ


ಹೊಸದಿಲ್ಲಿ: ಮನೆಯ ಕಪಾಟುಗಳಲ್ಲಿ
ಭದ್ರವಾಗಿರಿಸಿರುವ ಟನ್ಗಟ್ಟಲೆ ಚಿನ್ನವನ್ನು
ಬ್ಯಾಂಕಿಂಗ್ ವ್ಯವಸ್ಥೆಗೆ ತರುವ
ಚಿನ್ನದ ಠೇವಣೆ ಯೋಜನೆಗೆ ಪ್ರಧಾನಿ ಗುರುವಾರ ಚಾಲನೆ
ನೀಡಿದರು.
'ದೇಶದಲ್ಲಿ ಸುಮಾರು 20,000 ಟನ್ ಚಿನ್ನ ಕೆಲಸಕ್ಕೆ
ಬಾರದೇ ಒಂದೇ ಕಡೆ ಇರುವುದರಿಂದ ಭಾರತ
ಬಡ ರಾಷ್ಟ್ರವಾಗಿದೆ,' ಎಂದು ಪ್ರಧಾನಿ
ಹೇಳಿದ್ದಾರೆ.
ಹಳದಿ ಲೋಹದ ಜತೆ ಭಾರತೀಯ
ಮಹಿಳೆಯರಿಗಿರುವ ಅವಿನಾಭಾವ
ಸಂಬಂಧವನ್ನು ಪ್ರಸ್ತಾಪಿಸಿದ ಪ್ರಧಾನಿ,
'ಚಿನ್ನವನ್ನು ಹೊರತುಪಡಿಸಿ
ಭಾರತೀಯ ಮಹಿಳೆಯರ ಹೆಸರಿನಲ್ಲಿ
ಬೇರೇನೂ ಇರದು. ಇದು ಅವರ ಸಾಮರ್ಥ್ಯ. ಈ
ಯೋಜನೆಯ ಯಶಸ್ಸಿನ ಹಿಂದೆ ಭಾರತದ
ಮಹಿಳೆಯರಿದ್ದಾರೆ,'ಎಂದು ಹೇಳಿದರು.
'ಚಿನ್ನದ ಆಮದನ್ನು
ಕಡಿತಗೊಳಿಸುವುದು ಅನಿವಾರ್ಯ,'
ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ
ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
'ಚಿನ್ನ ಎಂದರೆ ಭದ್ರತೆ, ಆದಾಯದ ಮೂಲ.
ಅದೀಗ ನಮ್ಮ ರಾಷ್ಟ್ರ ನಿರ್ಮಾಣದ
ಭಾಗವಾಗಲಿದೆ,'ಎಂದು ಜೇಟ್ಲಿ ಹೇಳಿದದರು.
ಚಿನ್ನವನ್ನು ನಗದೀಕರಿಸಲು ನಡೆಸಿದ
ಹಿಂದಿನ ಪ್ರಯತ್ನಗಳು ವಿಫಲವಾಗಿದ್ದವು,
ಆದರೆ, ಈ ಬಾರಿ ಹೆಚ್ಚು ಮೊತ್ತದ
ಬಡ್ಡಿ ದರ ನೀಡುತ್ತಿರುವುದರಿಂದ
ಯೋಜನೆ ಯಶಸ್ವಿ ಆಗಲಿದೆ ಎಂಬುದು ಪ್ರಧಾನಿ
ನರೇಂದ್ರ ಮೋದಿ ಅವರ ಭರವಸೆ.
ಯೋಜನೆ ಏನು ?
ಚಿನ್ನವನ್ನು ಕಾಲಕಾಲಕ್ಕೆ ಹರಾಜು ಹಾಕಲು ಇಲ್ಲವೇ
ಆಭರಣ ತಯಾರಿಕರಿಗೆ ಮಾರಾಟ ಮಾಡಲು
ಬ್ಯಾಂಕ್ಗಳು 15 ವರ್ಷಗಳವರೆಗೆ ಚಿನ್ನವನ್ನು
ಸಂಗ್ರಹಿಸಲಿವೆ. ಅದಕ್ಕೆ ಪ್ರತಿಯಾಗಿ ವಾರ್ಷಿಕ
2.25-2.50ರವರೆ ಬಡ್ಡಿ ಪಾವತಿಸಲಿದೆ. ಹಿಂದೆ
ನಿಗದಿಯಾಗಿದ್ದ ದರಕ್ಕಿಂತ ಶೇ.1ರಷ್ಟು ಬಡ್ಡಿ
ದರ ಏರಿಸಲಾಗಿದೆ.
ಆದರೆ, ಚಿನ್ನದ ಮೂಲದ ಬಗ್ಗೆ ತೆರಿಗೆ ಇಲಾಖೆ
ಪ್ರಶ್ನಿಸುವ ಆತಂಕದಲ್ಲಿ ಹೆಚ್ಚಿನ
ಮಂದಿ ಚಿನ್ನ ಠೇವಣಿ ಇಡಲು ಮುಂದೆ
ಬರಲಾರರು ಎಂಬುದು ಬ್ಯಾಂಕಿಂಗ್
ತಜ್ಞರ ಅಭಿಪ್ರಾಯ.
ಪ್ರಮಾಣೀಕೃತ ಕೇಂದ್ರಗಳಲ್ಲಿ
ಠೇವಣಿದಾರರ ಖರ್ಚಿನಲ್ಲೇ ಆಭರಣಗಳನ್ನು
ಕರಗಿಸುವುದರಿಂದ ಶೇ.20-30ರಷ್ಟು ತೂಕ ಕಡಿಮೆ
ಆಗುವುದು ಜನರ ಮತ್ತೊಂದು
ಆತಂಕಕ್ಕೆ ಕಾರಣ ಎನ್ನಲಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023