Drop


Sunday, December 13, 2015

ಗೀತಾ ಭಾಸ್ಕರ್ ಶೆಟ್ಟಿ ಮಾನವಾಧಿಕಾರ ಆಯೋಗ ರಾಜ್ಯ ಕಾರ್ಯದರ್ಶಿ:*


ಉದಯವಾಣಿ, Dec 13, 2015, 4:37 PM
IST
ಪುಣೆ: ಪುಣೆಯ ಸಮಾಜ ಸೇವಕಿ
ಗೀತಾ ಭಾಸ್ಕರ ಶೆಟ್ಟಿ ಅವರು
ರಾಷ್ಟ್ರೀಯ ಮಾನವಾಧಿಕಾರ
ಆಯೋಗ ರಾಜ್ಯ ಕಾರ್ಯದರ್ಶಿ
ಯಾಗಿ ನೇಮಕಗೊಂಡಿದ್ದಾರೆ.
ಡಿ. 10ರಂದು ನಗರದ ಸದಾಶಿವ್
ಪೇಟ್ನಲ್ಲಿ ಅಂತರಾಷ್ಟ್ರೀಯ
ಮಾನವಾಧಿಕಾರ ದಿನಾಚರಣೆ
ಅಂಗವಾಗಿ ಹಮ್ಮಿಕೊಂಡ
ರಾಷ್ಟ್ರೀಯ ಮಟ್ಟದ
ಕಾರ್ಯಕ್ರಮದಲ್ಲಿ ರಾಷ್ಟ್ರೀಯ
ಮಾನವಾಧಿಕಾರ ಸಂಘಟನೆ ಅಧ್ಯಕ್ಷ
ಶಿವದಾಸ್ ಮಹಾ ಜನ್ ಪ್ರಮಾಣ
ಪತ್ರವನ್ನಿತ್ತರು.
ಗೀತಾ ಭಾಸ್ಕರ ಶೆಟ್ಟಿ ಕಳೆದ 15
ವರ್ಷಗಳಿಂದ ಪುಣೆಯಲ್ಲಿ ಸಮಾಜ
ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಮನವಾಧಿ
ಕಾರ ಸಂಘಟನೆಯ ಪುಣೆ ಜಿಲ್ಲಾ
ಉಪಾಧ್ಯಕ್ಷೆಯಾಗಿ, ಪುಣೆ
ವಡ್ಗಾಂವ್ ಪರಿಸರದ ಎನ್ಸಿಪಿ ಘಟಕದ
ಮಹಿಳಾ ವಿಭಾಗದ
ಕಾರ್ಯಾಧ್ಯಕ್ಷೆಯಾಗಿ ಮತ್ತು
ಪುಣೆ ಬಂಟರ ಸಂಘದ ದಕ್ಷಿಣ
ಪ್ರಾದೇಶಿಕ ಸಮಿತಿಯ ಮಹಿಳಾ
ವಿಭಾಗದ
ಕಾರ್ಯಾಧ್ಯಕ್ಷೆಯಾಗಿಯೂ
ಸೇವೆ ಸಲ್ಲಿಸುತ್ತಿದ್ದಾರೆ. ಅವರು
ಮೂಲತಃ ಕಾಸರಗೋಡು
ಸಿರಿಬಾಗಿಲು ನಾರಾಯಣ ಶೆಟ್ಟಿ
ಮತ್ತು ಕುತ್ತಾರುಗುತ್ತು
ರಾಜೀವಿ ಶೆಟ್ಟಿ ದಂಪತಿ ಪುತ್ರಿ.