Thursday, November 12, 2015

ಪಡಿತರ ಕಾರ್ಡ್ ನಿಂದ ನಾನಾ ಪ್ರಯೋಜನ:

– ನಿರೂಪಣೆ: ಭಾಗ್ಯ ಚಿಕ್ಕಣ್ಣ
ಜನರ ಬದುಕು ಹಸನಾಗಿಸಲು
ಸರ್ಕಾರಗಳು ಅನೇಕ
ಯೋಜನೆಗಳನ್ನು ಜಾರಿಗೆ
ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ
ಆ ಯೋಜನೆಗಳು ಅರ್ಹ
ಫಲಾನುಭವಿಗಳನ್ನು
ತಲುಪುತ್ತಲೇ ಇಲ್ಲ. ಈ ಕೊರತೆ
ನೀಗಿಸಿ ಯೋಜನೆಗಳ
ಪ್ರಯೋಜನ ಜನಸಾಮಾನ್ಯರಿಗೆ
ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ
ಪ್ರತಿ ಗುರುವಾರ ಪ್ರಕಟಿಸುತ್ತಿರುವ
ನಿಮ್ಮ ಹಕ್ಕು ನಮ್ಮ ಧ್ವನಿ' ಮಾಹಿತಿ
ಕೈಪಿಡಿ ಸರಣಿಯಲ್ಲಿ ಈ ವಾರ ಆಹಾರ
ಮತ್ತು ನಾಗರಿಕ ಸರಬರಾಜು
ಇಲಾಖೆಯಡಿಯಲ್ಲಿ ದೇಶದ ಪ್ರತಿ
ನಾಗರಿಕನಿಗೂ ಅನ್ನ, ಆಹಾರ,
ವೈದ್ಯಕೀಯ ಚಿಕಿತ್ಸೆ
ಲಭ್ಯಗೊಳಿಸಲು ಜಾರಿಯಲ್ಲಿರುವ
ಪಡಿತರ ಚೀಟಿ ಯೋಜನೆಯ ಮಾಹಿತಿ
ನೀಡಲಾಗಿದೆ. ಎಪಿಎಲ್, ಬಿಪಿಎಲ್ ಮತ್ತು
ಅಂತ್ಯೋದಯ ಕಾರ್ಡ್
ಪಡೆಯುವುದು ಹೇಗೆ? ಅದರ
ಪ್ರಯೋಜನಗಳೇನು
ಎಂಬಿತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ.
ಎಪಿಎಲ್ ಕಾರ್ಡ್​ಗೆ ಯಾರ್ಯಾರು
ಅರ್ಹರು?
* ಬಡತನ ರೇಖೆಗಿಂತ ಮೇಲಿರುವ
ಎಲ್ಲರೂ ಎಪಿಎಲ್ ಕಾರ್ಡ್ ಪಡೆಯಲು
ಅರ್ಹರಾಗಿರುತ್ತಾರೆ.
* ಆದಾಯ ತೆರಿಗೆ ಪಾವತಿಸುವ
ಸದಸ್ಯರನ್ನು ಒಳಗೊಂಡ
ಕುಟುಂಬ
* ಎಲ್ಲ ವರ್ಗದ ಸರ್ಕಾರಿ ನೌಕರರು
* ಸರ್ಕಾರಿ ಸ್ವಾಮ್ಯದ ಉದ್ಯಮಗಳು/
ಮಂಡಳಿಗಳು/ನಿಗಮಗಳ ಕಾಯಂ
ನೌಕರರು
* ಸ್ವಾಯತ್ತ ಸಂಸ್ಥೆಯ/ಮಂಡಳಿಗಳ
ನೌಕರರು
* ಸಹಕಾರ ಸಂಘಗಳ ಕಾಯಂ ಸಿಬ್ಬಂದಿ
* ವೃತ್ತಿಪರ ವರ್ಗಗಳು: ವೈದ್ಯರು,
ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕ
ಪರಿಶೋಧಕರು
* 3 ಹೆಕ್ಟೇರ್ (7.1/2 ಎಕರೆ) ಒಣಭೂಮಿ,
ತತ್ಸಮಾನ ನೀರಾವರಿ ಭೂಮಿ
ಹೊಂದಿರುವವರು
* ಅನುದಾನಿತ/ಅನುದಾನರಹಿತ
ಶಾಲಾ ಕಾಲೇಜುಗಳ ನೌಕರರು
* ನೋಂದಾಯಿತ
ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್/
ಕಮಿಷನ್ ಏಜೆಂಟ್ಸ್/ಬೀಜ, ಗೊಬ್ಬರ
ಇತ್ಯಾದಿ ಡೀಲರ್ಸ್
* ಮನೆ/ಮಳಿಗೆ/ಕಟ್ಟಡಗಳನ್ನು ಬಾಡಿಗೆಗೆ
ನೀಡಿ ವರಮಾನ ಪಡೆಯುವವರು
* ತಿಂಗಳಿಗೆ ಸರಾಸರಿ ರೂ.450 ರೂ.
