Drop


Tuesday, December 8, 2015

ಕಾಪು: ಡಿ.15ರಿಂದ 17 ರವರೆಗೆ ರಾಜ್ಯಮಟ್ಟದ ಫ್ರೌ.ಶಾ. ಮಕ್ಕಳ ಪ್ರತಿಭಾ ಕಾರಂಜಿ:-

ಕಾಪು: 15ರಿಂದ ರಾಜ್ಯಮಟ್ಟದ
ಪ್ರತಿಭಾ ಕಾರಂಜಿ
8 Dec, 2015
ಪ್ರಜಾವಾಣಿ ವಾರ್ತೆ
ಕಾಪು (ಪಡುಬಿದ್ರಿ): ಸಾರ್ವಜನಿಕ ಶಿಕ್ಷಣ
ಇಲಾಖೆ ವತಿಯಿಂದ ಇಲ್ಲಿನ
ವಿದ್ಯಾನಿಕೇತನ ಸಮೂಹ ಶಿಕ್ಷಣ
ಸಂಸ್ಥೆಯಲ್ಲಿ ಇದೇ 15, 16
ಮತ್ತು 17ರಂದು
ಆಯೋಜಿಸಲಾಗಿರುವ ಪ್ರೌಢ ಶಾಲಾ ಮಕ್ಕಳ
ಪ್ರತಿಭಾ ಕಾರಂಜಿ ಸ್ಪರ್ಧೆ ಯ
ಲಾಂಛನವನ್ನು ಉಡುಪಿ ಜಿಲ್ಲಾಧಿ
ಕಾರಿ ಆರ್.ವಿಶಾಲ್ ಸೋಮವಾರ ಕಾಪುವಿನಲ್ಲಿ
ನಡೆದ ಪತ್ರಿಕಾಗೋಷ್ಠಿ ಯಲ್ಲಿ ಬಿಡುಗಡೆ
ಮಾಡಿದರು.
ನಂತರ ಮಾತನಾಡಿದ ಅವರು,
'ಕಾರ್ಯಕ್ರಮದಲ್ಲಿ ರಾಜ್ಯದ 34
ಶೈಕ್ಷಣಿಕ ಜಿಲ್ಲೆಗಳಿಂದ ಸುಮಾರು
2,210 ವಿದ್ಯಾರ್ಥಿಗಳು
ಭಾಗವಹಿಸಲಿದ್ದಾರೆ. 25 ವೈಯುಕ್ತಿಕ
ವಿಭಾಗ ಹಾಗೂ 6 ಸಾಮೂ ಹಿಕ ವಿಭಾಗದ
ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ
ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ,
13 ಬೇರೆ ಬೇರೆ ಸಮಿತಿಗಳನ್ನು
ರಚಿಸಲಾಗಿದೆ. 15ರಂದು
ಮಧ್ಯಾಹ್ನ 2 ಗಂಟೆಗೆ
ದಂಡತೀರ್ಥದಿಂದ
ವಿದ್ಯಾನಿ ಕೇತನ ಶಾಲೆಯವರೆಗೆ
ಮೆರವಣಿಗೆ ನಡೆಯಲಿದೆ. ಬಳಿಕ
ಉದ್ಘಾಟನಾ ಕಾರ್ಯಕ್ರಮ
ನಡೆಯಲಿದೆ ಎಂದು ವಿವರಿಸಿದರು.
ರಾಜ್ಯದ ನದಿಗಳ ಹೆಸರುಳ್ಳ 4
ವೇದಿಕೆಗಳು ಹಾಗೂ 11
ಕೊಠಡಿಗಳಲ್ಲಿ
ಸ್ಪರ್ಧೆಗಳನ್ನು ನಡೆಸಲು ಸಿದ್ಧತೆ ಮಾಡಿ
ಕೊಳ್ಳಲಾಗಿದೆ.
ಸ್ಪರ್ಧೆಗಳ ತೀರ್ಪುಗಾ ರರಾಗಿ
ಪ್ರತಿ ಸ್ಪರ್ಧೆಗೆ ಈ
ಜಿಲ್ಲೆಯಿಂದ ಒಬ್ಬರು ಹಾಗೂ
ಇತರ ಜಿಲ್ಲೆಗಳಿಂದ
ಇಬ್ಬರಂತೆ 3 ಜನ
ತೀರ್ಪುಗಾರರನ್ನು ಈಗಾಗಲೇ
ನೇಮಕ ಮಾಡಲಾಗಿದೆ.
