Follow by Email

Thursday, December 10, 2015

ಗ್ರ್ಯಾಮಿ ಪ್ರಶಸ್ತಿ ಪಟ್ಟಿಯಲ್ಲಿ ಕೋಲಾರದ ರುದ್ರೇಶ್::*

ಲಾಸ್ ಏಂಜಲೀಸ್: ಕೋಲಾರ ಮೂಲದ ಖ್ಯಾತ ಸ್ಯಾಕ್ಸೊಫೋನ್ ವಾದಕ ರುದ್ರೇಶ್ ಮಹಾಂತಪ್ಪ ಸೇರಿದಂತೆ ನಾಲ್ವರು ಭಾರತೀಯ ಮೂಲದ ಕಲಾವಿದರ ಹೆಸರನ್ನು ಪ್ರಸಕ್ತ ಸಾಲಿನ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಳಿಸಲಾಗಿದೆ. ಸಿತಾರ್ ವಾದಕಿ ಅನೂಷ್ಕಾ ಶಂಕರ್, ಆಸೀಫ್ ಕಪಾಡಿಯಾ ಮತ್ತು ಜೆಫ್ ಭಾಸ್ಕರ್ ಉಳಿದ ಮೂವರು. 

ರುದ್ರೇಶ್ ಅವರ 'ದ ಅಫೋವಾ' ಲ್ಯಾಟಿನ್ ಜಾಝ್ ಸ್ಯೂಟ್' ಆಲ್ಬಮ್ ಅತ್ಯುತ್ತಮ ವಾದ್ಯ ಸಂಗೀತ ಸಂಯೋಜನೆ ವಿಭಾಗದಲ್ಲಿ ನಾಮನಿದೇರ್ಶನಗೊಂಡಿದೆ. ಸದ್ಯ ರುದ್ರೇಶ್ ಅಮೆರಿಕದಲ್ಲಿ ನೆಲೆಸಿದ್ದು, ಅವರ ಪೂರ್ವಿಕರು ಕೋಲಾರ ಮೂಲದವರು. ರುದ್ರೇಶ್ ಕುರಿತು ಕನ್ನಡಿಗರು ಹೆಮ್ಮೆ ಪಡುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಶಿಷ್ಯ ಈ ರುದ್ರೇಶ್ ಎನ್ನುವುದು. 

ಅನುಷ್ಕಾ ಅವರ 'ಹೋಮ್ ಅಲ್ಬಂ' ಬೆಸ್ಟ್ ವರ್ಲ್ಡ್ ಮ್ಯೂಸಿಕ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರೆ, ಭಾರತೀಯ ಮೂಲದ ಬ್ರಿಟಿಷ್ ನಿರ್ದೇಶಕ ಅಸೀಫ್ ಕಪಾಡಿಯಾ ಅವರ 'ಆಮಿ' ಅತ್ಯುತ್ತಮ ಸಂಗೀತ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಜೆಫ್ ಭಾಸ್ಕರ್ ಅವರು ತಮ್ಮ ಮಾರ್ಕ್ ರಾನ್ಸನ್, ಬರ್ಮೊಮಾರ್ಸ್ ಎಂಬ ಕೃತಿಗಳ ಮೂಲಕ 'ರಿಕಾರ್ಡ್ ಆಫ್ ದಿ ಇಯರ್' ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.