ಗಿಂತ ಮೇಲ್ಪಟ್ಟು ವಿದ್ಯುತ್ ಬಿಲ್
ಪಾವತಿಸುವ ಕುಟುಂಬ
* ಬಹುರಾಷ್ಟ್ರೀಯ ಕಂಪನಿ,
ಉದ್ದಿಮೆ/ಕೈಗಾರಿಕೆಗಳ ನೌಕರರು
* 100 ಸಿ.ಸಿ.ಗೆ ಮೇಲ್ಪಟ್ಟ ಇಂಧನ
ಚಾಲಿತ ವಾಹನಗಳನ್ನು
ಹೊಂದಿರುವ ಕುಟುಂಬ
ಎಪಿಎಲ್ ಕಾರ್ಡ್​ದಾರರಿಗೆ ಏನೇನು
ಸೌಲಭ್ಯ?
* ಒಂದು ಕುಟುಂಬಕ್ಕೆ ಗರಿಷ್ಠ 5 ಕೆ.ಜಿ.
ಅಕ್ಕಿ, 5 ಕೆ.ಜಿ. ಗೋಧಿ
ನೀಡಲಾಗುತ್ತದೆ.
* ನೋಂದಾಯಿತ ಸರ್ಕಾರಿ
ನ್ಯಾಯ ಬೆಲೆ ಅಂಗಡಿಗಳಲ್ಲಿ 5 ಕೆ.ಜಿ.
ಧಾನ್ಯ ವಿತರಿಸಲಾಗುತ್ತದೆ.
* ಪಡಿತರ ಚೀಟಿ ಹೊಂದಿರುವ
ಕುಟುಂಬದ ಒಬ್ಬ ಸದಸ್ಯನಿಗೆ
15ರೂ.ಗೆ 3 ಕೆ.ಜಿ. ಅಕ್ಕಿ, 10ರೂ.ಗೆ 2 ಕೆ.ಜಿ.
ಗೋಧಿ
* ರಾಜೀವ್​ಗಾಂಧಿ
ಆರೋಗ್ಯಶ್ರೀ
ಯೋಜನೆಯಡಿ ರಿಯಾಯಿತಿ ದರದಲ್ಲಿ
ಚಿಕಿತ್ಸೆ
ಬಿಪಿಎಲ್ ಕಾರ್ಡ್​ಗೆ ಏನೇನು ಸೌಲಭ್ಯ?
* ಉಚಿತವಾಗಿ 5 ಕೆ.ಜಿ. ಧಾನ್ಯ (ರಾಗಿ,
ಅಕ್ಕಿ, ಗೋಧಿ)
* ಒಂದು ಕುಟುಂಬಕ್ಕೆ ಗರಿಷ್ಠ 20
ಕೆ.ಜಿ. ಧಾನ್ಯ ವಿತರಣೆ
* 13.50 ರೂ.ಗೆ ಒಂದು ಕೆ.ಜಿ. ಸಕ್ಕರೆ
* 25ರೂ.ಗೆ 1 ಲೀಟರ್ ತಾಳೆಎಣ್ಣೆ
* 2 ರೂ.ಗೆ 1ಕೆ.ಜಿ. ಉಪ್ಪು
* ಗ್ಯಾಸ್ ಸಂಪರ್ಕ
ಹೊಂದಿಲ್ಲದವರಿಗೆ ಪ್ರತಿ ಲೀಟರ್​ಗೆ
18.50ರೂ.ನಂತೆ ಕುಟುಂಬದ ಒಬ್ಬ
ಸದಸ್ಯನಿಗೆ 3 ಲೀ. ಸೀಮೆಎಣ್ಣೆ
* ಪೂರ್ಣ ಕುಟುಂಬಕ್ಕೆ ಗರಿಷ್ಠ 5
ಲೀ. ಸೀಮೆಎಣ್ಣೆ
* ಬಿಪಿಎಲ್ ಕಾರ್ಡ್ ಹೊಂದಿರುವ
ಕುಟುಂಬದಲ್ಲಿ ಜನಿಸಿದ
ಹೆಣ್ಣುಮಕ್ಕಳಿಗೆ 'ಭಾಗ್ಯಲಕ್ಷ್ಮೀ
ಬಾಂಡ್' ವಿತರಣೆ
* ವಾಜಪೇಯಿ ಆರೋಗ್ಯಶ್ರೀ
ಯೋಜನೆಯಡಿ ಕುಟುಂಬದ ಎಲ್ಲ
ಸದಸ್ಯರಿಗೂ ಉಚಿತ ಚಿಕಿತ್ಸೆ
ಬಿಪಿಎಲ್ ಕಾರ್ಡ್​ಗೆ ಅರ್ಹರು?