ಬಾಲಕರು ಮತ್ತು ಬಾಲಕಿಯರಿಗೆ
ಪ್ರತ್ಯೇಕ ವಸತಿ ವ್ಯವಸ್ಥೆ
ಕಲ್ಪಿಸಲಾಗಿದ್ದು, ವಿದ್ಯಾನಿಕೇತನ
ಸಂಸ್ಥೆಯ ಬಾಲಕಿಯ
ಹಾಸ್ಟೆಲ್ನಲ್ಲಿ ಎಲ್ಲ ಬಾಲಕಿಯರಿಗೆ
ಹಾಗೂ ದಂಡತೀರ್ಥ
ಮತ್ತು ಅಲ್ ಇಹ್ಸಾನ್
ಆಂಗ್ಲಮಾಧ್ಯಮ ಪ್ರೌಢಶಾಲೆ
ಮೂಳೂರು ಶಾಲೆಗಳಲ್ಲಿ ಬಾಲಕರಿಗೆ ವಸತಿ
ವ್ಯವಸ್ಥೆ ಮಾಡಲಾಗಿದೆ ಎಂದು
ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾ
ರ್ಥಿಗಳು ಹಾಗೂ ಮೇಲ್ವಿಚಾರಕರಿಗೆ 3
ದಿನಗಳ ಅತ್ಯುತ್ತಮ ಊಟ, ಉಪ
ಹಾರದ ವ್ಯವಸ್ಥೆ ಒದಗಿಸಲು ಈಗಾಗಲೇ
ಸಿದ್ಧತೆ
ಮಾಡಿಕೊಳ್ಳಲಾಗಿದೆ.
ಮೂರು ದಿನಗಳ ಕಾಲವೂ ವೈವಿಧ್ಯಮಯ
ಊಟೋಪಚಾರ ನಡೆಯಲಿದೆ. ಬೇರೆ ಬೇರೆ
ಜಿಲ್ಲೆಗಳಿಂದ ಬರುವ ಸ್ಪರ್ಧಾ
ಳುಗಳನ್ನು ಉಡುಪಿ ಬಸ್ನಿಲ್ದಾಣ ಹಾಗೂ
ರೈಲ್ವೆ ನಿಲ್ದಾಣಗಳಿಂದ ಸ್ವಾಗತಿಸಿ
ಕರೆ ತರಲು ಬಸ್ಸಿನ ವ್ಯವಸ್ಥೆ ಮಾಡ
ಲಾಗಿದೆ.
ಸುರಕ್ಷತೆ ಮತ್ತು ರಕ್ಷಣೆಗೆ
ಪೊಲೀಸ್
ಇಲಾಖೆ ಹಾಗೂ ಆರೋಗ್ಯ ಇಲಾಖೆಯ
ಸೇವೆಯನ್ನು ಪಡೆಯ ಲಾಗುತ್ತಿದೆ.
ರಕ್ಷಣೆ ಮತ್ತು ಸುರಕ್ಷತೆಗೆ ಸ್ಕೌಟ್ಸ್
ಮತ್ತು ಗೈಡ್ಸ್, ಹೋಂ ಗಾರ್ಡ್ಸ್ ಹಾಗೂ
ದೈಹಿಕ ಶಿಕ್ಷಣ ಶಿಕ್ಷಕರನ್ನು ಸಾಕಷ್ಟು
ಸಂಖ್ಯೆಯಲ್ಲಿ ನಿಯೋಜನೆ
ಮಾಡಿಕೊಳ್ಳಲಾಗುವುದು.
ಈ ಸಂಬಂಧ ₹ 55
ಲಕ್ಷಗಳಿಗೆ ಕ್ರಿಯಾ ಯೋಜನೆ
ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಹೇಳಿದರು.
ರಾಜ್ಯಮಟ್ಟದ ಪ್ರತಿಭಾ
ಕಾರಂಜಿ ಯಲ್ಲಿ ಸಾಮೂಹಿಕ ಸ್ಪರ್ಧಾ
ವಿಷಯಗಳು ಜಾನಪದ ನೃತ್ಯ,
ದೇಶಭಕ್ತಿ ಗೀತೆ, ಕೋಲಾಟ, ಕ್ವಿಜ್
(ಸಾಮಾನ್ಯ ವಿಷಯ ದಲ್ಲಿ
ಒಂದು ಶಾಲೆಯಿಂದ
ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳು
ಮಾತ್ರ ಭಾಗವಹಿಸುವುದು).
