ಸೌದಿ ಚುನಾವಣೆ: ಮೊದಲ ಬಾರಿ ಮಹಿಳೆಯರಿಗೆ ಮತದಾನ ಹಕ್ಕು:-


12 Dec, 2015
ರಿಯಾದ್ (ಎಎಫ್ಪಿ): ಸೌದಿ
ಅರೇಬಿಯಾದಲ್ಲಿ ನಗರಸಭೆ
ಚುನಾವಣೆಯ ಮತದಾನ ಶನಿವಾರ
ಬೆಳಿಗ್ಗೆ ಆರಂಭವಾಗಿದ್ದು, ಇದೇ
ಮೊದಲ ಬಾರಿಗೆ ಮಹಿಳೆಯರಿಗೆ ಮತ
ಚಲಾಯಿಸುವ ಹಕ್ಕು ನೀಡಲಾಗಿದೆ.
284 ಸ್ಥಾನಗಳಿಗೆ ನಡೆಯುತ್ತಿರುವ
ನಗರಸಭೆ ಚುನಾವಣೆಯಲ್ಲಿ ಒಟ್ಟು
900 ಮಹಿಳೆಯರು ಸ್ಪರ್ಧಿಸಿದ್ದಾರೆ. 6
ಸಾವಿರಕ್ಕೂ ಹೆಚ್ಚು ಪುರುಷ
ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ,
ಜಾಗೃತಿ ಕೊರತೆಯಿಂದಾಗಿ
ಮಹಿಳೆಯರು ಮತ ಚಲಾಯಿಸಲು
ಮುಂದೆ ಬರುತ್ತಿಲ್ಲ, ಸಾಕಷ್ಟು
ಮಹಿಳೆಯರ ಹೆಸರನ್ನು ಅಧಿಕಾರಿಗಳು
ಉದ್ದೇಶಪೂರ್ವಕಾಗಿಯೇ
ಮತದಾರರ ಪಟ್ಟಿಯಿಂದ ತೆಗೆದು
ಹಾಕಿದ್ದಾರೆ. ಮಹಿಳೆಯರು
ಮುಕ್ತವಾಗಿ ಮತ
ಚಲಾಯಿಸುವುದಕ್ಕೆ ಅಡ್ಡಿ
ಮಾಡಲಾಗುತ್ತಿದೆ ಎಂದು
ಕಣದಲ್ಲಿರುವ ಮಹಿಳಾ
ಅಭ್ಯರ್ಥಿಗಳು ದೂರಿದ್ದಾರೆ.
ಸೌದಿಯಲ್ಲಿ 2005 ಮತ್ತು 2011ರಲ್ಲಿ
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
ನಡೆದಿತ್ತು. ಆದರೆ ಕಳೆದ
ಚುನಾವಣೆಗಳಲ್ಲಿ ಪುರುಷರು
ಮಾತ್ರ ಸ್ಪರ್ಧಿಸುವ ಹಾಗೂ
ಮತದಾನ ಮಾಡುವ ಹಕ್ಕನ್ನು
ಹೊಂದಿದ್ದರು.
ಸೌದಿಯ ಹಿಂದಿನ ರಾಜ ಅಬ್ದುಲ್ಲಾ
2005ರಲ್ಲಿ ಮೊದಲ ಬಾರಿಗೆ
ಚುನಾವಣೆ ನಡೆಸಿದ್ದರು. 2015ರಲ್ಲಿ
ಮಹಿಳೆಯರಿಗೆ ಮತದಾನ,
ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ
ನೀಡುವುದಾಗಿ ಹೇಳಿದ್ದರು.
ಜನವರಿ ತಿಂಗಳಲ್ಲಿ ಅಬ್ದುಲ್ಲಾ
ಮೃತಪಟ್ಟರು. ನಂತರ ಅಧಿಕಾರಕ್ಕೆ
ಬಂದ ಸಲ್ಮಾನ್ ಮಹಿಳೆಯರಿಗೆ
ಮತದಾನದ ಹಕ್ಕನ್ನು ಜಾರಿಗೆ
ತಂದಿದ್ದರು.
2.10 ಕೋಟಿ ಜನಸಂಖ್ಯೆ ಇರುವ ಸೌದಿ
ಅರೇಬಿಯಾದಲ್ಲಿ 13.5 ಲಕ್ಷ
ಪುರುಷರು ಮತದಾನಕ್ಕೆ ಹೆಸರು
ನೋಂದಣಿ ಮಾಡಿಕೊಂಡಿದ್ದರೆ,
ಕೇವಲ 1.31 ಲಕ್ಷ ಮಹಿಳೆಯರು
ಮತದಾನ ಮಾಡಲು ಹೆಸರು
ನೋಂದಾಯಿಸಿಕೊಂಡಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023