* ಆದಾಯ ತೆರಿಗೆ ವ್ಯಾಪ್ತಿಗೆ ಬರದ
ಕುಟುಂಬಗಳು
* ಸೂರಿಲ್ಲದವರು, ದಿನಗೂಲಿ ನೌಕರರು
* ನಗರ ಪ್ರದೇಶದಲ್ಲಿ 17 ಸಾವಿರ
ರೂ.ಗಿಂತ ಕಡಿಮೆ ವಾರ್ಷಿಕ ಆದಾಯ
ಉಳ್ಳವರು
* ಗ್ರಾಮೀಣ ಪ್ರದೇಶದಲ್ಲಿ 12
ಸಾವಿರ ರೂ.ಗಿಂತ ಕಡಿಮೆ ವಾರ್ಷಿಕ
ಆದಾಯ ಉಳ್ಳವರು
* ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ
ವ್ಯಾಪಾರ ಮಾಡುವವರು
* ಗರಿಷ್ಠ 155 ರೂ.ಗಿಂತ ಅಧಿಕ
ದೈನಂದಿನ ಆದಾಯ ಇಲ್ಲದವರು
* ಒಂದು ಆಟೋರಿಕ್ಷಾ
ಮಾಲೀಕರಾಗಿ ಸ್ವತ: ಓಡಿಸುತ್ತಿದ್ದು,
ಬೇರೆ ಆದಾಯ ಮೂಲವಿಲ್ಲದವರು
ಅಂತ್ಯೋದಯ (ಎಎವೈ) ಕಾರ್ಡ್
ಯಾರ್ಯಾರಿಗೆ?
* ಕಡು ಬಡವರು, ಅಂಗವಿಕಲರು
ಮತ್ತು ಸೂರು ಇಲ್ಲದವರು.
* ವೃದ್ಧರು, ಒಂಟಿ ಜೀವನ
ನಡೆಸುತ್ತಿರುವ ಅಸಹಾಯಕರು,
* ಎಚ್​ಐವಿ ಪೀಡಿತರು, ದುಡಿಯಲು ಶಕ್ತಿ
ಇಲ್ಲದವರು
ಎಎವೈಗೆ ಏನೇನು ಸೌಲಭ್ಯ?
* ಅಂತ್ಯೋದಯ ಅನ್ನ
ಯೋಜನೆ ಅಡಿ ನೀಡ ಲಾಗುವ
ಎಎವೈ ಪಡಿತರ ಚೀಟಿಗೆ ಉಚಿತವಾಗಿ 35
ಕೆ.ಜಿ. ಧಾನ್ಯ ಲಭ್ಯ (ರಾಗಿ, ಅಕ್ಕಿ,
ಗೋಧಿ)
* 13.50 ರೂ. ದರದಲ್ಲಿ ಒಂದು ಕೆ.ಜಿ.
