ಎಸ್ಇಜೆಡ್: ಕರ್ನಾಟಕ ದ್ವಿತೀಯ*-


ನವದೆಹಲಿ (ಪಿಟಿಐ): ತಮಿಳುನಾಡಿನಲ್ಲಿ 36
ವಿಶೇಷ ಆರ್ಥಿಕ ವಲಯಗಳು (ಎಸ್ಇಜೆಡ್)
ಕಾರ್ಯನಿರ್ವಹಿಸುತ್ತಿದ್ದು, ನಂತರದ
ಸ್ಥಾನದಲ್ಲಿ ಕರ್ನಾಟಕ ಮತ್ತು ತೆಲಂಗಾಣ
ರಾಜ್ಯಗಳು (ತಲಾ 26) ಇವೆ.
ಸದ್ಯಕ್ಕೆ ದೇಶದಲ್ಲಿ 204 ಎಸ್ಇಜೆಡ್ಗಳು
ರಫ್ತು ವಹಿವಾಟು ನಡೆಸುತ್ತಿವೆ. ದೇಶದ ರಫ್ತು
ವಹಿವಾಟಿನಲ್ಲಿ ಇವುಗಳ ಪಾಲು ಶೇ 25ರಷ್ಟಿದೆ.
15 ಲಕ್ಷ ಜನರಿಗೆ ಉದ್ಯೋಗ ಅವಕಾಶ
ಕಲ್ಪಿಸಿಕೊಟ್ಟಿವೆ ಎಂದು
ಲೋಕಸಭೆಗೆ ತಿಳಿಸಲಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ
ಕಾರಣಗಳಿಗೆ 225 ಎಸ್ಇಜೆಡ್ಗಳು
ಕಾರ್ಯನಿರ್ವಹಿಸುತ್ತಿಲ್ಲ ಎಂದು
ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ 
ಸೀತಾರಾಮನ್ ಅವರು ಲೋಕಸಭೆಗೆ
ನೀಡಿದ ಲಿಖಿತ ಉತ್ತರದಲ್ಲಿ
ತಿಳಿಸಿದ್ದಾರೆ.
ಅಕ್ಕಿ ರಫ್ತು: ಪ್ರಸಕ್ತ ಹಣಕಾಸು ವರ್ಷದ
ಮೊದಲ 6 ತಿಂಗಳಲ್ಲಿ
₹ 20,605 ಕೋಟಿಗಳಷ್ಟು
ಮೊತ್ತದ 55 ಲಕ್ಷ
ಟನ್ಗಳಷ್ಟು ಅಕ್ಕಿ ರಫ್ತು ಮಾಡಲಾಗಿದೆ
ಎಂದು ಸದನಕ್ಕೆ ತಿಳಿಸಲಾಗಿದೆ.
ಉಕ್ಕು ಉದ್ದಿಮೆ ಬಿಕ್ಕಟ್ಟು: ದೇಶದಲ್ಲಿ
ಉಕ್ಕು ತಯಾರಿಕಾ ಉದ್ಯಮವು ಹಲವಾರು
ಸಮಸ್ಯೆಗಳನ್ನು ಎದುರಿಸುತ್ತಿದೆ. ಕಡಿಮೆ ಬೆಲೆ
ಹಾಗೂ ಲಾಭ, ಭೂಮಿ ಸ್ವಾಧೀನ ವಿವಾದ,
ಅರಣ್ಯ ಮತ್ತು ಪರಿಸರ ಇಲಾಖೆಯ
ಅನುಮತಿ, ಹಣಕಾಸಿನ ನೆರವು ಮತ್ತಿತರ
ಸಮಸ್ಯೆಗಳನ್ನು ಈ ವಲಯವು
ಎದುರಿಸುತ್ತಿದೆ ಎಂದು ಉಕ್ಕು ಮತ್ತು ಗಣಿ
ರಾಜ್ಯ ಸಚಿವ ವಿಷ್ಣುದೇವ್ ಸಾಯ್ ಅವರು
ಲೋಕಸಭೆಗೆ ತಿಳಿಸಿದ್ದಾರೆ.
ಪೇಟೆಂಟ್ ಅರ್ಜಿಗಳು: 2.46 ಲಕ್ಷದಷ್ಟು
ಪೇಟೆಂಟ್ (ಹಕ್ಕುಸ್ವಾಮ್ಯ) ಮತ್ತು
5.32 ಲಕ್ಷದಷ್ಟು ವ್ಯಾಪಾರ ಚಿಹ್ನೆ
(ಟ್ರೇಡ್ಮಾರ್ಕ್) ನೋಂದಣಿ ಅರ್ಜಿಗಳು ಬಾಕಿ
ಉಳಿದಿವೆ. ಸಿಬ್ಬಂದಿ
ಕೊರತೆಯೇ ಇದಕ್ಕೆ ಕಾರಣ
ಎಂದು ಸರ್ಕಾರ ತಿಳಿಸಿದೆ. ಅಕ್ಟೋಬರ್
ಅಂತ್ಯದ ವೇಳೆಗೆ ಸರ್ಕಾರವು 605
ಪೇಟೆಂಟ್ ಮತ್ತು 6,543 ಟ್ರೇಡ್ಮಾರ್ಕ್
ಅರ್ಜಿಗಳನ್ನು ತಿರಸ್ಕರಿಸಿದೆ ಎಂದು
ತಿಳಿಸಲಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023