Drop


Sunday, December 20, 2015

65ನೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್ನ ಮಿರಿಯಾ ಲಾಲ್ಗುನಾ ರೊಯೊ ಅವರು ವಿಶ್ವ ಸುಂದರಿ ಕಿರೀಟಕ್ಕೆ ಭಾಜನ

ಚೀನಾ, ಡಿ.20- ಸ್ಯಾನ್ಯಾದ ಕ್ರೌನ್ ಬ್ಯೂಟಿ
ಥಿಯೇಟರ್ನಲ್ಲಿ ನಡೆದ 65ನೆ ವಿಶ್ವಸುಂದರಿ
ಸ್ಪರ್ಧೆಯಲ್ಲಿ ಸ್ಪೇನ್ನ ಮಿರಿಯಾ ಲಾಲ್ಗುನಾ
ರೊಯೊ ಅವರು ವಿಶ್ವ ಸುಂದರಿ ಕಿರೀಟ
ಧರಿಸಿದ್ದಾರೆ. ವಿಶ್ವಸುಂದರಿ ಪಟ್ಟವನ್ನು
ಅಲಂಕರಿಸಿದ ಮಿರಿಯಾಗೆ ಕಳೆದ ಬಾರಿಯ ವಿಶ್ವ
ಸುಂದರಿ ದಕ್ಷಿಣಆಫ್ರಿಕಾದ ರೊಲೆನೆ ಸ್ಟ್ರಾಸ್
ಅವರು ಮುಕುಟವಿಟ್ಟ್ನು ಅಲಂಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ
ಮರಿಯಾ, ನಾನಿನ್ನೂ ಫಾರ್ಮಸಿ
ವಿದ್ಯಾರ್ಥಿಯಾಗಿದ್ದು ಮುಂದೊಂದು
ದಿನ ನ್ಯೂಟ್ರಿಸಿನ್ ಉದ್ಯಮದಲ್ಲಿ ಉತ್ತಮ ಹೆಸರು
ಮಾಡಬೇಕೆಂಬುದಾಗಿ ಹೇಳಿದರು. 65ನೆ ವಿಶ್ವ
ಸುಂದರಿ ಸ್ಪರ್ಧೆಯಲ್ಲಿ ಮೊದಲ ರನ್ನರ್ಅಪ್ ಆಗಿ
ರಷ್ಯಾದ ಮಿಸ್ ಸೊಫಿಯಾ ಸಿಕಿತ್ಚುಕ್ ಹಾಗೂ
ಎರಡನೇ ರನ್ನರ್ಅಪ್ ಆಗಿ ಇಂಡೋನೇಷಿಯಾದ
ಮರಿಯಾ ಹರ್ಫಾಂತಿ ಹೊರಹೊಮ್ಮಿದರು.