ಬಾಹ್ಯಾಕಾಶದಲ್ಲಿರುವ ಅತಿ ದೊಡ್ಡ ಮಾನವ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ಐಎಸ್ಎಸ್ ) ಇದೀಗ 15ರ ಸಂಭ್ರಮ:*

ಬಾಹ್ಯಾಕಾಶದಲ್ಲಿರುವ ಅತಿ ದೊಡ್ಡ ಮಾನವ ನಿರ್ಮಿತ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ಐಎಸ್ಎಸ್ )
ಇದೀಗ 15ರ ಸಂಭ್ರಮದಲ್ಲಿದೆ . ಜೀವ
ವಿಜ್ಞಾನ, ಭೌತ ವಿಜ್ಞಾನ, ಪವನಶಾಸ್ತ್ರ ಹಾಗೂ ಖಗೋಳ ವಿಜ್ಞಾನ
ಒಳಗೊಂಡಂತೆ ಹಲವು ವಿಷಯಗಳಲ್ಲಿ ಸಂಶೋಧನೆಗೆ ನೆರವಾಗುತ್ತಿರುವ ಈ
ನಿಲ್ದಾಣದಲ್ಲಿ ಮಾನವನ ಉಪಸ್ಥಿತಿ ಆರಂಭವಾಗಿ ಒಂದೂವರೆ ದಶಕ
ಕಳೆದಿದೆ .
2000 ಇಸವಿಯ ನವೆಂಬರ್ 2 ರಂದು ಇಲ್ಲಿ ಗಗನಯಾತ್ರಿಗಳು
ಮೊದಲು ವಾಸ ಆರಂಭಿಸಿದ್ದರು . ಆ ಬಳಿಕ ನಿರಂತರ 15 ವರ್ಷಗಳ ಕಾಲ
ಇಲ್ಲಿ ಮಾನವನ ಉಪಸ್ಥಿತಿ ಇದೆ. ಐಎಸ್ಎಸ್ನ ನಿರ್ಮಾಣ ಕಾರ್ಯ
1998 ರಲ್ಲಿ ಆರಂಭಗೊಂಡಿತ್ತು. ಎರಡು ಎರಡು ವರ್ಷಗಳ ಬಳಿಕ ಇಲ್ಲಿ
ಗಗನಯಾತ್ರಿಗಳ ವಾಸ ಆರಂಭವಾಗಿತ್ತು .
ಮೂವರು ಗಗನಯಾತ್ರಿಗಳನ್ನು ಹೊತ್ತುಕೊಂಡ ಸೋಯುಜ್ ವ್ಯೋಮನೌಕೆ
2000 ಇಸವಿಯ ಅಕ್ಟೋಬರ್ 31ರಂದು ಗಗನಕ್ಕೆ ನೆಗೆದಿತ್ತು . ಎರಡು
ದಿನಗಳ ಬಳಿಕ ( ನವೆಂಬರ್ 2 ರಂದು ) ಗಗನಯಾತ್ರಿಗಳು ಬಾಹ್ಯಾಕಾಶ
ನಿಲ್ದಾಣ ತಲುಪಿದ್ದರು. ಅತಿಹೆಚ್ಚು ವರ್ಷ ಮಾನವನ ಉಪಸ್ಥಿತಿ
ಹೊಂದಿದ ಬಾಹ್ಯಾಕಾಶ ನಿಲ್ದಾಣ ಇದು. ಮಿರ್ ಬಾಹ್ಯಾಕಾಶ ನಿಲ್ದಾಣ 9
ವರ್ಷ 357 ದಿನಗಳ ಕಾಲ ಮಾನವನ ಉಪಸ್ಥಿತಿ ಹೊಂದಿತ್ತು . ಆದನ್ನು
ಐಎಸ್ಎಸ್ ಮುರಿದಿದೆ .