ಪ್ರೌಢಶಾಲಾ ವಿಭಾಗದಲ್ಲಿ ವೈಯಕ್ತಿಕ
ಸ್ಪರ್ಧಾ ವಿಷಯಗಳು: ಭಾಷಣ (ಕನ್ನಡ,
ಇಂಗ್ಲಿಷ್, ಹಿಂದಿ,
ಸಂಸ್ಕೃತ, ಉರ್ದು, ಮರಾಠಿ, ತೆಲುಗು,
ತಮಿಳು, ತುಳು,
ಕೊಂಕಣಿ),
ಧಾರ್ಮಿಕ ಪಠನ - ಸಂಸ್ಕೃತ ಮತ್ತು
ಅರೇಬಿಕ್, ಯೋಗಾಸನ, ಕರ್ನಾಟಕ
ಶಾಸ್ತ್ರೀಯ
ಸಂಗೀತ, ಹಿಂದೂ
ಸ್ಥಾನಿ ಸಂಗೀತ, ಜಾನಪದ
ಗೀತೆ, ಭಾವಗೀತೆ,
ಭರತನಾಟ್ಯ, ಛದ್ಮವೇಷ, ಕ್ಲೇ
ಮಾಡಲಿಂಗ್, ಆಶುಭಾಷಣ ಸ್ಪರ್ಧೆ,
ಮಿಮಿಕ್ರಿ, ಪ್ರಬಂಧ ರಚನೆ,
ಚರ್ಚಾ ಸ್ಪರ್ಧೆ, ಚಿತ್ರಕಲೆ,
ರಂಗೋಲಿ, ಗಝಲ್, ಸಾಮೂಹಿಕ
ಸ್ಪರ್ಧಾ ವಿಷಯಗಳು: ನಾಟಕ, ಕ್ವಿಜ್,
ಖವ್ವಾಲಿ, ಜಾನಪದ ನೃತ್ಯ, ಕೋಲಾಟ,
ಸ್ಥಳದಲ್ಲಿ ವಿಜ್ಞಾನ ಮಾದರಿ ತಯಾರಿ.
ಸಭೆಯಲ್ಲಿ ಪ್ರೌಢಶಿಕ್ಷಣ, ಸಾರ್ವ
ಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ
ರಾದ ಫಿಲೋಮಿನಾ ಲೋಬೋ ಮತ್ತು
ವಿದ್ಯಾನಿಕೇತನ ಸಂಸ್ಥೆಯ
ಮುಖ್ಯಸ್ಥರಾದ ಕೆ ಪಿ ಆಚಾರ್ಯ,
ವಿದ್ಯಾಂಗ ಉಪ ನಿರ್ದೇಶಕರಾದ
ದಿವಾಕರ ಶೆಟ್ಟಿ, ಸರ್ವ ಶಿಕ್ಷಣ
ಅಭಿಯಾನದ ಅಧಿಕಾರಿ ನಾಗರಾಜ್
ಉಪಸ್ಥಿತರಿದ್ದರು. ವಿದ್ಯಾಂಗ
ಉಪನಿರ್ದೇಶಕ ದಿವಾ ಕರ ಶೆಟ್ಟಿ.
ವಿದ್ಯಾನಿಕೇತನ ಸಮೂಹ
ಸಂಸ್ಥೆಯ ಅಧ್ಯಕ್ಷ
ಕೆ.ಪಿ.ಆಚಾರ್ಯ, ಉಪ ನಿರ್ದೇಶಕ
ನಾಗರಾಜ್, ಪ್ರೌಢ ಶಿಕ್ಷಣ ನಿರ್ದೇಶಕಿ
ಫಿಲೋಮಿನಾ ಇದ್ದರು.
ಮೊದಲಿಗರಿಗೆ ಪ್ರವಾಸ
ಕಳೆದ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ
ಅತಿಹೆಚ್ಚು ಅಂಕಪಡೆದ 34
ಶೈಕ್ಷಣಿಕ ಜಿಲ್ಲೆಯ ಎರಡು
ವಿದ್ಯಾರ್ಥಿಗಳಿಗೆ ಉಡುಪಿ
ಜಿಲ್ಲೆಯಲ್ಲಿ ಒಂದು ದಿನದ
ಪ್ರವಾಸ ಕಾರ್ಯಕ್ರಮ ಜಿಲ್ಲಾ
ಪ್ರವಾಸೋದ್ಯಮ ಇಲಾಖಾ
ವತಿಯಿಂದ ಆಯೋಜಿಸಲಾಗಿದೆ.
ಇದರಲ್ಲಿ 68 ವಿದ್ಯಾರ್ಥಿಗಳು ಸಹಿತ
34 ಶಿಕ್ಷಕರು ಇರುತ್ತಾರೆ. ಉಡುಪಿ ಜಿಲ್ಲಾ
ಪ್ರವಾಸದಲ್ಲಿ ಉಡುಪಿ ಜಿಲ್ಲೆಯ
ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ
ಪರಿಚಯಿಸುವ ನಿಟ್ಟಿನಲ್ಲಿ
ಪ್ರವಾಸೋದ್ಯಮ ಇಲಾಖೆಯ ಮೂಲಕ
ಆಯೋಜಿಸಲಾಗಿದೆ ಎಂದು
ಜಿಲ್ಲಾಧಿಕಾರಿ ಹೇಳಿದರು.