ಭಾರತದ ಪ್ರಥಮ ತೃತೀಯ ಲಿಂಗಿ ಸಬ್ ಇನ್ಸ್ಪೆಕ್ಟರ್ ಚೆನ್ನೈನ ಪ್ರೀತಿಕಾ ಯಾಶಿನಿ :-
ಭಾರತದ ಪ್ರಥಮ ತೃತೀಯ ಲಿಂಗಿ
ಸಬ್ ಇನ್ಸ್ಪೆಕ್ಟರ್ ಇವರು
ಚೆನ್ನೈ, ಶುಕ್ರವಾರ, 6 ನವೆಂಬರ್ 2015
ಚೆನ್ನೈನ ಪ್ರೀತಿಕಾ ಯಾಶಿನಿ ದೇಶದ ಪ್ರಥಮ
ತೃತೀಯ ಲಿಂಗಿ
ಪೊಲೀಸ್ ಅಧಿಕಾರಿ
ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಪ್ರೀತಿಕಾ ಮೊದಲ ಹೆಸರು
ಪ್ರದೀಪ್ ಕುಮಾರ್. ಪ್ರೌಢವಸ್ಥೆಗೆ
ಬರುತ್ತಿದ್ದಂತೆ ಅವರಲ್ಲಿ ಹೆಣ್ಣಿನ
ಲಕ್ಷಣಗಳು ಕಾಣಿಸಿಕೊಂಡಿವೆ.
ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಪದವಿ
ಓದಿರುವ ಇವರು ಲಿಂಗ ಬದಲಾವಣೆ ಸರ್ಜರಿ
ಮಾಡಿಕೊಳ್ಳುವುದರ ಮೂಲಕ
ಪ್ರೀತಿಕಾ ಎಂದು ಹೆಸರನ್ನು
ಬದಲಾಯಿಸಿಕೊಂಡಿದ್ದಾರೆ.
ಪೊಲೀಸ್
ಅಧಿಕಾರಿಯಾಗಬೇಕೆಂಬ ಮಹದಾಸೆ
ಹೊಂದಿದ್ದ ಪ್ರೀತಿಕಾ
ಅದನ್ನು ನನಸು ಮಾಡಿಕೊಳ್ಳಲು
ದುರ್ಗಮವಾದ ಹಾದಿಯನ್ನೇ ಕ್ರಮಿಸಬೇಕಾಯಿತು.
ಸಬ್ ಇನ್ಸಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ
ಅವರು ಅರ್ಜಿಯನ್ನು ಪೊಲೀಸ್ ನೇಮಕಾತಿ
ಮಂಡಳಿ ತಿರಸ್ಕರಿಸಿತ್ತು. ಅರ್ಜಿಯಲ್ಲಿ
ಲಿಂಗದ ಬಗ್ಗೆ ತಿಳಿಸಬೇಕಾದ ಕಾಲಂನ್ನು
ಅವರು ತುಂಬಿರಲಿಲ್ಲ. ಇದರಿಂದ ಅರ್ಜಿ
ತಿರಸ್ಕೃತಗೊಂಡಿತ್ತು.
ಹೀಗಾಗಿ ನ್ಯಾಯಾಲಯದ ಮೆಟ್ಟಿಲು
ಏರಿದ್ದ ಅವರಿಗೆ ಜಯ ಸಿಕ್ಕಿದ್ದು ಈಗ ಸಬ್
ಇನ್ಸಪೆಕ್ಟರ್ ಆಗಿ
ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ಎಸ್ ಕೆ.ಕೌಲ್ ಹಾಗೂ ನ್ಯಾಯಮೂರ್ತಿ
ಪುಷ್ಪಾ ಸತ್ಯನಾರಾಯಣ
ಒಳಗೊಂಡ ಪೀಠ
ತೃತೀಯ ಲಿಂಗಿಗಳು ಸರ್ಕಾರಿ ಕೆಲಸ
ನಿರ್ವಹಿಸಲು ಸಮರ್ಥರು ಮತ್ತು ಕೆಲಸದ
ಅರ್ಜಿಯಲ್ಲಿ ಪ್ರತ್ಯೇಕ ವರ್ಗ ಮಾಡುವಂತೆ
ಸರ್ಕಾರಕ್ಕೆ ಆದೇಶ ನೀಡಿತು.
ತಮ್ಮ ಕನಸು ನನಸಾದ ಸಂತಷದಲ್ಲಿ
ಪ್ರತಿಕ್ರಿಯಿಸುವ 25 ವರ್ಷದ ಪ್ರೀತಿಕಾ,
"ನನಗೆ ಬಹಳ ಖುಷಿ ತಂದಿದೆ. ಇದು
ಸಂಪೂರ್ಣ ತೃತೀಯ ಲಿಂಗಿ
ಸಮುದಾಯಕ್ಕೆ ಒಂದು ಹೊಸ
ಆರಂಭವನ್ನು ನೀಡಿದೆ. ಐಪಿಎಸ್
ನನ್ನ ಮುಂದಿನ ಗುರಿ," ಎನ್ನುತ್ತಾರೆ.
ತಮಿಳುನಾಡು ಪೊಲೀಸ್
ಇಲಾಖೆಯಲ್ಲಿ ಈಗಾಗಲೇ ಮೂವರು ತೃತೀಯ
ಲಿಂಗಿಗಳು ಪೊಲೀಸ್
ಪೇದೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Comments
Post a Comment