ಜನವರಿಯಿಂದ ಜಾರಿಯಾಗಲಿದೆ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ:*

ಬೆಂಗಳೂರು, ಡಿ.18-ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ,
ಅನುದಾನಿತ ಸಂಸ್ಥೆಗಳ ನೌಕರರಿಗೆ 2016ನೆ ವರ್ಷದ ಗಳಿಕೆ
ರಜೆಯನ್ನು ಅದ್ಯರ್ಪಿಸಿ (ಹಿಂ ದಿರುಗಿಸಿ), ರಜಾ ವೇತನಕ್ಕೆ
ಸಮನಾದ ನಗದೀಕರಣ ಸೌಲಭ್ಯವನ್ನು ಕಲ್ಪಿಸಿ ರಾಜ್ಯ
ಸರ್ಕಾರ ಆದೇಶ ಹೊರಡಿಸಿದೆ. ಇದು ಜನವರಿ 1
ರಿಂದ ಜಾರಿಗೆ ಬರಲಿದೆ. 2016ನೇ ವರ್ಷದಲ್ಲಿ ಗರಿಷ್ಠ 15
ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅದ್ಯರ್ಪಿಸಿ ರಜಾ
ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು
ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಸರ್ಕಾರಿ ಅಧಿಕಾರಿ ಮತ್ತು
ನೌಕರರು ಒಂದು ತಿಂಗಳು ಮುಂಚೆ ನೋಟಿಸ್
ನೀಡಿ ಈ ಸೌಲಭ್ಯ ಪಡೆಯಬೇಕಿದೆ. ಡಿ ಗ್ರೂಪ್ ನೌಕರರು
2016ನೆ ಕ್ಯಾಲೆಂಡರ್ ವರ್ಷದ ಯಾವುದೇ ತಿಂಗಳಿನಲ್ಲಿ
ಸ್ವಇಚ್ಛೆಯಂತೆ ರಜೆ ನಗದೀಕರಣ ಸೌಲಭ್ಯ
ಪಡೆಯಬಹುದು.
ಎ, ಬಿ ಮತ್ತು ಸಿ ಗುಂಪಿನ ನೌಕರರು ಏಪ್ರಿಲ್ನಿಂದ
ಡಿಸೆಂಬರ್ ನಡುವಿನ ಯಾವುದೇ ತಿಂಗಳಿನಲ್ಲಿ ರಜೆ
ನಗದೀಕರಣ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.
ಷರತ್ತುಗಳು ಏನೇ ಇದ್ದರೂ ಜನವರಿಯಿಂದ ಮಾರ್ಚ್ ನಡುವೆ
ವಯೋನಿವೃತ್ತಿ ಹೊಂದುವ ಎಲ್ಲಾ ಅರ್ಹ ಅಧಿಕಾರಿ
ಮತ್ತು ನೌಕರರು ನಿವೃತ್ತಿಯಾಗುವ ತಿಂಗಳಲ್ಲಿ
ನಗದೀಕರಣ ಪ್ರಯೋಜನ ಪಡೆಯುವ ಅವಕಾಶವಿದೆ.
ನಾಗರಿಕ ಸೇವಾ ನಿಯಮಗಳ ಅನ್ವಯ ಗಳಿಕೆ ರಜೆ
ನಗದೀಕರಣ ನಿಯಂತ್ರಣಕ್ಕೆ
ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗಲಿವೆ. ಈ
ಆದೇಶವು ಈಗಾಗಲೇ ಇಂಥ ಸೌಲಭ್ಯ ವಿಸ್ತರಣೆಯಾಗಿರುವ
ಸರ್ಕಾರದ ಸಹಾಯ ಅನುದಾನ ಪಡೆಯುವ ಸಂಸ್ಥೆಗಳ ನೌಕರರಿಗೂ
ಅನ್ವಯವಾಗಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023