ಐ ಎಂಎಫ್ ಮೀಸಲು ಕರೆನ್ಸಿಗೆ ಚೀನಾದ ಯುಆನ್ ಸೇರ್ಪಡೆ:*

ಎಂಎಫ್ ಮೀಸಲು ಕರೆನ್ಸಿಗೆ
ಚೀನಾದ ಯುಆನ್ ಸೇರ್ಪಡೆ
3 Dec, 2015
ಬೀಜಿಂಗ್ (ಐಎಎನ್ಎಸ್):
ಅಂತರರಾಷ್ಟ್ರೀಯ ಹಣಕಾಸು
ನಿಧಿಯ (ಐಎಂಎಫ್) ಮೀಸಲು
ಕರೆನ್ಸಿ ಗಳ ಸಾಲಿಗೆ ಚೀನಾದ ಕರೆನ್ಸಿ ಯುಆನ್
ಸೇರ್ಪಡೆಗೊಂಡಿದೆ. ಸದ್ಯಕ್ಕೆ
ಅಮೆರಿಕದ ಡಾಲರ್, ಐರೋಪ್ಯ ಒಕ್ಕೂಟದ
ಯೂರೊ, ಬ್ರಿಟನ್ನಿನ ಪೌಂಡ್
ಸ್ಟರ್ಲಿಂಗ್ ಮತ್ತು ಜಪಾನಿನ ಯೆನ್, ಈ
ಪಟ್ಟಿಯಲ್ಲಿವೆ.
ಮೀಸಲು ಕರೆನ್ಸಿಯ ಎಲ್ಲ
ಮಾನದಂಡಗಳು ಸದ್ಯಕ್ಕೆ ಚೀನಾದ
ಕರೆನ್ಸಿಗೆ ಅನ್ವಯವಾಗುವುದರಿಂದ, ಈ
ನಿರ್ಧಾರಕ್ಕೆ ಬರಲಾಗಿದೆ ಎಂದು 188 ದೇಶಗಳನ್ನು
ಪ್ರತಿನಿಧಿಸುವ ಐಎಂಎಫ್ ತಿಳಿಸಿದೆ. 'ದೇಶದ
ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು
ಚೀನಾ ಸರ್ಕಾರ
ಕೈಗೊಂಡ ಕ್ರಮಗಳನ್ನು
ಗೌರವಿಸುವ ವಿಧಾನವೂ ಆಗಿದೆ' ಎಂದು
ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕಿ
ಕ್ರಿಸ್ಟೀನ್ ಲಗಾರ್ಡ್ ಬಣ್ಣಿಸಿದ್ದಾರೆ.
ಮೀಸಲು ಕರೆನ್ಸಿ: ಮೀಸಲು
ಕರೆನ್ಸಿ ಎನ್ನುವ ಪರಿಕಲ್ಪನೆಯನ್ನು ಐಎಂಎಫ್
1969ರಲ್ಲಿ ಜಾರಿಗೆ ತಂದಿದೆ.
ಇದಕ್ಕೂ ಮುನ್ನ, ವಿಶ್ವ ವ್ಯಾಪಾರ ಹೆಚ್ಚಿಸುವ
ವಿಷಯದಲ್ಲಿ ಅಂತರರಾಷ್ಟ್ರೀಯ
ಸಮುದಾಯವು ಹಲವಾರು ನಿರ್ಬಂಧಗಳನ್ನು
ಎದುರಿಸಬೇಕಾಗಿ ಬಂದಿತ್ತು. ವ್ಯಾಪಾರ
ಉದ್ದೇಶಕ್ಕೆ ಬಳಸುತ್ತಿದ್ದ ಚಿನ್ನ ಮತ್ತು ಡಾಲರ್
ಸೀಮಿತ ಪ್ರಮಾಣದಲ್ಲಿ ಲಭ್ಯ
ಇದ್ದವು. ಈ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳಲು ಐಎಂಎಫ್,
ಕರೆನ್ಸಿಗಳ ಮೀಸಲು ಸಂಪತ್ತು
ವ್ಯವಸ್ಥೆಯನ್ನು ಜಾರಿಗೆ ತಂದಿತು.
ಇದೊಂದು
ಅಂತರರಾಷ್ಟ್ರೀಯ
ಮೀಸಲು ಸಂಪತ್ತು ಆಗಿದೆ.
ಅಗತ್ಯದ ಸಂದರ್ಭಗಳಲ್ಲಿ ಸರ್ಕಾರದ
ಮಟ್ಟದಲ್ಲಿ ಈ ಕರೆನ್ಸಿಗಳನ್ನು ಬಳಸಬಹುದಾಗಿದೆ.
ಮೀಸಲು ಕರೆನ್ಸಿಯ ಸ್ವರೂಪವನ್ನು ಪ್ರತಿ
ಐದು ವರ್ಷಕ್ಕೊಮ್ಮೆ
ಪರಾಮರ್ಶಿಸಲಾಗುತ್ತಿದೆ.
ಜಾಗತಿಕ ವ್ಯಾಪಾರದ ಹಣಕಾಸು ವಹಿವಾಟಿನಲ್ಲಿ
ಯುಆನ್ 2013ರಲ್ಲಿ ಜಪಾನಿನ ಕರೆನ್ಸಿ ಯೆನ್
ಹಿಂದಿಕ್ಕಿ, ವಿಶ್ವದ 2ನೆ ಕರೆನ್ಸಿಯಾಗಿ
ಮಾನ್ಯತೆ ಪಡೆದಿದೆ.
ಇನ್ನಷ್ಟು ಅಪಮೌಲ್ಯ ?
ಐಎಂಎಫ್ನ ಮೀಸಲು ಕರೆನ್ಸಿಗಳ
ಸಾಲಿಗೆ ಸೇರಿದ ಚೀನಾದ ಯುಆನ್ ಇನ್ನಷ್ಟು
ಅಪಮೌಲ್ಯಗೊಳ್ಳಲಿದೆ ಎಂದು
ಭಾರತೀಯ ರಿಸರ್ವ್ ಬ್ಯಾಂಕ್
ಗವರ್ನರ್ ರಘುರಾಂ ರಾಜನ್
ಅಂದಾಜಿಸಿದ್ದಾರೆ. ಭಾರತದ ಕರೆನ್ಸಿ ರೂಪಾಯಿಯು
ಈ ಬಗೆಯಲ್ಲಿ
ಅಂತರರಾಷ್ಟ್ರೀಕರಣಗೊಳ್ಳುವ
ಸಾಧ್ಯತೆಯನ್ನು ಅವರು ತಳ್ಳಿ ಹಾಕಿದ್ದಾರೆ.
ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ
ಚೀನಾದ ಆರ್ಥಿಕತೆಯನ್ನು
ಸಮನ್ವಯಗೊಳಿಸುವ ನಿಟ್ಟಿನಲ್ಲಿ
ಇದೊಂದು ಮಹತ್ವದ
ಮೈಲಿಗಲ್ಲು ಆಗಿದೆ.- ಕ್ರಿಸ್ಟೀನ್ ಲಗಾರ್ಡ್,
ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023