ಕನ್ನಡಿಗ ಶಿವಮೊಗ್ಗದ ಶ್ರೀಧರಮೂರ್ತಿಯ ಕೈಯಲ್ಲಿ ಅರಳಿದ ಲಂಡನ್ ಬಸವಣ್ಣ!::


ಶಿವಮೊಗ್ಗ: ಲಂಡನ್​ನಲ್ಲಿ ಇತ್ತೀಚೆಗೆ
ಪ್ರಧಾನಿ ನರೇಂದ್ರ ಮೋದಿ
ಅನಾವರಣಗೊಳಿಸಿದ ವಿಶ್ವಗುರು
ಬಸವೇಶ್ವರರ ಪುತ್ಥಳಿ ತಯಾರಿಸಿದ್ದು
ಶಿವಮೊಗ್ಗದ ಕಲಾವಿದ!
ಹೌದು. ಐತಿಹಾಸಿಕ ಹಾಗೂ
ಅವಿಸ್ಮರಣೀಯ ಪುತ್ಥಳಿ
ನಿರ್ವಿುಸಿದ್ದು ಶಿವಮೊಗ್ಗದ ಖ್ಯಾತ
ಶಿಲ್ಪಿ ಕಾಶೀನಾಥ್ ಪುತ್ರ
ಶ್ರೀಧರಮೂರ್ತಿ. ಹಲವು ಸಾಧನೆ
ಮಾಡಿರುವ ಇವರು ಈಗ
ವಿದೇಶದಲ್ಲೂ ಛಾಪು
ಮೂಡಿಸಿದ್ದಾರೆ. ದೇಶದ ಪ್ರಸಿದ್ಧ
ಶಿಲ್ಪಿಗಳು ಲಂಡನ್​ನಲ್ಲಿ
ಸ್ಥಾಪಿತವಾಗಬೇಕಿದ್ದ ಬಸವಣ್ಣನ
ಮೂರ್ತಿಯನ್ನು ಸಿದ್ಧಪಡಿಸಿದ್ದರು.
ಅದರಲ್ಲಿ ಶ್ರೀಧರಮೂರ್ತಿ ಸಿದ್ಧಪಡಿಸಿದ
ಪುತ್ಥಳಿ ಅಲ್ಲಿನ ನಿಯಮಾವಳಿ ಮತ್ತು
ಸೌಂದರ್ಯದ ಕಾರಣಕ್ಕೆ ಆಯ್ಕೆಯಾಗಿ
ಅನಾವರಣಗೊಂಡಿದೆ.
ಶ್ರೀಧರಮೂರ್ತಿ ಸದ್ಯ
ಬೆಂಗಳೂರಿನಲ್ಲಿ ಶಿಲ್ಪಕಲಾ
ಕ್ಷೇತ್ರದಲ್ಲಿ
ತೊಡಗಿಸಿಕೊಂಡಿದ್ದಾರೆ.
ಲ್ಯಾಂಬೆತ್ ನಗರದ ಮೇಯರ್ ಆಗಿದ್ದ
ನೀರಜ್ ಪಾಟೀಲ್ ಕಳೆದ ವರ್ಷ ಬಸವಣ್ಣನ
ಮೂರ್ತಿ ಸಿದ್ಧಪಡಿಸಿಕೊಡಬೇಕು
ಎಂದಿದ್ದರಂತೆ. ಇದರಿಂದ
ಸಂತಸಗೊಂಡ ಶ್ರೀಧರಮೂರ್ತಿ
ತಕ್ಷಣ ಒಪ್ಪಿಗೆ ಸೂಚಿಸಿದ್ದರು. ಅಲ್ಲಿನ
ನಿಯಮಾವಳಿಗೆ ಅನುಗುಣವಾಗಿ 4
ತಿಂಗಳ ಅವಧಿಯಲ್ಲಿ ಶ್ರೀಧರಮೂರ್ತಿ
ಮೂರೂವರೆ ಅಡಿ ಎತ್ತರದ ಬಸವಣ್ಣನ
ಪುತ್ಥಳಿ ಸಿದ್ಧಪಡಿಸಿದರು. ಸಂಪೂರ್ಣ
ಕಂಚಿನಲ್ಲಿ ಸಿದ್ಧಪಡಿಸಲಾಗಿರುವ ಈ
ಪ್ರತಿಮೆ 500 ಕಿಲೋ ತೂಕವಿದೆ.
ಕಂಚಿನಲ್ಲಿ ಸಿದ್ಧಗೊಂಡಿರುವ
ಬಸವಣ್ಣನವರ ಮೊದಲ ಪುತ್ಥಳಿ ಇದು
ಎಂದೂ ಹೇಳಲಾಗುತ್ತಿದೆ.
***
ಲಂಡನ್​ನಲ್ಲಿರುವವರಿಗೆ ಬಸವೇಶ್ವರರ
ಮಹತ್ವ ತಿಳಿಸಬೇಕಿರುವುದರಿಂದ
ಪುತ್ಥಳಿ ಕೆಳಭಾಗದಲ್ಲಿ ಉಬ್ಬು
ಶಿಲ್ಪಗಳನ್ನೂ ರಚಿಸಿದ್ದಾರೆ. ಅಲ್ಲಿ
ಬಸವಣ್ಣನವರ ಜೀವನ ಚರಿತ್ರೆ
ಸಾರುವಂತೆ ಕೆತ್ತಲಾಗಿದೆ. ಭಾರತದಲ್ಲಿ
ಅನುಭವ ಮಂಟಪದ ಮೂಲಕ ಪ್ರಥಮ
ಸಂಸತ್ ನಡೆಸುತ್ತಿರುವ ಚಿತ್ರ ಹಾಗೂ
12ನೇ ಶತಮಾನದಲ್ಲಿಯೇ
ಅಂತರ್ಜಾತಿ ವಿವಾಹ ನಡೆಸಿದ್ದು,
ನಂತರ ಅದಕ್ಕಾಗಿ ಶಿಕ್ಷೆ
ಅನುಭವಿಸಿದ್ದನ್ನೂ ಉಬ್ಬು
ಶಿಲ್ಪಗಳಲ್ಲಿ ವಿವರಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023