ಈ ಬಾಹ್ಯಾಕಾಶ ನಿಲ್ದಾಣವು ವಿಮಾನ , ರೈಲು ಅಥವಾ ಬಸ್
ನಿಲ್ದಾಣಗಳಂತೆ ಒಂದೇ ಜಾಗದಲ್ಲಿ ನೆಲೆಗೊಂಡಿರುವುದಿಲ್ಲ. ಇದು
ಭೂಮಿಯ ಸುತ್ತ ಸುತ್ತುತ್ತಲೇ ಇರುತ್ತದೆ . ಐಎಸ್ಎಸ್ ಕಡಿಮೆ ಭೂ ಕಕ್ಷಾ
ಪರಿಧಿಯಲ್ಲಿ ತನ್ನ ಕಕ್ಷೆಯಲ್ಲಿ ಭೂಮಿಯನ್ನು
ಸುತ್ತುತ್ತಿದೆ . ಈ ನಿಲ್ದಾಣವನ್ನು ರಷ್ಯನ್ ಕಕ್ಷಾ ವಿಭಾಗ
( ಆರ್ಒಎಸ್ ) ಮತ್ತು ಯುನೈಟೆಡ್ ಸ್ಟೇಟ್ ಕಕ್ಷಾ ವಿಭಾಗ
( ಯುಎಸ್ಒಎಸ್) ಎಂದು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವ ಇರುತ್ತದೆ ಮತ್ತು
ಉಸಿರಾಟಕ್ಕೆ ಬೇಕಾಗುವ ಆಮ್ಲಜನಕ ಅಲ್ಲಿರುವುದಿಲ್ಲ .
ಆದ್ದರಿಂದ ಅಲ್ಲಿಗೆ ತೆರಳುವ ಗಗನಯಾತ್ರಿಗಳಿಗೆ ಸೂಕ್ತ ತರಬೇತಿ
ನೀಡಲಾಗುತ್ತದೆ . ಯಾನಕ್ಕೂ ಒಂದು ವರ್ಷ ಮುಂಚಿತವಾಗಿ
ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ .
ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ
ಸುನೀತಾ ವಿಲಿಯಮ್ಸ್ ಎರಡು ಬಾರಿ ಅಂತರ
ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಕಾರ್ಯ
ನಿರ್ವಹಿಸಿದ್ದಾರೆ .
ಆರಂಭದಲ್ಲಿ ಕೇವಲ ಮೂರು ಮಾಡ್ಯೂಲ್ಗಳನ್ನು ಹೊಂದಿದ್ದ ಐಎಸ್ಎಸ್
ಇದೀಗ ಒಂದು ಫುಟ್ಬಾಲ್ ಮೈದಾನದಷ್ಟು ದೊಡ್ಡದಿದೆ.
ಇದನ್ನು ಆಗಾಗ್ಗೆ ನಿರ್ದಿಷ್ಟ ಸಮಯದಲ್ಲಿ ಭೂಮಿಯಿಂದ
ಬರಿಗಣ್ಣಿನಿಂದ ನೋಡಲು ಸಾಧ್ಯ.
*
ಸ್ಕಾಟ್ ಕೆಲ್ಲಿ ದಾಖಲೆ
ಪ್ರಸಕ್ತ ಐಎಸ್ಎಸ್ನಲ್ಲಿ ಆರು ಗಗನಯಾತ್ರಿಗಳು ಇದ್ದಾರೆ .
ಅಮೆರಿಕದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಕೂಡಾ ಒಬ್ಬರು. ಕೆಲ್ಲಿ
ಅಕ್ಟೋಬರ್ 16 ರಂದು ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ
ಬರೆಯಿಸಿಕೊಂಡಿದ್ದರು.
ಐಎಸ್ಎಸ್ನಲ್ಲಿ ಅತಿಹೆಚ್ಚು ಕಾಲ ತಂಗಿದ ಅಮೆರಿಕದ ಗಗನಯಾತ್ರಿ
ಎಂಬ ಗೌರವ ಅವರಿಗೆ ಒಲಿದಿದೆ. ಮೈಕ್ ಫಿಂಕ್ (382 ದಿನ)
ಹೆಸರಿನಲ್ಲಿದ್ದ ದಾಖಲೆಯನ್ನು ಕೆಲ್ಲಿ ಮುರಿದರು. ಈಗ
ಐಎಸ್ಎಸ್ನಲ್ಲಿರುವ ಗಗನಯಾತ್ರಿಗಳ ತಂಡದ ಕಮಾಂಡರ್ ಆಗಿ ಕೆಲ್ಲಿ
ಕಾರ್ಯನಿರ್ವಹಿಸುತ್ತಿದ್ದಾರೆ .
ಸತತವಾಗಿ ಅತಿಹೆಚ್ಚು ದಿನ ತಂಗಿದ ಅಮೆರಿಕದ ಗಗನಯಾತ್ರಿ ಎಂಬ
ದಾಖಲೆ ಕೂಡಾ ಕೆಲ್ಲಿ ಹೆಸರಿಗೆ ಬಂದಿದೆ . ಮೈಕಲ್ ಲೋಪೆಜ್ (215 )
ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದಿದ್ದಾರೆ .

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023