Drop


Sunday, December 13, 2015

ಹಿರಿಯ ನಟ ದಿಲೀಪಕುಮಾರಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ:*


ಬೆಂಗಳೂರು, ಡಿ.೧೪-ಭಾರತೀಯ
ಚಿತ್ರರಂಗದ ದಿಗ್ಗಜ ಹಾಗೂ ಹಿರಿಯ ನಟ
ದಿಲೀಪ್ಕುಮಾರ್ ಅವರಿಗೆ ಕೇಂದ್ರ
ಗೃಹ ಸಚಿವ ರಾಜನಾಥ್ ಸಿಂಗ್
ಪದ್ಮವಿಭೂಷಣ ಪ್ರಶಸ್ತಿ ನೀಡಿ
ಗೌರವಿಸಿದ್ದಾರೆ. ೧೯೯೩ರಲ್ಲಿ
ಅತ್ಯುನ್ನತವಾದ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಪಡೆದ ೯೨ರ ಹರೆಯದ ದಿಲೀಪ್ಕುಮಾರ್
ಅವರನ್ನು ಪಾಕಿಸ್ತಾನ ಕೂಡ
ಪ್ರತಿಭಾವಂತ ನಟ ಎಂದು ಗೌರವಿಸಿದೆ.
ಇಂದು ಮುಂಬೈಯಲ್ಲಿ ದೇಶದ
ಎರಡನೇ ಅತ್ಯುತ್ತಮ ಪ್ರಶಸ್ತಿಯಾದ
ಪದ್ಮವಿಭೂಷಣವನ್ನು ಕೇಂದ್ರ
ಗೃಹ ಸಚಿವ ರಾಜನಾಥ್ಸಿಂಗ್ ಪ್ರದಾನ
ಮಾಡಿದರು. ಮುಖ್ಯಮಂತ್ರಿ
ದೇವೇಂದ್ರ ಫಡ್ನವೀಸ್ ಮತ್ತಿತರ
ಗಣ್ಯರು ಹಾಜರಿದ್ದರು.
ದಿಲೀಪ್ ಕುಮಾರ್ ಅವರಿಗೆ
ಪದ್ಮಭೂಷಣ ಸೇರಿದಂತೆ
ಹಲವಾರು ಪ್ರಶಸ್ತಿಗಳು ಈಗಾಗಲೇ
ಲಭ್ಯವಾಗಿವೆ. ೮ ಬಾರಿ ಫಿಲಂಫೇರ್
ಪ್ರಶಸ್ತಿ ಸೇರಿದಂತೆ ಅತಿ ಹೆಚ್ಚು
ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟ
ಎಂಬ ಹೆಗ್ಗಳಿಕೆ ದಿಲೀಪ್ಕುಮಾರ್
ಅವರದು.