ಗೀಚಿದ ನೋಟು ರದ್ದತಿ ಇಲ್ಲ: ಆರ್.ಬಿ.ಆಯ್:*


15 Dec, 2015
ಮುಂಬೈ (ಪಿಟಿಐ): ಗೀಚಿದ ಕರೆನ್ಸಿ
ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ
ಪಡೆಯುವುದಿಲ್ಲ ಎಂದು ಭಾರತೀಯ
ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್
ರಘುರಾಂ ರಾಜನ್ ಸ್ಪಷ್ಟಪಡಿಸಿದ್ದಾರೆ.
'ವರ್ಷಾಂತ್ಯದಲ್ಲಿ ಆರ್ಬಿಐ
ಗೀಚಿದ ನೋಟುಗಳನ್ನು
ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತದೆ'
ಎಂಬ ಸಾಮಾಜಿಕ ಜಾಲತಾಣಗಳಲ್ಲಿ
ಹರಿದಾಡುತ್ತಿರುವ ಸಂದೇಶಗಳನ್ನು
ನಂಬದಂತೆ ಅವರು
ಆಡಿಯೊ ಸಂದೇಶದಲ್ಲಿ
ತಿಳಿಸಿದ್ದಾರೆ.
ಗೀಚಿದ ನೋಟುಗಳನ್ನು ಹಿಂದಕ್ಕೆ ಪಡೆದು
ಅದರ ಬದಲಾಗಿ ಹೊಸ ನೋಟುಗಳನ್ನು
ಚಲಾವಣೆಗೆ ತರುವ ಉದ್ದೇಶವಿದೆ. ಹಾಗೆಂದ
ಮಾತ್ರಕ್ಕೆ ಗೀಚಿದ ನೋಟುಗಳು ಕಾನೂನು
ಬದ್ಧವಲ್ಲ ಎಂದು ಅರ್ಥವಲ್ಲ. ಅವುಗಳನ್ನು
ಎಲ್ಲಿ ಬೇಕಾದರೂ ಬಳಸಬಹುದು. ವದಂತಿಗಳಿಗೆ
ಕಿವಿಗೊಡಬೇಡಿ ಎಂದಿದ್ದಾರೆ.
2016ರ ಜನವರಿ 1 ರಿಂದ ಗೀಚಿದ
ನೋಟುಗಳನ್ನು ಬ್ಯಾಂಕ್ಗಳು ಪಡೆಯುವುದಿಲ್ಲ
ಎಂದು ಆರ್ಬಿಐ ಸಾರ್ವಜನಿಕ ಪ್ರಕಟಣೆಯಲ್ಲಿ
ತಿಳಿಸಿದೆ ಎಂಬ ಸಾಮಾಜಿಕ ಮಾಧ್ಯಮಗಳ
ವರದಿಯನ್ನು ಆರ್ಬಿಐ ತಳ್ಳಿಹಾಕಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023