ಸಕ್ಕರೆ
* 25ರೂ.ಗೆ 1 ಲೀಟರ್ ತಾಳೆಎಣ್ಣೆ,
* 2 ರೂ.ಗೆ 1ಕೆ.ಜಿ. ಉಪ್ಪು
* ವಾಜಪೇಯಿ ಆರೋಗ್ಯಶ್ರೀ
ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ
ಅಗತ್ಯ ದಾಖಲೆ ಪತ್ರಗಳು
* ಎಪಿಎಲ್ – ವೋಟರ್ ಐಡಿ, ಆಧಾರ್
ಕಾರ್ಡ್, ಪಾನ್ ಕಾರ್ಡ್, ಡ್ರೖೆವಿಂಗ್
ಲೈಸೆನ್ಸ್, ವಿಳಾಸ ಪುರಾವೆ, ಭಾವಚಿತ್ರ
* ಬಿಪಿಎಲ್ – ಆದಾಯ ಪ್ರಮಾಣ ಪತ್ರ,
ವೋಟರ್ ಐಡಿ, ಆಧಾರ್ ಕಾರ್ಡ್,
ಡ್ರೖೆವಿಂಗ್ ಲೈಸೆನ್ಸ್, ವಿಳಾಸ
ಪುರಾವೆ, ಭಾವಚಿತ್ರ
* ಅಂತ್ಯೋದಯ – ಆದಾಯ
ಪ್ರಮಾಣಪತ್ರ, ಆರೋಗ್ಯ
ಪ್ರಮಾಣಪತ್ರ, ದೈಹಿಕ ಹಾಗೂ
ಮಾನಸಿಕ ದೌರ್ಬಲ್ಯಗಳಿದ್ದಲ್ಲಿ ವೈದ್ಯ
ಪ್ರಮಾಣಪತ್ರ, ಆಧಾರ್ ಕಾರ್ಡ್, ವಿಳಾಸ
ಪುರಾವೆ, ಭಾವಚಿತ್ರ
ಏನಿದು ವಾಜಪೇಯಿ
ಆರೋಗ್ಯಶ್ರೀ ಯೋಜನೆ?
ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ ಅಡಿಯಲ್ಲಿ ಸುವರ್ಣ
ಆರೋಗ್ಯ ಸುರಕ್ಷಾ ಟ್ರಸ್ಟ್​
ನಡಿಯಲ್ಲಿ 2009ರಿಂದ
ಚಾಲನೆಯಲ್ಲಿರುವ ವಾಜಪೇಯಿ
ಆರೋಗ್ಯಶ್ರೀ ಯೋಜನೆ
ಬಿಪಿಎಲ್ ಪಡಿತರ ಹೊಂದಿದವರಿಗೆ ಸೂಪರ್
ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ
ಮತ್ತು ಶಸ್ತ್ರಚಿಕಿತ್ಸೆ ಒದಗಿಸಲು
ರೂಪಿಸಲಾಗಿದೆ. ಈ
ಯೋಜನೆಯಡಿಯಲ್ಲಿ ಒಂದು
ಕುಟುಂಬಕ್ಕೆ ವರ್ಷಕ್ಕೆ 1.5ಲಕ್ಷ ರೂ.
ಮಿತಿಯಲ್ಲಿ ಕುಟುಂಬದ 5 ಸದಸ್ಯರು
ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಗೆ
ಅನುಗುಣವಾಗಿ ಹೆಚ್ಚುವರಿ
50,000ರೂ. ಅನ್ನು ಯೋಜನೆ
ಮೂಲಕ ಸರ್ಕಾರ ಭರಿಸುತ್ತದೆ. ಈ
ಚಿಕಿತ್ಸೆಗಳಿಗೆ ರಾಜ್ಯಾದ್ಯಂತ 130 ನೆಟ್​
ವರ್ಕ್ ಆಸ್ಪತ್ರೆಗಳು
ನೋಂದಣಿಯಾಗಿದ್ದು,
402ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಚಿಕಿತ್ಸೆ
ಪಡೆಯಬಹುದು. ಅಲ್ಲದೆ,
ಯೋಜನೆಯಡಿಯಲ್ಲಿ ಆಯಾ
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ
ತಿಂಗಳಿಗೊಮ್ಮೆ ಆರೋಗ್ಯ
ತಪಾಸಣಾ ಶಿಬಿರ ನಡೆಸಲಿದ್ದು,
ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಪಡಿತರ ಕಾರ್ಡ್ ವಿತರಣೆ ಯಾವಾಗ?
