ಡಿ.18 ರಿಂದ ಯುಪಿಎಸ್ಸಿ ಪರೀಕ್ಷೆ : ಅಂತರ್ಜಾಲ(www.upsc.gov.in)ದಲ್ಲಿ ಪ್ರವೇಶಪತ್ರ ಲಭ್ಯ..*


ನವದೆಹಲಿ, ಡಿ.13-ಬರುವ ಶುಕ್ರವಾರದಿಂದ
ಆರಂಭವಾಗಲಿರುವ ಈ ವರ್ಷದ ನಾಗರಿಕ ಸೇವೆಗಳ
ಮುಖ್ಯ ಪರೀಕ್ಷೆಗೆ ಯಾವುದೇ
ರೀತಿಯ ಪ್ರವೇಶ ಪತ್ರಗಳನ್ನು
(ಅಡ್ಮಿಷನ್ ಕಾರ್ಡ್) ವಿತರಣೆ ಮಾಡಿಲ್ಲ ಎಂದು
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತಿಳಿಸಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು,
ಇನ್ನು ಮುಂದೆ ಅಂತರ್ಜಾಲದಲ್ಲಿ ಇ-
ಅಲ್ಮೆಟ್ ಕಾರ್ಡ್ಗಳನ್ನು ಡೌನ್ಲೋಡ್
ಮಾಡಿಕೊಂಡು, ಪ್ರಿಂಟ್ಔಟ್
ತೆಗೆದುಕೊಳ್ಳಬೇಕು. ಅದೇ ಪ್ರವೇಶಾತಿ
ಪತ್ರವನ್ನು ಪರೀಕ್ಷೆಗೆ ತರಬೇಕು
ಎಂದು ಯುಪಿಎಸ್ಸಿ ಹೇಳಿದೆ. ಯುಪಿಎಸ್ಸಿ ಡಿ.18
ರಿಂದ 23ರವರೆಗೆ ದೇಶದ 23
ಕೇಂದ್ರಗಳಲ್ಲಿ ಪರೀಕ್ಷೆಯನ್ನು
ನಡೆಸಲಿದೆ. ಪ್ರತಿ ಹಂತಗಳಲ್ಲಿ ಈ
ಪರೀಕ್ಷೆ ನಡೆಸುತ್ತಿದೆ.
ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನಗಳನ್ನು
ಈ ಪರೀಕ್ಷೆ
ಒಳಗೊಂಡಿರುತ್ತದೆ. ಈ ಮೂಲಕ
ಕೇಂದ್ರವು ಭಾರತೀಯ ಆಡಳಿತ ಸೇವೆ
(ಐಎಎಸ್), ಭಾರತೀಯ ವಿದೇಶಾಂಗ
ಸೇವೆಗಳು (ಐಎಫ್ಎಸ್) ಮತ್ತು ಭಾರತೀಯ
ಪೊಲೀಸ್ ಸೇವೆ (ಐಪಿಎಸ್)
ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಯುಪಿಎಸ್ಸಿ ಪ್ರವೇಶ ಪತ್ರಗಳನ್ನು ಈಗಾಗಲೇ ಅಪ್ಲೋಡ್
ಮಾಡಿದ್ದು, www.upsc.gov.in .ವೆಬ್ ಸೈಟ್ನಲ್ಲಿ
ಡೌನ್ಲೋಡ್ ಮಾಡಿಕೊಳ್ಳಬಹುದು
ಎಂದು ಕೇಂದ್ರ ಲೋಕಸೇವಾ ಆಯೋಗದ
ಪ್ರಕಟಣೆ ತಿಳಿಸಿದೆ.
ಅ.12ರಂದು ನಡೆದ ಮೊದಲ
ಹಂತದ ಪರೀಕ್ಷೆಯಲ್ಲಿ ಈ ಬಾರಿ
15 ಸಾವಿರ ಮಂದಿ ಅಭ್ಯರ್ಥಿಗಳು
ಅರ್ಹರಾಗಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023