Drop


Tuesday, November 17, 2015

The World Heritage Week (November 19-25) :

ಬಾದಾಮಿ: ತಾಲೂಕಿನ ಪಟ್ಟದಕಲ್ಲ ಗ್ರಾಮದಲ್ಲಿ ನ.19ರಿಂದ 25ರವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಡಿ ವಿಶ್ವ ಪರಂಪರೆ ಸಪ್ತಾಹ ಸಮಾರಂಭ ನಡೆಯಲಿದೆ. ವಿಶ್ರಾಂತ ಶಿಕ್ಷಕ ಬಿ.ಎಸ್.ಅಕ್ಕಿ ಸಮಾರಂಭ, ಛಾಯಾಚಿತ್ರ ಪ್ರದರ್ಶನವನ್ನು ಇತಿಹಾಸ ಸಂಶೋಧಕ ಡಾ.ಶೀಲಾಕಾಂತ ಪತ್ತಾರ ಉದ್ಘಾಟಿಸಲಿದ್ದಾರೆ. ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ. ನ.22ರಂದು ಬೆಳಗ್ಗೆ 9.30ಕ್ಕೆ ಪ್ರವಾಸಿ ಮಾಹಿತಿ ಕೇಂದ್ರ ಲೋಕಾರ್ಪಣೆಯನ್ನು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ನೆರವೇರಿಸಲಿದ್ದಾರೆ. ಇಂಧನ ರಹಿತ ವಾಹನಗಳ ಲೋಕಾರ್ಪಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ನೆರವೇರಿಸಲಿದ್ದಾರೆ. ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಸರಗಣಾಚಾರಿ, ಉಪಾಧ್ಯಕ್ಷ ರಘುವೀರ ದೇಸಾಯಿ ಪಾಲ್ಗೊಳ್ಳಲಿದ್ದಾರೆ ಎಂದು
ಡಾ.ಎ.ಎಂ.ಸುಬ್ರಹ್ಮಣ್ಯಂ, ಅಧಿಕಾರಿ ಸೋಮಲಾ ನಾಯಕ ತಿಳಿಸಿದ್ದಾರೆ.