ವರ್ಷದಾದ್ಯಂತ ನೋಂದಣಿ
ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಯಾವಾಗ ಬೇಕಾದರೂ ನಿಗದಿತ
ಸ್ಥಳಗಳಲ್ಲಿ ಸೂಕ್ತ ದಾಖಲೆಗಳನ್ನು
ನೀಡಿ ಬಯೋಮೆಟ್ರಿಕ್​ನಲ್ಲಿ
ನೋಂದಣಿ
ಮಾಡಿಕೊಳ್ಳಬಹುದು. ಇದಕ್ಕೀಗ
ಆಧಾರ್ ಕಾರ್ಡ್​ನ್ನು ಲಿಂಕ್
ಮಾಡಲಾಗುತ್ತದೆ. ಎಪಿಎಲ್ ಕಾರ್ಡ್
ಸುಲಭವಾಗಿ ಎಲ್ಲ ವರ್ಗದವರೂ
ಪಡೆಯಬಹುದು. ಇದನ್ನು
ಭಾರತೀಯ ಪ್ರಜೆ ಎಂಬ ಅರ್ಹತೆ
ಆಧಾರದ ಮೇಲೆ ವಿತರಿಸಲಾಗುತ್ತದೆ.
ಆದರೆ ಬಿಪಿಎಲ್ ಮತ್ತು
ಅಂತ್ಯೋದಯ ಪಡಿತರ ವಿತರಣೆ
ಮಾತ್ರ ಬಯೋಮೆಟ್ರಿಕ್​ನಲ್ಲಿ
ನೋಂದಣಿಯ ನಂತರ,
ದಾಖಲಾತಿಗಳ ಪರಿಶೀಲನೆ, ಸ್ಥಳ
ಪರಿಶೀಲನೆ ನಡೆಸುವ ಸರ್ಕಾರಿ
ಇಲಾಖಾ ಅಧಿಕಾರಿಗಳು ಅರ್ಹರು
ಎಂದು ದೃಢೀಕರಣ ನೀಡಿದ
ನಂತರವೇ ಆಯಾ ಜಿಲ್ಲಾ
ಕೇಂದ್ರಗಳಲ್ಲಿ ವಿತರಣೆ
ಮಾಡಲಾಗುತ್ತದೆ. ಇದು ವರ್ಷದ
ಗರಿಷ್ಠ 6 ತಿಂಗಳ ಕಾಲಾವಧಿಯಲ್ಲಿ
ನಡೆಯುವ ಪ್ರಕ್ರಿಯೆಯಾಗಿದೆ.
ನೋಂದಣಿ ಎಲ್ಲಿ?
* ಬೆಂಗಳೂರು ಒನ್, ಕರ್ನಾಟಕ ಒನ್
ನೋಂದಣಿ ಕೇಂದ್ರಗಳು
ಬೆಂಗಳೂರು ಹೊರತುಪಡಿಸಿ,
ರಾಜ್ಯದ ಯಾವುದೇ ಭಾಗದಲ್ಲಿ
ಆಯಾ ವ್ಯಾಪ್ತಿಗೊಳಪಟ್ಟ
ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ
ಬಯೋಮೆಟ್ರಿಕ್ ಮೂಲಕ
ನೋಂದಾಯಿಸಿಕೊಳ್ಳಲಾಗುವ
ುದು. ಇದಕ್ಕೆ 50 ರೂ. ಶುಲ್ಕ
ನಿಗದಿಯಾಗಿದೆ.
ವಾಜಪೇಯಿ ಆರೋಗ್ಯಶ್ರೀ
ಯೋಜನೆಯ ಹೆಚ್ಚಿನ ವಿವರಗಳಿಗೆ
ಜಿಲ್ಲಾ ಮಟ್ಟದ, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಅಧಿಕಾರಿ, ಜಿಲ್ಲಾ ಸರ್ಜನ್,
ಆಡಳಿತಾತ್ಮಕ ವೈದ್ಯಕೀಯ
ಅಧಿಕಾರಿ, ತಾಲೂಕು ಆರೋಗ್ಯ
ಅಧಿಕಾರಿ, ಗ್ರಾಮ ಮಟ್ಟದಲ್ಲಿ ಆಶಾ
ಕೇಂದ್ರಗಳು, ಆರೋಗ್ಯ
ಉಪಕೇಂದ್ರಗಳನ್ನು
ಸಂರ್ಪಸಬಹುದು.
ಕಾರ್ಯನಿರ್ವಾಹಕ ನಿರ್ದೇಶಕ 080-
22341572, 22341571
ಸಲಹೆಗಾರ: 9900060126
ಉಪನಿರ್ದೇಶಕರು: 7760999503,
7760999504